ಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್

ಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ

ಬಾಗೇಪಲ್ಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಸಂಭ್ರಮ

December 27, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾದ ಪುಂಡರ ಹಾವಳಿ

1 min read

ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾದ ಪುಂಡರ ಹಾವಳಿ
ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಗುರಾಯಿಸಿದ ಎಂದು ಎರಡು ಗುಂಪುಗಳ ಹೊಡೆದಾಟ

ಚಿಕ್ಕಬಳ್ಳಾಪುರದಲ್ಲಿ ಪುಂಡರ ಹಾವಳಿ ಹೆಚ್ಚಾಗುತತಿದ್ದು, ಮರ್ಯಾದಸ್ಥರು ಹೊರ ಬರಲು ಹೆದರುವ ಸ್ಥಿತಿ ನಿರ್ಮಾಣವಾಗುತ್ತಿದೆಯೇ? ಇಂತಹ ಅನುಮಾನ ಮೂಡಲು ಕಾರಣ ಭಾನುವಾರ ರಾತ್ರಿ ನಡೆದಿರುವ ಘಟನೆಯೇ ಆಗಿದೆ. ಹಾಗಾದರೆ ಎಲ್ಲ ಮತ್ತು ಏನು ನಡೆಯಿತು ಅನ್ನೋದನ್ನು ನೀವೇ ನೋಡಿ.

ಚಿಕ್ಕಬಳ್ಳಾಪುರದಲ್ಲಿ ಮೊದಲಿನಿಂದಲೂ ಕಾನೂನು ಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಈವರೆಗೂ ನಡೆದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಘಟನೆಗಳು ಆತಂಕ ಸೃಷ್ಟಿ ಮಾಡುತ್ತಿದ್ದು, ಇಂತಹ ಪುಂಡಾಟಗಳಿಗೆ ಆರಂಭದಲ್ಲಿಯೇ ಪೊಲೀಸರು ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ.

ಕುಡಿದ ಮತ್ತಿನಲ್ಲಿ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಹೊಡೆದಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಸಿವಿವಿ ಕ್ಯಾಂಪಾಸ್ ಬಳಿ ನಡೆದಿದೆ. ಭಾನುವಾರ ರಾತ್ರಿ ಸುಮಾರು 8.30 ರ ಸಮಯದಲ್ಲಿ ಘಟನೆ ನಡೆದಿದ್ದು, ಕ್ಯಾಂಪಾಸ್ ಬಳಿ ಇರುವ ಖಾಸಾಗಿ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪೊ0ದು ಅಲ್ಲೆ ಮತ್ತೊಂದು ಕಡೆ ಕುಡಿಯುತ್ತಿದ್ದ ಗುಂಪಿನಲ್ಲಿದ್ದವರನ್ನ ಗುರಾಯಿಸಿದ ಎಂಬ ವಿಚಾರಕ್ಕೆ ಹೊಡೆದಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಅಲ್ಲಿ ಗಲಾಟೆ ನಡೆಯುತ್ತಿರುವ ಮಾಹಿತಿ ಪಡೆದ ಸ್ಥಳಿಯ ಗ್ರಾಮದ ಯುವಕರು ಕೈಯಲ್ಲಿ ರಾಡ್ ಹಿಡಿದು ಹೊಡೆಯಲು ಹೊಗಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಸುಮಾರು 30 ನಿಮಿಷ ನಡೆದ ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ನಂದಿ ಗಿರಿಧಾಮ ಪೋಲಿಸರು ಹಾಗೂ ಹೊಯ್ಸಳ ಸಿಬ್ಬಂದಿ ದೌಡಾಯಿಸಿ ಯುವಕರನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಗಲಾಟೆ ಇಷ್ಟು ಗಂಭೀರತೆ ಪಡೆಯಲು ಕಾರಣವೇನು, ಅಲ್ಲಿ ಗಲಾಟೆ ಮಾಡಿದ ಎರಡೂ ಗುಂಪುಗಳು ಯಾವುವು ಎಂಬಿತ್ಯಾದಿ ವಿಚಾರಗಳು ಇನ್ನೂ ತಿಳಿಯಬೇಕಿದೆ.

ಇತ್ತೀಚಿಗೆ ನಗರಸಭೆಯಲ್ಲಿ ಸಾಮಾನ್ಯ ಸಭೆ ನಡೆದ ವೇಳೆ ನಗರಸಭಾ ಸದಸ್ಯರೊಬ್ಬರು ನಗರದ ಕೆಲ ಕಾಂಡಿಮೆ0ಟ್ಸ್ನಲ್ಲಿ ಗಾಂಜಾ ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಗಾಂಜಾ ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ನಗರಸಭಾ ಸದಸ್ಯರು ಹೇಳಿದ್ದು, ಇದು ನಿಜವೇ ಆಗಿದ್ದರೆ, ಗಾಂಜಾ ಮತ್ತಿನಲ್ಲಿಯೇ ಭಾನುವಾರ ರಾತ್ರಿ ಈ ಮಾರಾ ಮಾರಿ ನಡೆದಿರಬಹುದೇ ಎಂಬ ಶಂಕೆ ಮೂಡಿದೆ.

ಯುವ ಪೀಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಾದಕ ವಸ್ತುಗಳಿಗೆ ದಾಸರಾಗಿ, ವ್ಯಸನಿಗಳಾಗುತ್ತಿರುವ ಬಗ್ಗೆ ಆತಂಕ ಎದುರಾಗಿದ್ದು, ಈವರೆಗೆ ನಗರ ಪ್ರದೇಶಗಳಿಗೆ ಮತ್ರಾ ಸೀಮಿತವಾಗಿದ್ದ ಈ ಮಾದಕ ವಸ್ತುಗಳು ಚಿಕ್ಕಬಳ್ಳಾಪುರಕ್ಕೂ ಕಾಲಿಟ್ಟಿವೆ ಎಂಬುದು ಆತಂಕದ ವಿಚಾರವಾಗಿದೆ. ಹಾಗಾಗಿ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಗಾಂಜಾ ಸಿಗರೇಟ್ ಮಾರಾಟ ಮಾಡುವ ಕಾಂಡಿಮೆ0ಟ್ಸ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮಾದಕ ವ್ಯಸನಿಗಳಾಗುವ ಯುವಪೀಳಿಗೆಯನ್ನು ರಕ್ಷಿಸಬೇಕಿದೆ.

ಅಲ್ಲದೆ ಗಾಂಜಾ ಮತ್ತಿನಲ್ಲಿಯೇ ಇಂತಹ ಮಾರಾ ಮಾರಿಗಳು ನಡೆದು, ಅವು ತೀವ್ರ ಅಪರಾಧ ಪ್ರಕರಣಗಳಾಗಿ ಬದಲಾಗುವ ಆತಂಕವೂ ಇದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಕಾಂಡಿಮೆ0ಟ್ಸ್ ಮೇಲೆ ನಿಗಾ ಇಡಬೇಕಾದ ಅಗತ್ಯವಿದೆ ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ. ಅಲ್ಲದೆ ಭಾನುವಾರ ರಾತ್ರಿ ಗಲಾಟೆ ನಡೆದ ಸ್ಥಳದ ಅಕ್ಕಪಕ್ಕದಲ್ಲಿದ್ದ ಅಂಗಡಿಯವರು ಯುವಕರು ಕುಡಿದ ಮತ್ತಿನಲ್ಲಿ ಗಲಾಟೆ ಆಗಾಗ ನಡೆಯುತ್ತಿರುತ್ತದೆ, ಚಿಕ್ಕಬಳ್ಳಾಪುರ ದಲ್ಲಿ ಪುಡರ ಹಾವಳಿ ನಿಯಂತ್ರಿಸಲು ಪೊಲೀಸರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *