ಚಿಕ್ಕಬಳ್ಳಾಪುರದಲ್ಲಿ ಮುಂದುವರಿದ ಮೈತ್ರಿ ಗೆಲುವು
1 min read
ಚಿಕ್ಕಬಳ್ಳಾಪುರದಲ್ಲಿ ಮುಂದುವರಿದ ಮೈತ್ರಿ ಗೆಲುವು
ದೊಡ್ಡಮರಳಿ ಗ್ರಾಪಂ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು
ಮೊನ್ನೆ ತಾನೇ ಮುದ್ದೇನಹಳ್ಳಿ ಗ್ರಾಪಂ ಮೈತ್ರಿ ಅಧ್ಯಕ್ಷರಾಗಿ ಮೈತ್ರಿ ಅಭ್ಯರ್ಥಿ ಆಯ್ಕೆಯಾಗಿದ್ದು, ಇಂದು ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಮರಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಯಲುವಳ್ಳಿ ಗ್ರಾಮಪಂಚಾಯತಿ ಸದಸ್ಯರ ಉಪಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಯಲುವಳ್ಳಿ ಗ್ರಾಮ ಸಂಪೂರ್ಣವಾಗಿ ಕಾಂಗ್ರೆಸ್ ವಶದಲ್ಲಿತ್ತು. ಆದರೆ ಯಲುವಳ್ಳಿ ಗ್ರಾಮದಲ್ಲಿ ಒಬ್ಬ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೈತ್ರಿ ಅಭ್ಯರ್ಥಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಆರಂಭವಾಗಿದೆ.
ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. ಗೆದ್ದ ಅಭ್ಯರ್ಥಿಗಳಿಗೆ ಹಾರ ತೂರಾಯಿ ಹಾಕಿ ವಿಜಯೋತ್ಸವ ಆಚರಿಸಿದರು. ಸಂಸದ ಡಾ ಕೆ ಸುಧಾಕರ್ ಅವರ ತಂದೆ ಪಿ.ಎನ್. ಕೇಶವರೆಡ್ಡಿ ಹಾಗೂ ಗ್ರಾಮದ ಮುಖಂಡ ಸೋಣ್ಣೆಗೌಡ ಗೆದ್ದ ಅಭ್ಯರ್ಥಿಗಳಿಗೆ ಶುಭ ಕೋರಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಗೆದ್ದ ಅಭ್ಯರ್ಥಿ ಅಮೃತ್ ಕುಮಾರ್, ಯಲುವಳ್ಳಿ ಗ್ರಾಮದಲ್ಲಿ ನಡೆದ ಸದಸ್ಯತ್ವ ಚುನಾವಣೆಯಲ್ಲಿ ಮೂರು ಮತಗಳ ಅಂತರದಿ0ದ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಗ್ರಾಮಗಳ ಅಭಿವೃದ್ದಿಗೆ ಖುದ್ದೇಗಿ ಹೋಗಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.