ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯ
1 min readಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯ
ಬೆಂಗಳೂರು ವಲಯ ಐಜಿ ಲಾಬು ರಾಮ್ ಹೇಳಿಕೆ
ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಪೊಲೀಸರು ದೈಹಿಕ ಮತ್ತು ಮಾನಸಿಕವಾಗಿ ಸಮರ್ಥರಾಗಿರುವುದು ಅಗತ್ಯ. ಕ್ರೀಡಾಕೂಟಗಳಲ್ಲಿ ಭಾಗಿಯಾಗುವುದರಿಂದ ಇದು ಸಾಧ್ಯ ಎಂದು ಬೆಂಗಳೂರು ವಲಯ ಐಜಿ ಲಾಬುರಾಮ್ ಹೇಳಿದರು.
ಚಿಕ್ಕಬಳ್ಳಾಪುರ ನಗರ ಹೊರ ವಲಯದ ಅಣಕನೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಇಂದು ನಡೆದ 2025ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಕ್ರೀಡಾಕೂಟದ ಸಮಾರೋಪಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ವಲಯ ಐಜಿ ಲಾಬುರಾಮ್, ಪೊಲೀಸ್ ವೃತ್ತಿ ಸಾರ್ವಜನಿಕರ ಜೀವನ ಕಾಪಾಡುವ ವೃತ್ತಿಯಾಗಿದ್ದು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮಹತ್ವದ ಕಾರ್ಯ ಇಲಾಖೆ ಮಾಡುತ್ತಿದೆ ಎಂದರು.
ಇಲಾಖೆಗೆ ಹೆಸರು ತರುವ ಕೆಲಸವನ್ನು ಪೊಲೀಸರಾದಿಯಾಗಿ ಎಲ್ಲಾ ಹಂತದ ಅಧಿಕಾರಿಗಳು ಮಾಡುವುದು ಅಗತ್ಯ. ಸಾರ್ವಜನಿಕ ಜೀವನದಲ್ಲಿ ಸಮರ್ಥ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ದೈಹಿಕ ಕ್ಷಮತೆ ಅಗತ್ಯ, ಇದನ್ನು ಮನಗಂಡ ಜಿಲ್ಲಾ ಪೊಲೀಸ್ ಇಲಾಖೆ ವಾರ್ಷಿಕ ಕ್ರೀಡಾಕೂಟ ಪೊಲೀಸರಿಗೆ ಆಯೋಜಿಸುವ ಮೂಲಕ ತನ್ನ ಸಿಬ್ಬಂದಿಯಲ್ಲಿ ಕ್ರೀಡಾಮನೋಭಾವ ಬೆಳೆಸಲು ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ. ಇಂದಿನ ಕ್ರೀಡಾಕೂಟದಲ್ಲಿ ಭಾಗಿಯಾಗಿ ವಿವಿಧ ಕ್ರೀಡೆಗಳಲ್ಲಿ ಗೆಲುವು ದಾಖಲಿಸಿರುವ ಪೊಲೀಸರಿಗೆ ಮತ್ತು ಕ್ರೀಡಾ ಸ್ಪೂರ್ತಿಯಿಂದ ಆಟವಾಡಿ ಸೋತ ಪೊಲೀಸರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
2024ನೇ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ, ಕಬಡ್ಡಿ, ಕ್ರಿಕೆಟ್, ರನ್ನಿಂಗ್ ರೇಸ್ ಸೇರಿದಂತೆ ಇನ್ನಿತರೆ ಕ್ರೀಡೆಗಳನ್ನು ಆಡಿಸಲಾಯಿತು. ಈ ಕ್ರೀಡಾಕೂಟದಲ್ಲಿ ಪೊಲೀಸರು ಕೆಲಸದ ಜಂಜಡ ಮರೆತು ಲವಲವಿಕೆಯಿಂದ ಭಾಗವಹಿಸಿ ಆಟವಾಡಿದರು. ಹಗ್ಗ ಜಗ್ಗಾಟ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಆರ್ ಚೌಕ್ಸೆ, ಪೊಲೀಸ ರಿಗಾಗಿ ಕ್ರೀಡಾಕೂಟ ಆಯೋಜಿಸಿ, ಕ್ರೀಡೆಗಳಿಗೆ ನೌಕರರಲ್ಲಿರುವ ಕ್ರೀಡಾ ಮನೋಭಾವ ಉತ್ತೇಜಿಸಲು ಇಲಾಖೆ ಸದಾ ಸಿದ್ಧವಿದೆ ಎಂದರು.
ಕರ್ತವ್ಯ ಜೊತೆಗೆ ದೈಹಿಕ ದೃಢತೆ ಇಲಾಖೆ ನೌಕರರಿಗೆ ಅಗತ್ಯವಿದೆ, ಇದನ್ನು ಮನಗಂಡು ಹತ್ತಾರು ವರ್ಷಗಳಿಂದ ಈ ಕ್ರೀಡಾಕೂಟ ಜಿಲ್ಲಾಡಳಿತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಇದಕ್ಕೆ ಹಿರಿಯ ಅಧಿಕಾರಿಗಳ ಬೆಂಬಲವಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕ ಲಾಬೋರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ಅಧ್ಯಕ್ಷ ಕ ರಾಜ ಹಿಮಾಮ್ ಕಾಸಿಂ ಇದ್ದರು.