ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಮರೀಚಿಕೆಯಾದ ಮಾರುಕಟ್ಟೆ ಸ್ವಚ್ಛತೆ

1 min read

ಮರೀಚಿಕೆಯಾದ ಮಾರುಕಟ್ಟೆ ಸ್ವಚ್ಛತೆ

ಮೂಲ ಸೌಲಭ್ಯಗಳಿಗಾಗಿ ರೈತರ ಪರದಾಟ

ಬಾಗೇಪಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸ್ಥಳೀಯ ಆಡಳಿತ ಮಂಡಳಿ ಸ್ವಚ್ಛತಾ ಕಾರ್ಯ ಮರೆತಿದೆ. ಇದರಿಂದ ಮಾರುಕಟ್ಟೆ ಪ್ರಾಂಗಣ ಸ್ವಚ್ಛತೆ ಇಲ್ಲದೆ, ವರ್ತಕರು ಮತ್ತು ಗ್ರಾಹಕರು ಕಿರಿಕಿರಿ ಅನುಭವಿಸುವಂತಾಗಿದೆ. ಕಸದ ರಾಶಿಗಳು, ದುರ್ವಾಸನೆ ಬೀರುವ ತ್ಯಾಜ್ಯ ಹೀಗೆ ಹಲವು ಸಮಸ್ಯೆಗಳಿದ್ದರೂ ಇತ್ತ ಗಮನ ಹರಿಸುವವರೇ ಇಲ್ಲವಾಗಿದ್ದಾರೆ.

ಬಾಗೇಪಲ್ಲಿ ಮಾರುಕಟ್ಟೆ ಆವರಣದಲ್ಲಿ ಎಲ್ಲೆ0ದರಲ್ಲಿ ಕಸ, ತರಕಾರಿ ತ್ಯಾಜ್ಯದ ಜತೆಗೆ ಮಳೆ ಬಂದರೆ ಇಡೀ ಪ್ರಾಂಗಣವೇ ಕೆಸರುಗದ್ದೆಯಾಗಿ ಪರಿಣಮಿಸುತ್ತದೆ. ಮಾರುಕಟ್ಟೆಗೆ ಬರುವ ರೈತರು ವಿವಿಧ ರೋಗಗಳಿಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ. ಸುಮಾರು ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವವರೇ ಇಲ್ಲವಾಗಿದ್ದಾರೆ. ದೂರದ ಈರುಗಳಿಂದ ಮಾರುಕಟ್ಟೆಗೆ ಬಂದವರಿಗೆ ಕುಡಿಯುವ ನೀರು ಲಭ್ಯವಿಲ್ಲ. ಜೊತೆಗೆ ಮೂತ್ರ ವಿಸರ್ಜನೆಗೂ ಬಯಲು ಶೌಚವನ್ನೆ ಅವಲಂಬಿಸುವ ದುಸ್ಥಿತಿ ಎದುರಾಗಿದೆ. ಹೀಗೆ ರೈತರಿಗೆ, ಕೃಷಿ ಕೂಲಿಕಾರ್ಮಿಕರಿಗೆ ಹತ್ತು ಹಲವಾರು ಸಮಸ್ಯೆಗಳು ಪ್ರತಿ ನಿತ್ಯ ಸರ್ವೆಸಾಮಾನ್ಯವಾಗಿದೆ.

ಕೂಲಿಕಾರ್ಮಿಕರು, ಮಂಡಿ ಮಾಲೀಕರು ಕೊಳೆತ ಟೊಮೆಟೊ ಹಾಗೂ ತರಕಾರಿಗಳನ್ನು ಕಸದ ಬುಟ್ಟಿಗೆ ಹಾಕದೇ, ರಸ್ತೆಯಲ್ಲಿ ಎಲ್ಲೆ0ದರಲ್ಲಿ ಬೀಸಾಡುತ್ತಿದ್ದಾರೆ. ಪ್ರಾಂಗಣದಲ್ಲಿ ಸ್ವಚ್ಛತೆಗೆ ಲಕ್ಷಾಂತರ ಹಣ ನೀಡಲಾಗುತ್ತಿದೆ. ಆದರೆ ಸ್ವಚ್ಛತೆ ಮರೀಚಿಕೆಯಾಗಿದೆ. ಇದರಿಂದ ರಸ್ತೆಯೆಲ್ಲಾ ಕೊಳೆತ ಟೊಮೆಟೊ,ತರಕಾರಿಗಳು ರಾಶಿಗಟ್ಟಲೇ ಇದ್ದು ಕೊಳೆತ ದುರ್ನಾತ ಬೀರುತ್ತಿದೆ. ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ.

ಮಾರುಕಟ್ಟೆಗೆ ಬರುವ ರೈತರು ಮತ್ತು ವರ್ತಕರು ಮೂಲ ಸೌಲಭ್ಯಗಳ ಕೊರತೆ ಹಾಗೂ ತ್ಯಾಜ್ಯದ ರಾಶಿಗಳಿಂದಾಗಿ ಸೊಳ್ಳೆಗಳ ಉಗಮಸ್ಥಾನಗಳಂತಾಗಿ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಎದುರಿಸುತ್ತಿದ್ದಾರೆ. ಕಾಲಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎಂಬ ಆರೋಪ ಇದೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್.ಎನ್ ಗೋವಿಂದರೆಡ್ಡಿ ಮಾತನಾಡಿ, ನಿತ್ಯವೂ ಸಾವಿರಾರು ರೈತರು, ವರ್ತಕರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿರುತ್ತಾರೆ. ಅವರಿಗೆ ಕುಡಿಯಲೂ ನೀರಿಲ್ಲದ ಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ಮಾರುಕಟ್ಟೆಗೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಹರಾಜು ಪ್ರಕ್ರಿಯೆ ಬಗ್ಗೆ ಗಮನ ನೀಡಬೇಕು. ಕೂಡಲೇ ಅಧಿಕಾರಿಗಳು ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ದೂರದಿಂದ ಬರುವ ರೈತರು ವಿಶ್ರಮಿಸಲು ರೈತರ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಬೇಕು. ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕಿದೆ. ಹಾಗೇಯೆ ಮಾರುಕಟ್ಟೆಯ ನಿರ್ವಹಣೆ ತೀರಾ ಹದಗೆಟ್ಟಿದ್ದು, ಕೂಡಲೇ ಕ್ರಮ ಜರುಗಿಸಬೇಕು,ಇಲ್ಲದಿದ್ದರೆ ರೈತ ಸಂಘಟನೆಯಿ0ದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

About The Author

Leave a Reply

Your email address will not be published. Required fields are marked *