ಬಡವರಿಗೆ ನಿವೇಶನ ನೀಡಲು ಕ್ರಮ ವಹಿಸಲು ಸೂಚನೆ
1 min readಬಡವರಿಗೆ ನಿವೇಶನ ನೀಡಲು ಕ್ರಮ ವಹಿಸಲು ಸೂಚನೆ
ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ.ಕೆ. ಸುಧಾಕರ್ ಅಭಿಮತ
ನಗರಸಭೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲು ಆಗ್ರಹ
ಚಿಕ್ಕಬಳ್ಳಾಪುರ ಶಾಸಕನಾಗಿ, ರಾಜ್ಯ ಸರ್ಕಾರದ ಸಚಿವನಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 4.500 ಕ್ಕೂ ಹೆಚ್ಚು ಉಚಿತ ನಿವೇಶನಗಳನ್ನು ಆಶ್ರಯ ಯೋಜನೆಯಡಿ ಬಡವರಿಗೆ ನೀಡಿದ್ದು, ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಕ್ಕು ಪತ್ರ ವಿತರಿಸಲಾಗಿದೆ. ಲಾನುಭವಿಗಳಿಗೆ ನಿವೇಶನ ಗುರ್ತಿಸಿ ಕೊಡುವುದು ನಗರ ಸಭೆಯ ಜವಾಬ್ದಾರಿಯಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.
ಬಡವರಿಗೆ ನಿವೇಶನ ನೀಡುವ ವಿಚಾರದಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರು ಹಾಗೂ ನಗರಸಭೆ ಸದಸ್ಯರು ಪಕ್ಷಾತೀತವಾಗಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನಗರಸಭೆಯಿಂದ ಪತ್ರ ರವಾನಿಸಬೇಕು ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು. ಉಪಚುನಾವಣೆಗಳಲ್ಲಿ ಮತದಾರರ ತೀರ್ಪು ಸಾಮಾನ್ಯ ಚುನಾವಣೆಗಳಲ್ಲಿ ಮತ್ತೊಂದು ರೀತಿ ಇರುತ್ತದೆ. ಬಿಜೆಪಿ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಅವಧಿಯಲ್ಲಿ ನಡೆದ ಉಪಚುನಾವಣೆಗಳಲ್ಲಿ ನಾವು 14 ಸ್ಥಾನ ಗಳಿಸಿದ್ದೇವು ಎಂದರು.
ರಾಜ್ಯದಲ್ಲಿ ಚುನಾವಣಾ ಪೂರ್ವ ದಿನಗಳಲ್ಲಿ ಕಾಂಗ್ರೆಸ್‌ನವರು ಸಾಧು ಸಂತರ ಕಾಲಿಗೆ ಬೀಳುತ್ತಾರೆ, ಸಾಧು ಸಂತರು ಅಭಿಪ್ರಾಯ ಹೇಳಿದರೆ ಅವರ ವಿರುದ್ಧ ಎಐಆರ್ ದಾಖಲಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಚಂದ್ರಶೇಖರ ಸ್ವಾಮೀಜಿಗಳು ಆಡಿರುವ ಮಾತಿನ ಬಗ್ಗೆ ನಾನು ಅರ್ಥೈಸುವುದಿಲ್ಲ, ಅದು ಅವರ ಅಭಿಪ್ರಾಯ. ಆದರೆ ಸಾಧು ಸಂತರ ವಿಚಾರದಲ್ಲಿ ಗೌರವಪೂರ್ಣವಾಗಿ ಯಾವುದೇ ಸರ್ಕಾರ ಆಗಲಿ ನಡೆದುಕೊಳ್ಳಬೇಕು ಎಂದರು.
ರಾಷ್ಟçಕವಿ ಕುವೆಂಪು ಅವರು ವಿಶ್ವಮಾನವ ಸಂದೇಶದಲ್ಲಿ ಹೇಳಿರುವಂತೆ ನಾಗರಿಕರು ಗುಡಿ ಗೋಪುರ ಮಂದಿರಗಳಿ0ದ ಹೊರಬರಬೇಕು, ಇದು ಸರ್ವ ಜನಾಂಗದ ಶಾಂತಿಯ ತೋಟ ಆಗಿದೆ. ರಾಜ್ಯದಲ್ಲಿ ಎಂದಿಗೂ ಮತೀಯ ಗಲಭೆಗಳು ಉಂಟಾಗುವುದಿಲ್ಲ. ನಾನು ಕೇವಲ ಬಿಜೆಪಿ ಸಂಸತ್ ಸದಸ್ಯ ಅಲ್ಲದೆ, ಕರ್ನಾಟಕ ಪ್ರತಿನಿಧಿಸುತ್ತಿರುವ ಸಂಸದನಾಗಿದ್ದು, ರಾಜ್ಯದ ಅಭಿವೃದ್ದಿ ವಿಚಾರದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ರಾಜಕೀಯವಾಗಿ ಒಗ್ಗಟ್ಟಿನ ವಿಚಾರದಲ್ಲಿ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅತ್ಯಂತ ಉತ್ತಮವಾಗಿ ವರ್ತಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಷ್ಟು ಸ್ಥಾನ ಪಡೆಯಲು ಈ ಒಗ್ಗಟ್ಟು ಕಾರಣವೆಂದರು. ಬಿಜೆಪಿಯಲ್ಲಿ ಬಣ ರಾಜಕೀಯ ನಡೆಯುತ್ತಿರುವುದನ್ನು ಒಪ್ಪಿಕೊಳ್ಳುತ್ತೇನೆ, ಇದು ಆಗಬಾರದು, ಈ ಬಗ್ಗೆ ರಾಷ್ಟç ನಾಯಕರು ಗಮನಹರಿಸುತ್ತಾರೆ ಎಂದರು.