ರಕ್ತ ಚಂದನ ಕದಿಯಲು ಟಿಟಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧನ
1 min readರಕ್ತ ಚಂದನ ಕದಿಯಲು ಟಿಟಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧನ
ಚಿಕ್ಕಬಳ್ಳಾಪುರ ದಲ್ಲಿ ಟಿಟಿ ಕಳುವು ಮಾಡಿದ್ದ ತೀನ್ ಪರ್ತಿ ಪಕೃದ್ದಿನ್ ಬಂಧನ
ಮೇ 31 ರಂದು ಚಿಕ್ಕಬಳ್ಳಾಪುರ ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌದ ಕಾರ್ ಸ್ಟಾಂಡ್ ನಲ್ಲಿ ನಿಲ್ಲಿಸಿದ್ದ ಚಿಕ್ಕಬಳ್ಳಾಪುರ ಬಂಗಾರಿ ಎನ್ನುವವರಿಗೆ ಸೇರಿದ ಕೆಎ 04 ಎಎ 1638 ಟೆಂಪೋ ಟ್ರಾವೆಲ್ಸ್ ಗಾಡಿಯನ್ನ ಅಂದು ರಾತ್ರಿ ಇನ್ಮೋವಾ ಕಾರಿನಲ್ಲಿ ಬಂದು ಹೋಗಿರುವ ಸಿಸಿ ವೀಡಿಯೋ ಸಿಕ್ಕಿತ್ತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವತ್ತಿನಿಂದ ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರು ಕೊನೆಗೂ ಕಳ್ಳನನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ, ಇನ್ನು ಸಿಕ್ಕಿಬಿದ್ದಿರುವ ಕಳ್ಳನ ಹೆಸರು ತೀನ್ ಪರ್ತಿ ಪಕೃದ್ದಿನ್ ಇವನೊಬ್ಬ ಅಂತರರಾಜ್ಯ ಕಳ್ಳನಾಗಿದ್ದಾನೆ ಇವರು ಅಸಲಿ ಕಸಬು ರಕ್ತ ಚಂದನ ಕದ್ದು ಅಕ್ರಮವಾಗಿ ಮಾರಾಟ ಮಾಡೋದು, ಇವನ ಮೇಲೆ ಬರೋಬ್ಬರಿ 72 ಕೇಸುಗಳಿವೆ ಎಂದು ತಿಳಿದು ಬಂದಿದೆ 72 ಕೇಸುಗಳಲ್ಲಿ 70 ಕೇಸುಗಳು ರಕ್ತಚಂದನ ಕದ್ದು ಮಾರಾಟ ಮಾಡಿದ್ದೆ ಎನ್ನುವುದಾಗಿದ್ದು ಕೊಟ್ಯಾಂತರ ರುಪಾಯಿ ವಹಿವಾಟು ಇವನ ಕಳ್ಳತನದಲ್ಲಿ ಪತ್ತೆಯಾಗಿದೆ ಪಕೃದ್ದೀನ್ ಎನ್ನುವವನು ಆಂದ್ರ ಪ್ರದೇಶದ ಕಡಪ ಜಿಲ್ಲೆ ಚಾಪಡ್ ಮಂಡಲ್ ಕಾದರ್ ಪಲ್ಲಿ ಎಂದು ಗೊತ್ತಾಗಿದೆ ಇವನೆ ಕಿಂಗ್ ಪಿನ್ ಆಗಿದ್ದು ಇವನ ಜೊತೆಗೆ ಬಂದಿದ್ದ ಮತ್ತೊಬ್ಬ ತಲೆಮರಿಸಿಕೊಂಡಿದ್ದಾನೆ. ತಿರುಪತಿಯಲ್ಲಿ ಸಿಕ್ಕಿಬಿದ್ದ ಖದೀಮ ಪಕೃದ್ದೀನ್ ಹಿಡಿದ ಪೊಲೀಸರು ಇಂದು ಚಿಕ್ಕಬಳ್ಳಾಪುರ ಕ್ಕೆ ಕರೆತಂದು ಸ್ಥಳ ಮಹಜರು ಮಾಡಿದರು.
ಅಂದು ಕಳ್ಳತನವಾಗಿದ್ದ ಟಿಟಿಯಿಂದ ಇಡೀ ಬಸ್ ನಿಲ್ದಾಣದ ಕಾರು ಚಾಲಕರು ಬೆಸ್ತು ಬಿದ್ದಿದ್ದರು ಚಿಕ್ಕಬಳ್ಳಾಪುರ ಪೊಲೀಸರ ಕಾರ್ಯಾಚರಣೆಗೆ ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಕಳ್ಳನ ವಿಚಾರಣೆ ಮುಂದುವರೆದಿದೆ ತನಿಖೆ ಪೂರ್ತಿಯಾಗುವ ವೇಳೆಗೆ ಇವನಿಂದ ಇನ್ಯಾರಾರು ಮೋಸ ಹೋಗಿದ್ದಾರೆ ಎಲ್ಲೆಲ್ಲಿ ಕಳವು ಮಾಡಿದ್ದಾರೆ ಯಾರ್ಯಾರು ಈ ಪ್ರಕರಣದಲ್ಲಿ ಬಾಗಿಯಾಗಿದ್ದಾರೆ ಅನ್ನೋ ಫುಲ್ ಡೀಟೈಲ್ಸ್ ಹೊರಬೀಳಲಿದೆ ಈ ಖತರ್ನಾಕ್ ಬಂದನದಿ0ದ ಪೊಲೀಸರ ಮೇಲೆ ಜನರಿಗೆ ಮತ್ತಷ್ಟು ನಂಬಿಕೆ ಮೂಡಿದಂತಾಗಿದೆ