14 ವರ್ಷಗಳಾದರು ರಸ್ತೆ ಅಗಿಲೀಕರಣದ ಪರಿಹಾರ ಇಲ್ಲ
1 min read14 ವರ್ಷಗಳಾದರು ರಸ್ತೆ ಅಗಿಲೀಕರಣದ ಪರಿಹಾರ ಇಲ್ಲ
ರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ಪರಿಹಾರ ಯಾವಾಗ?
ಗುಡಿಬಂಡೆ ಪಟ್ಟಣದ ಮುಖ್ಯರಸ್ತೆ ಕಿರಿಯದಾಗಿದ್ದ ಕಾರಣ ಸುಮಾರು 14ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಮಾಡಲಾಯಿತು. ಈ ವೇಳೆ ಮನೆ ಸೇರಿದಂತೆ ಆಸ್ತಿ ಕಳೆದುಕೊಂಡ ಸ್ಥಳೀಯರಿಗೆ ನಿವೇಶನ ನೀಡುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಮನೆ ಕಳೆದುಕೊಂಡು 14 ವರ್ಷ ಕಳೆದರೂ ಈವರೆಗೆ ಅವರಿಗೆ ನಿವೇಶನ ನೀಡಲೂ ಸರ್ಕಾರಕ್ಕೆ ಸಾಧ್ಯವಾಗದಿರುವುದು ವಿಪರ್ಯಾಸ.
ಕಳೆದ ೧೪ ವರ್ಷಗಳ ಹಿಂದೆ ಆಶ್ವಾಸನೆ ನೀಡಿ, ಮೂರು ಬಾರಿ ಗೆದ್ದು ಶಾಸಕರಾದ ಎಸ್‌ಎನ್ ಸುಬ್ಬಾರೆಡ್ಡಿ ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಕೇವಲ ಮಾತಿನಲ್ಲಿ ಜನರಿಗೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಟ್ಟಣ ಪಂಚಾಯತಿ ಸದಸ್ಯರು ಕೇವಲ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಮಾತ್ರ ಚರ್ಚೆ ಮಾಡುತ್ತಾರೆ, ಅವನ್ನು ಕಾರ್ಯಗತ ಮಾಡಲು ನಿವೇಶನ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ನೀಡಲು ಶಾಸಕರಾಗಲೀ, ಪಟ್ಟಣ ಪಂಚಾಯತಿ ಆಡಳಿತ ಮಂಡಳಿಯಾಗಲೀ ಮುಂದಾಗಿಲ್ಲ.
ಕೇವಲ ಸಭೆ ಸಮಾರಂಭದಲ್ಲಿ ಮಾತ್ರ ನಿವೇಶನ ನೀಡುವುದಾಗಿ ಹೇಳಿ, ಈವರೆಗೂ ರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ, ಮನೆ ನೀಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಮಟ್ಟದಲ್ಲೂ ಈ ಬಗ್ಗೆ ಚರ್ಚೆ ಮಾಡುವಂತೆ ಕೋರಿದರೂ ಜನಪ್ರತಿನಿಧಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಶಾಸಕರು ಆಡಳಿತ ಪಕ್ಷದ ಸದಸ್ಯರೇ ಆಗಿದ್ದರೂ ಗುಡಿಬಂಡೆ ಮುಖ್ಯ ರಸ್ತೆ ಅಗಲೀಕರಣದ ವೇಳೆ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ.