ಸಿಪಿಎಂ 18ನೇ ಜಿಲ್ಲಾ ಸಮ್ಮೇಳನ ಕುರಿತು ಮಾಹಿತಿ
1 min readಸಿಪಿಎಂ 18ನೇ ಜಿಲ್ಲಾ ಸಮ್ಮೇಳನ ಕುರಿತು ಮಾಹಿತಿ
ಕೃಷ್ಣಾ ನದಿ ನೀರು ಜಿಲ್ಲೆಗೆ ಹರಿಸಲು ನಿರ್ಣಯ
ಶಾಶ್ವತ ನೀರಾವರಿ ಸೇರಿ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ನಿರ್ಣಯ
ಸಿಪಿಎಂ ಎಂದರೆ ಕಾರ್ಮಿಕರ, ಶ್ರಮಿಕ ವರ್ಗದ ಪರ ಹೋರಾಟ ನಡೆಸುವ ಪಕ್ಷವಾಗಿ ಖ್ಯಾತಿ ಪಡೆದಿದೆ. ಬಾಗೇಪಲ್ಲಿಯನ್ನು ಒಂದು ಕಾಲದಲ್ಲಿ ಕೆಂಪು ನಾಡು ಎಂದೇ ಕರೆಯುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದ್ದು, ಕೆಂಭಾವುಟ ನೇಪತ್ಯಕ್ಕೆ ಸರಿಯುವ ಸೂಚನೆಗಳು ಗೋಚರಿಸುತ್ತಿವೆ. ಹಾಗಾಗಿ ಪಕ್ಷಕ್ಕೆ ಗತ ವೈಭವ ಮರಳಿ ತರುವ ಪ್ರಯತ್ನವನ್ನು ಮುಖಂಡರು ಮಾಡುತ್ತಿದ್ದು, ಇದರ ಭಾಗವಾಗಿ ಇತ್ತೀಚಿಗೆ ಬಾಗೇಪಲ್ಲಿಯಲ್ಲಿ 18ನೇ ಜಿಲ್ಲಾ ಸಮ್ಮೇಳನ ನಡೆಸಲಾಗಿದೆ.
ಬಾಗೇಪಲ್ಲಿಯಲ್ಲಿ ನವೆಂಬರ್ 21ರಂದು 18ನೇ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ 20ಕ್ಕಿಂತ ಹೆಚ್ಚು ತೀರ್ಮಾನಗಳನ್ನು ಕೈಗೊಂಡಿದ್ದು, ಈ ನಿರ್ಣಯಗಳ ಅನುಷ್ಠಾನಕ್ಕೆ ಆಗ್ರಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಪಕ್ಷ ನಿರತರಾಗಿದ್ದಾರೆ. ಈ ಸಂಬ0ಧ ಇಂದು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಿಪಿಎಂ ಮುಖಂಡರು ಸಮ್ಮೇಳನದ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ನವೆಂಬರ್ 21 ರಂದು ಬಾಗೇಪಲ್ಲಿಯಲ್ಲಿ ನಡೆದ 18 ಜಿಲ್ಲಾ ಸಮ್ಮೇಳನದಲ್ಲಿ ೨೦ಕ್ಕೂ ಹೆಚ್ಚು ನಿರ್ಣಯಗಳನ್ನು ತಗೆದುಕೊಳ್ಳಳಾಗಿದೆ ಎಂದರು. ಈ ನಿರ್ಣಯಗಳನ್ನು ಸರ್ಕಾರ ಗಮನಕ್ಕೆ ತಂದು ಹೋರಾಟಗಳ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆದು, ಆ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ.
ಸಿಪಿಎಂ ಜಿಲ್ಲಾ ಸಮ್ಮೇಳನದಲ್ಲಿ ಕೈಗೊಂಡಿರುವ ನಿರ್ಣಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಷ್ಠಾನ ಮಾಡಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಪ್ರಮುಖವಾಗಿ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕಲ್ಪಿಸಲು ಕೃಷ್ಣಾ ನದಿ ನೀರು ಚಿಕ್ಕಬಳ್ಳಾಪುರಕ್ಕೆ ತರಲು ನಿರ್ಣಯ ಕೈಗೊಳ್ಳಳಾಗಿದೆ. ಕೈಗಾರಿಕೆಗಳ ಸ್ಥಾಪನೆ, ಹೈನುಗಾರಿಕೆ, ರೇಷ್ಮೆ ಹಾಗೂ ಕೃಷಿಗೆ ಪ್ರೋತ್ಸಾಹ ನೀಡಬೇಕು, ಬಿಪಿಎಲ್ ರದ್ದತಿ ನಿಲ್ಲಿಸಬೇಕು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಠಿಣ ಕಾನೂನು ತರಲು ಆಗ್ರಹಿಸಿದರು. ಸಿಪಿಎಂ ಮುಖಂಡರಾದ ಮುನಿ ವೆಂಕಟೇಶಪ್ಪ, ಜಿಲ್ಲಾ ಕಾರ್ಯದರ್ಶಿ ಜಯ ರಾಮಪ್ಪ, ರಘುನಾಥ್ ರೆಡ್ಡಿ, ಅನಿಲ್ ಕುಮಾರ್, ನಾಗರಾಜ್, ಅಶ್ವಶ್ಥನಾರಾಯಣ್, ಮುನಿಕೃಷ್ಣಪ್ಪ, ಶ್ರೀನಿವಾಸ್ ಇದ್ದರು.