ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಸಾಮೂಹಿಕ ವಿವಾಹಗಳಿಂದಾಗಿ ಬಡವರಿಗೆ ಸಹಕಾರ

1 min read

ಸಾಮೂಹಿಕ ವಿವಾಹಗಳಿಂದಾಗಿ ಬಡವರಿಗೆ ಸಹಕಾರ

ಶಾಸಕ ಸುಬ್ಬಾರೆಡ್ಡಿ ಅವರಿಂದ ಡಿ.6ಕ್ಕೆ ಬಾಗೇಪಲ್ಲಿಯಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ

ಶಾಸಕ ಸುಬ್ಬಾರೆಡ್ಡಿ ಅವರಿಂದ 23ನೇ ವರ್ಷದ ಸೀಮೆ ಹಸು ಕೊಡುಗೆ

ಬಡತನ ಕಾರಣಕ್ಕಾಗಿ ಮಕ್ಕಳ ಮದುವೆ ಮಾಡಲು ಸಾಲದ ಶೂಲಕ್ಕೆ ಸಿಲುಕುವುದನ್ನು ತಪ್ಪಿಸಲು ಕಳೆದ 22 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದ್ದು, ನೂತನ ದಂಪತಿಗಳ ಜೀವನ ನಿರ್ವಹಣೆಗಾಗಿ ಉಚಿತವಾಗಿ ಈ ವರ್ಷವೂ ಸೀಮೆ ಹಸು ಕೊಡುಗೆಯಾಗಿ ನೀಡಲಾಗುವುದು ಎಂದು ಶಾಸಕ ಎಸ್‌ಎನ್ ಸುಬ್ಬರೆಡ್ಡಿ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಉಚಿತ ಸಾಮೂಹಿಕ ವಿವಾಹಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು ಹಾಗು ಅವರ ಪೋಷಕರಿಗೆ ನೂತನ ವಸ್ತç ಮತ್ತು ಸೀಮೆಹಸು ಖರೀದಿಸಲು ನಗದು ಹಣ ವಿತರಿಸಿ ಮಾತನಾಡಿದ ಶಾಸಕ ಸುಬ್ಬಾರೆಡಡಿ, ಬಾಗೇಪಲ್ಲಿ ಹಿಂದುಳಿದ ಪ್ರದೇಶವಾಗಿದ್ದು, ಬರದ ಕಾರಣ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಹೆಚ್ಚಿನ ಪೋಷಕರು ಅನಿವಾರ್ಯವಾಗಿ ಸಾಲ ಮಾಡಿ ತಮ್ಮ ಮಕ್ಕಳ ಮದುವೆ ಮಾಡುತ್ತಿದ್ದು, ಇದು ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟು ಮಾಡಿತ್ತು ಎಂದರು.

ಸ0ಭವನೀಯ ಸಾಲ ತಪ್ಪಿಸುವುದು ಹಾಗೂ ನೂತನ ದಂಪತಿಗಳ ಬದುಕಿಗೆ ನೆರವಾಗುವ ಉದ್ದೇಶದಿಂದ ಕಳೆದ ೨೨ ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. 23ನೇ ವರ್ಷದ ಉಚಿತ ಸಾಮೂಹಿಕ ವಿವಾಹಗಳು ಡಿಸೆಂಬರ್ 6ರಂದು ಗಡಿದಂ ಪುಣ್ಯಕ್ಷೇತ್ರದಲ್ಲಿ ನಡೆಯಲಿವೆ. ಕಳೆದ 22 ವರ್ಷಗಳ ಉಚಿತ ಸಾಮೂಹಿಕ ವಿವಾಹಗಳಲ್ಲಿ ಸುಮಾರು 8 ಸಾವಿರ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 4 ಸಾವಿರ ಸೀಮೆ ಹಸುಗಳನ್ನು ದಂಪತಿಗಳಿಗೆ ಕೊಡುಗೆಯಾಗಿ ನೀಡಲಾಗಿದೆ. ಕಳೆದ 25 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿರುವ ನಾನು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಸತತ ಮೂರು ಬಾರಿ ಶಾಸಕನಾದ ನಂತರವೂ ಸಾಮೂಹಿಕ ವಿವಾಹಗಳನ್ನು ಹಾಗೂ ಸೇವಾ ಕಾರ್ಯಗಳನ್ನು ಮುಂದುವರಿಸಿಕೊ0ಡು ಹೋಗುತ್ತಿರುವುದಾಗಿ ಹೇಳಿದರು.

ನನ್ನ ಸೇವಾ ಕಾರ್ಯಕ್ರಮಗಳಿಗೂ ರಾಜಕೀಯಕ್ಕೂ ಸಂಬ0ಧವೇ ಇಲ್ಲ. ಈ ವರ್ಷದ ಉಚಿತ ಸಾಮೂಹಿಕ ವಿವಾಹಗಳಲ್ಲಿ ವರರ ಜೊತೆ ಅವರ ಪೋಷಕರನ್ನು ವೇದಿಕೆ ಮೇಲೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಬೆಳಗ್ಗೆ 9 ಗಂಟೆಯಿ0ದಲೇ ನಿರಂತರವಾಗಿ ಊಟದ ವ್ಯವಸ್ಥೆ ನಡೆಯುತ್ತದೆ ಎಂದರು. ಈ ಸಂದರ್ಭದಲ್ಲಿ ಎಸ್ ಶೀಲಾ, ಎಸ್ ಎನ್ ಸುಬ್ಬಾರೆಡ್ಡಿ, ಡಾ. ಎಸ್ ಅಮೃತ, ಭಾಗ್ಯಮ್ಮ, ಸೂರ್ಯನಾರಾಯಣ ರೆಡ್ಡಿ,ರಾಮಕೃಷ್ಣಾರೆಡ್ಡಿ, ಸರಸ್ವತಮ್ಮ, ನರಸಿಂಹಪ್ಪ ಇದ್ದರು.

About The Author

Leave a Reply

Your email address will not be published. Required fields are marked *