ಗಡಿನಾಡಿನಲ್ಲಿ ಆರಂಭವಾಯಿತು ಚಳಿ ಆರ್ಭಟ
1 min readಗಡಿನಾಡಿನಲ್ಲಿ ಆರಂಭವಾಯಿತು ಚಳಿ ಆರ್ಭಟ
ಈ ವರ್ಷ ಮುಂಚೆಯೇ ಚಳಿ ಆರ್ಭಟ ಹೆಚ್ಚು
ಬೀದರ್‌ನಲ್ಲಿ ಕಳೆದ ಒಂದು ವಾರದಿಂದ ಚಳಿ ಹೆಚ್ಚಳವಾಗಿದೆ. ಮೈ ಕೊರೆಯುವ ಚಳಿಗೆ ಜನ ತತ್ತರಿಸುವಂತಾಗಿದೆ. 13 ಡಿಗ್ರಿಗೆ ತಾಪಮಾನ ಕುಸಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ ಹೆಚ್ಚು ಮುನ್ಸೂಚನೆ ಇರುವುದರಿಂದ ವಾತಾವರಣ ಮತ್ತಷ್ಟು ತಂಪಾಗುವ ನಿರೀಕ್ಷೆ ಇದೆ.
ಕರ್ನಾಟಕ ಕಿರೀಟ ಎಂದೇ ಖ್ಯಾತಿ ಪಡೆದಿರುವ ಬೀದರ್ ಜಿಲ್ಲೆಯಲ್ಲಿ ಚಳಿಯ ಆರ್ಭಟ ಶುರುವಾಗಿದೆ. ಕಳೆದ ಒಂದು ವಾರದಿಂದ ಮೈ ಕೊರೆಯುವ ಭಾರಿ ಚಳಿಗೆ ಗಡಿನಾಡು ಗಡ ಗಡನೆ ನಡಗುತ್ತಿದೆ. ಚಳಿಯಾರ್ಭಟಕ್ಕೆ ಜನತೆ ತತ್ತರಿಸಿ ಹೋಗಿದ್ದಾರೆ. ಪ್ರತಿ ವರ್ಷ ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಹೆಚ್ಚಾಗಿರಲಿದೆ. ಆದರೆ ಪ್ರಸ್ತುತ ಸಾಲಿನಲ್ಲಿ ಈಗಲೇ ಚಳಿ ಶುರುವಾಗಿದ್ದು, ಇದರಿಂದ ರಕ್ಷಿಸಿಕೊಳ್ಳಲು ಜನರು ಸ್ವೆಟರ್, ಕೈಗೆ ಗೌಸ್ ಹಾಗೂ ಮಂಕಿ ಟೋಪಿಗಳ ಮೊರೆ ಹೋಗಿದ್ದಾರೆ.
ಕಳೆದ ಒಂದು ವಾರದಿಂದ ವಿಪರೀತ ಚಳಿ, ತಂಪುಗಾಳಿಯ ಜತೆಗೆ ರಾತ್ರಿ ಮತ್ತು ಬೆಳಗಿನಜಾವದಲ್ಲಿ ಮಂಜು ಕಾಣಿಸಿಕೊಳ್ಳುತ್ತಿದೆ. ಮೈ ಕೊರೆಯುವ ಚಳಿಗೆ ಹೆಚ್ಚಿನ ಜನರ ಆರೋಗ್ಯ ಮೇಲೆ ವಿಪರೀತ ಪರಿಣಾಮ ಬಿರುತ್ತಿದ್ದೆ. ಶೀತ. ನೆಗಡಿ. ಜ್ವರ ಹೆಚ್ಚಾಗಲಿದೆ. ಕಳೆದ 2015ರಿಂದ ಈವರೆಗೆ ನವೆಂಬರ್ ತಿಂಗಳಲ್ಲಿ ಚಳಿ ಕಡಿಮೆ ಇರುತ್ತಿತ್ತು. ಆದರೆ ಈ ವರ್ಷ ಸರಾಸರಿಗಿಂತ ಕಡಿಮೆ ತಾಪಮಾನ ಇದೆ. ನವೆಂಬರ್ 28 ರಂದು 13 ಡಿಗ್ರಿ ತಾಪಮಾನವಿದ್ದು, ಇನ್ನೂ ಮೂರು ದಿನದಲ್ಲಿ ಚಳಿ ಹೆಚ್ಚಾಗಲಿದೆ..ಇದಕ್ಕಾಗಿ ಜನರು, ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಆರೋಗ್ಯದತ್ತ ಗಮನಹರಿಸಬೇಕು ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.