ಸಮಯಕ್ಕೆ ಬಾರದ ಬಸ್, ವಿದ್ಯಾರ್ಥಿಗಳಿಂದ ಧರಣಿ
1 min readಸಮಯಕ್ಕೆ ಬಾರದ ಬಸ್, ವಿದ್ಯಾರ್ಥಿಗಳಿಂದ ಧರಣಿ
ಮಂಚೇನಹಳ್ಳಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ, ಒಂದು ವೇಳೆ ಬಂದರೂ ಗೌರಿಬಿದನೂರಿನಲ್ಲೆ ಭರ್ತಿಯಾಗಿ ಬರುವ ಕಾರಣ ಮಂಚೇನಹಳ್ಳಿಯಲ್ಲಿ ವಿದ್ಯಾರ್ಥಿಗಳು ಕಾಲಿಡಲೂ ಜಾಗವಿಲಲ್ದೆ ಪ್ರತಿನಿತ್ಯ ಪರದಾಟ, ಶಾಲಾ ಕಾಲೇಜುಗಳಿಗೆ ಸಕಾಲಕ್ಕೆ ವಿದ್ಯಾರ್ಥಿಗಳು ತಲುಪಲು ಸಾಧ್ಯವಾಗದೆ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಇದರಿಂದ ರೋಸಿಹೋದ ವಿದ್ಯಾರ್ಥಿಗಳು ಇಂದು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಸಕಾಲಕ್ಕೆ ಬಸ್ ಕಲ್ಪಿಸುವಂತೆ ಆಗ್ರಹಿಸಿ ಮಂಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಈ ವೇಳೆ ಮಾತನಾಡಿದ ವಿನಯ್, ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಈ ಸಂಬAಧ ಸಂಬ0ಧಿಸಿದ ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರೂ ಉಪಯೋಗವಿಲ್ಲ. ಇನ್ನು ಸಕಾಲಕ್ಕೆ ಬಸ್ ಬಾರದ ಬಗ್ಗೆ ಸಂಬ0ಧಿಸಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಪ್ರತಿಕ್ರಿಯೆ ನೀಡುವವರೇ ಇಲ್ಲವಾಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಬೆಳಗ್ಗೆ 7 ಗಂಟೆಯಿ0ದ ಬಸ್‌ಗಾಗಿ ಕಾದರೂ 10 ಗಂಟೆಯಾದರೂ ಬಸ್ ಬಂದಿಲ್ಲ. ಇದರಿಂದ ರೋಸಿಹೋಗಿ ಪ್ರತಿಭಟನೆ ಮಾಡುತ್ತಿದ್ದು, ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತಡವಾಗಿ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ತಮಗೆ ಇಷ್ಟ ಬಂದಾಗ ಬರುವ ಬಸ್ಸು ಗೌರಿಬಿದನೂರಿನಲ್ಲೆ ಭರ್ತೀಯಾಗಿ ಬರುತ್ತವೆ. ಇದರಿಂದ ವಿಧಿ ಇಲ್ಲದೆ ಡೋರ್‌ನಲ್ಲಿ ನೇತಾಡಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಆಯ ತಪ್ಪಿ ಬಿದ್ದರೆಯಾರು ಹೊಣೆ ಎಂದು ಪ್ರಶ್ನಿಸಿದರು.
ಇನ್ನು ಗೌರಿಬಿದನೂರು ಚಿಕ್ಕಬಳ್ಳಾಪುರ ಮಾರ್ಗದ ಈರದಿಮ್ಮಮ್ಮನ ಕಣಿವೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಕೆಲ ಬಸ್‌ಗಳು ನಿಂತುಹೋಗುತ್ತವೆ. ಆಗ ರಸ್ತೆಯಲ್ಲಿ ಬರುವ ಸಾರ್ವಜನಿಕರ ಕಾರು, ಬೈಕ್ ಅಥವಾ ಇನ್ನಿತರ ವಾಹನಗಳಿಗೆ ಕೈ ಚಾಚಿ ನಿಲ್ಲಿಸಿ ಹೋಗಬೇಕಾದ ಸ್ಥಿತಿ ಎದುರಾಗಿದೆ. ಇನ್ನಾದರೂ ಸಂಬ0ಧಿಸಿದ ಅಧಿಕಾರಿಗಳು ಈ ಕುರಿತು ಗಮನ ಹರಿಸಿ, ಸರಿಯಾದ ಸಮಯಕ್ಕೆ ಬಸ್ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸಂಚಾರ ನಿಯಂತ್ರಕ ನಾಗೇಂದ್ರ ಕುಮಾರ್ ಮಾತನಾಡಿ, ಸಿಬ್ಬಂದಿ ಕೊರತೆ ಇರುವುದರಿಂದ ಈ ತೊಂದರೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳ ಬಳಿ ಚರ್ಚೆ ನಡೆಸಿ, ಕ್ರಮ ಕೈಗೊಂಡು ಸಮಯಕ್ಕೆ ಸರಿಯಾಗಿ ಬಸ್ ಕಲ್ಪಿಸುವುದಾಗಿ ಹೇಳಿದರು. ಪಿಎಸ್‌ಐ ಮೂರ್ತಿ ಮಧ್ಯಪ್ರವೇಶಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಮಯಕ್ಕೆ ಬಸ್ ಕಲ್ಪಿಸುವಂತೆ ಮಾಡುವುದಾಗಿ ಹೇಳಿ ಸಂಚಾರ ನಿಯಂತ್ರಣ ಮಾಡಿದರು.