ಶಿಸ್ತು ಬದ್ಧ ಜೀವನ ಶೈಲಿಯಿಂದ ಆತ್ಮವಿಶ್ವಾಸ ಹೆಚ್ಚಳ
1 min readಶಿಸ್ತು ಬದ್ಧ ಜೀವನ ಶೈಲಿಯಿಂದ ಆತ್ಮವಿಶ್ವಾಸ ಹೆಚ್ಚಳ
ಬಾಗೇಪಲ್ಲಿ ತಹಶೀಲ್ದಾರ್ ಮನಿಷಾ ಮಹೇಶ್ ಎಸ್ ಪತ್ರಿ
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬದ್ಧತೆ ಅನುಸರಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು ಎಂದು ತಹಶೀಲ್ದಾರ್ ಮನಿಷಾ ಮಹೇಶ್ ಎಸ್.ಪತ್ರಿ ತಿಳಿಸಿದರು.
ಬಾಗೇಪಲ್ಲಿ ಪಟ್ಟಣ ಹೊರವಲಯದ ನಾರೇಪಲ್ಲಿ ಟೋಲ್ ಪ್ಲಾಜಾ ಸಮೀಪ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟಿಯ ಸೇವಾ ಯೋಜನೆ ಘಟಕದಿಂದ ಇಂದು ಆಯೋಜಿಸಿದ್ದ ಅಂತರ ಕಾಲೇಜು ನಾಯಕತ್ವ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ, ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ಒತ್ತು ನೀಡಿ, ಗುರಿ ತಲುಪಲು ನಿರಂತರ ಅಭ್ಯಾಸ ಮಾಡುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನನ್ನಿಂದ ಇದು ಅಸಾಭ್ಯಾ ಎಂಬ ಋಣಾತ್ಮಕ ಯೋಚನೆಗಳನ್ನು ಮಾಡದೇ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಹಾಗೇಯೆ ಯಶಸ್ಸು ಎಂಬುದು ಕೆಲವೊಮ್ಮೆ ತಡವಾಗಬಹುದು, ಹಲವು ಪ್ರಯತ್ನಗಳು ವಿಫಲವಾಗಬಹುದು. ಆದರೆ ನಂಬಿಕೆ ಕಳೆದುಕೊಳ್ಳಬಾರದು ಎಂದರು.
ಪರಿಶ್ರಮ ಪಡುವುದನ್ನು ಮುಂದುವರೆಸಿದಾಗ ಖಂಡಿತ ಯಶಸ್ಸು ಸಿಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ನಾಯಕತ್ವ ಪಡೆಯಲು ಪರಿಶ್ರಮ,ಆತ್ಮವಿಶ್ವಾಸಗಳಿಗೆ ಶಿಸ್ತುಬದ್ಧ ಬದುಕು ಮುಖ್ಯವಾಗಿದೆ ಎಂದರು. ಗುಡಿಬಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಯಾಜ್ ಅಹಮ್ಮದ್ ಮಾತನಾಡಿ, ದೇಶದಲ್ಲಾಗಲಿ ನಮ್ಮ ಸುತ್ತಮುತ್ತಲಾಗಲಿ, ಬಹಳಷ್ಟು ಮಂದಿ ನಾಯಕರು ಎಂದು ಕರೆಸಿಕೊಂಡವರಲ್ಲಿ ನಿಜವಾದ ನಾಯಕತ್ವದ ಗುಣಗಳಿಲ್ಲ ಎಂದರು.
ನಾಯಕತ್ವವೆ0ದರೆ ಮುಂದೆ ನಿಂತು ಹೋರಾಟಗಳು ಮಾಡುವುದಲ್ಲ, ಕೆಟ್ಟದನ್ನು ತೊಲಗಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಳತ್ವ ವಹಿಸುವುದಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರು ಸಮುದಾಯವನ್ನು ಉತ್ತಮ ಮಾರ್ಗದ ಕಡೆಗೆ ಕರೆದುಕೊಂಡು ಹೋಗಲು ಪರಿತಪಿಸಿದವರು.ಅಂತಹ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸುಸ್ಥಿರ ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನೊಳಗೊಂಡ ನಾಯಕರಾಗಬೇಕು ಎಂದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ವೈ. ನಾರಾಯಣ, ಡಾ. ಸತ್ಯನಾರಾಯಣ ರೆಡ್ಡಿ, ಗುಡಿಬಂಡೆ ಪದವಿ ಕಾಲೇಜು ಪ್ರಾಂಶುಪಾಲ ಅಪ್ಜಲ್ ಬಿಜಲಿ, ಗ್ರಂಥಪಾಲಕ ವೆಂಕಟರಾಮ ರೆಡ್ಡಿ ಇದ್ದರು.