ವಕೀಲರ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳು
1 min readವಕೀಲರ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳು
ಸಾಮಾಜಿಕ ಸಂದೇಶ ಸಾರುವ ರಂಗೋಲಿ ಬಿಡಿಸಿ ಅರಿವು
ಕುಡಿತದಿಂದ ಸರ್ವನಾಶ, ಕುಡಿದು ವಾಹನ ಚಾಲನೆ ಮಾಡಬಾರದು ಎಂಬಿತ್ಯಾದಿ ಸಂದೇಶ ಸಾರುವ ರಂಗೋಲಿಗಳನ್ನು ವಕೀಲರು ಬಿಡಿಸಿ ಸಾಮಾಜಿಕ ಅರಿವು ಮೂಡಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಡಿ.೩ ರಂದು ನಡೆಯಲಿರುವ ವಕೀಲರ ದಿನಾಚರಣೆಯ ಹಿನ್ನಲೆ ವಕೀಲರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಮಹಿಳಾ ವಕೀಲರಷ್ಟೇ, ಪುರಷ ವಕೀಲರೂ ರಂಗೋಲಿ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅನವಶ್ಯಕವಾಗಿ ಸಾಮಾಜಿಕ ಜಾಲತಣಹಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು, ಭಾರತದ ಸಂವಿಧಾನದ ಮಹತ್ವ ಸಾರುವ ಅಂಶಗಳನ್ನೊಳಗೊ0ಡ ರಂಗೋಲಿ ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿಯುಳ್ಳ ರಂಗೋಲಿಗಳನ್ನು ವಕೀಲರು ಬಿಡಿಸಿ,ಬಣ್ಣ ಹಾಕಿದ್ದರು.
ಈ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಸರಸ್ವತಿ, ದ್ವಿತೀಯ ಸ್ಥಾನ ಅರುಣ ಮತ್ತು ತೃತೀಯ ಸ್ಥಾನವನ್ನು ಸುಜಾತ ಅವರು ಪಡೆದರು. ವಕೀಲರಾದ ಎಂ.ಎಲ್. ಎ.ನರಸಿಂಹ ಮೂರ್ತಿ, ಕುಡಿದು ವಾಹನ ಚಲಾಯಿಸಬಾರದು ಎಂದು ರಂಗೋಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಿಬ್ಬಂದಿ ವಿಭಾಗದಲ್ಲೂ ಹಲವಾರು ಮಂದಿ ಬಹುಮಾನ ಪಡೆದರು.
ಈ ಸಂದಭದಲ್ಲಿ ವಕೀಲರ ಸಂಘದ ಅಧ್ಯಕ್ಷ ನಂಜುಡಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಎಸ್ ರಾಮಾಂಜಿ, ಕಾರ್ಯದರ್ಶಿ ಪ್ರಸನ್ನ, ಹಿರಿಯ ವಕೀಲರಾದ ಎ.ಜಿ.ಸುಧಾಕರ್, ಪಯಾಜ್ ಭಾಷಾ, ಮುಸ್ತಾಕ್ ಅಹ್ಮದ್, ಕರುಣಾಸಾಗರ್ ರೆಡ್ಡಿ, ದತ್ತಾತ್ರೇಯ, ನರಸಿಂಹರೆಡ್ಡಿ, ನರೇಂದ್ರ, ಕಿರಿಯ ವಕೀಲರಾದ ತಿರುಮಲೇಶ್, ಶ್ರೀನಿವಾಸ್, ಸುಜಾತ, ಅರುಣ, ಬಿಂದುಕುಮಾರಿ, ಮಮತ, ಪ್ರಭು ನಾಗರಾಜ್ ಇದ್ದರು.