ಕಳೆದ 888 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು
1 min readಕಾರಂಜಾ ಸಂತ್ರಸ್ಥರನ್ನು ಪರಾಮರ್ಶಿಸಿದ ವಿಜಯೇಂದ್ರ
ಕಳೆದ 888 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು
ಆ ಅಣೆಕಟ್ಟು ನಿರ್ಮಾಣವಾಗಿ ಅರ್ಧ ಶತಮಾನವೇ ಕಳೆದಿದೆ. ಅಂದು ಅಣೆಕಟ್ಟಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಇಂದಿಗೂ ಪರಿಹಾರ ಸಂಪೂರ್ಣವಾಗಿ ಸಿಕ್ಕಿಲ್ಲ. ಇದರಿಂದ ಬೇಸತ್ತ ರೈತರು ಕಳೆದ 888 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಅವರ ಸಮಸ್ಯೆ ಆಲಿಸುವ ಪ್ರಯತ್ನವನ್ನೂ ಆಳುವ ಸರ್ಕಾರಗಳು ಮಾಡದಿರುವುದು ವಿಪರ್ಯಾಸವೇ ಸರಿ.
ಕಾರಂಜಾ ಅಣೆಕಟ್ಟು ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರು ತಮಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಸಂಪೂರ್ಣವಾಗಿ ನೀಡುವಂತೆ ಆಗ್ರಹಿಸಿ ಕಳೆದ ೮೮೮ ದಿನಗಳಿಂದ ನಿರಂತರ ಹೋರಾಟ ನಡೆಸುತತಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಬಗಹರಿಯದ ಹಿನ್ನಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವಿಜೇಂದ್ರ ಎದುರಿನಲ್ಲಿಯೇ ಕೊರಳಿಗೆ ಹಗ್ಗ ಹಾಕಿ ಆತ್ಮಹತ್ಯೆ ಅಣಕು ಪ್ರದರ್ಶನ ಮಾಡಿ ರೈತರು ಗಮನ ಸೆಳೆದ ಘಟನೆ ಇಂದು ನಡೆಯಿತು.
ಕಾರಂಜಾ ಸಂತ್ರಸ್ಥರು ಕಳೆದ 888 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವಿಜೆಂದ್ರ ಅವರು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ವಿಜಯೇಂದ್ರ ಅವರ ಮುಂದೆಯೇ ರೈತರು ಕೊರಳಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಅಣಕು ಪ್ರದರ್ಶನ ಮಾಡಿದರು. ನಂತರ ರೈತರ ಸಮಸ್ಯೆ ಅಲಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ ಪರಿಹರಿಸುವ ಭರವಸೆ ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಸುಧೀರ್ಘ ಹೋರಾಟ ಮಾಡುತ್ತಿರುವ ಕಾರಂಜಾ ಸಂತ್ರಸ್ಥ ರೈತರು, ಕಾರಂಜಾ ಆಣೆಕಟ್ಟು ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡು 50 ವರ್ಷವಾದ್ರು ಸಂಪೂರ್ಣ ಪರಿಹಾರ ಬಾರದ ಹಿನ್ನಲೆ ಸತತ ಹೋರಾಟ ನಡೆಸುತ್ತಿದ್ದಾರೆ. ಬೀದರ್ ಜಿಲ್ಲೆ ಯಲ್ಲಿ ಇಬ್ಬರು ಸಂಪುಟ ದರ್ಜೆ ಸಚಿವರಿದ್ದಾರೆ, ಇಬ್ಬರಿಗೂ ಮನವಿ ಸಲಿಸಿದರೂ ಈವರೆಗೆ ಸಮಸ್ಯೆ ಬಗೆಹರಿಸಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.