ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಹೋಟೆಲ್‌ನಲ್ಲಿಯೇ ನೇಣಿಗೆ ಶರಣಾದ ವ್ಯಕ್ತಿ

1 min read

ಹೋಟೆಲ್‌ನಲ್ಲಿಯೇ ನೇಣಿಗೆ ಶರಣಾದ ವ್ಯಕ್ತಿ

ಮದ್ದೂರು ಮೂಲಕ ನಂದಗೌಡ ಮೃತ ಯುವಕ

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ

ಹೋಟೆಲ್ ಮಾಲೀಕನೊಬ್ಬ ತನ್ನ ಹೋಟೆಲ್‌ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿರುವ ಎಚ್‌ಪಿ ಪೆಚ್ರೋಲ್ ಬಂಕ್ ಮುಂಭಾಗದಲ್ಲಿದ್ದ ರಘು ಮಿಲಿಟರಿ ಹೋಟೆಲ್ ಮಾಲೀಕ ೪೦ ವರ್ಷದ ನಂದಗೌಡ ಮೃತ ವ್ಯಕ್ತಿಯಾಗಿದ್ದು, ನೆನ್ನೆ ಹೋಟೆಲ್ ಬಂದ್ ಮಾಡಿದ ನಂತರ ಹೋಟೆಲ್‌ನಲ್ಲಿಯೇ ಮಲಗಿದ್ದ ನಂದಗೌಡ ನೇಣಿಗೆ ಶರಣಾಗಿರುವುದು ಇಂದು ಬೆಳಕಿಗೆ ಬಂದಿದೆ. ಆದರೆ ಸಾವಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಮೃತ ನಂದಗೌಡ ಮಂಡ್ಯ ಜಿಲ್ಲೆಯ ಮದ್ದೂರು ಮೂಲದವರೆಂದು ತಿಳಿದುಬಂದಿದ್ದು, ಚಿಕ್ಕಬಳ್ಳಾಪುರದಲ್ಲಿ ಕಳೆದ ಹಲವು ದಿನಗಳಿಂದ ಮಿಲಟರಿ ಹೋಟೆಲ್ ನಡೆಸಿಕೊಂಡಿದ್ದ ಎನ್ನಲಾಗಿದೆ. ಮೃತನಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದು, ಮನೆಯಲ್ಲಿ ಪತ್ನಿಯೊಂದಿಗೆ ಜಗಳವೇ ಆತ್ಮಹತ್ಯೆಗೆ ಕಾರಣವಾ, ಇಲ್ಲವೇ ಸಾಲಗಳಿಂದ ಆತ್ಮಹತ್ಯೆಗೆ ಶರಣಾದನೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೋಟೆಲ್‌ನಲ್ಲಿದ್ದ ಮೃತದೇಹವನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಶವಪರೀಕ್ಷೆ ನಡೆಸಲಿದ್ದು, ಈ ಸಂಬ0ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಮೃತ ನಂದಗೌಡ ಕೈ ಸಾಲ ಪಡೆದಿದ್ದ ಎನ್ನಲಾಗಿದ್ದು, ಪತ್ನಿಯೊಂದಿಗೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಈ ಸಂಬ0ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *