ಜಯ ಕರ್ನಾಟಕ ಸಂಘದಿ0ದ ಉಚಿತ ನೇತ್ರ ಚಿಕಿತ್ಸೆ
1 min readಜಯ ಕರ್ನಾಟಕ ಸಂಘದಿ0ದ ಉಚಿತ ನೇತ್ರ ಚಿಕಿತ್ಸೆ
ಮಂಚೇನಹಳ್ಳಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಮಂಚೇನಹಳ್ಳಿ ತಾಲೂಕಿನಲ್ಲಿ ಜಯ ಕರ್ನಾಟಕ ಸಂಘ ಹಾಗೂ ಧರ್ಮಸ್ಥಳ ಕ್ಷೇತ್ರ ಸಂಘದ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ಜೈ ಕರ್ನಾಟಕ ಸಂಘದ ಮುರಳಿ ಮಾತನಾಡಿ, ಜೈ ಕರ್ನಾಟಕ ಸಂಘದಿ0ದ 16ನೇ ಕನ್ನಡ ರಾಜ್ಯೋತ್ಸವ ನವೆಂಬರ್ 30ರಂದು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಉಚಿತ ನೇತ್ರ ಚಿಕಿತ್ಸೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ನಂಜೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಹಾಗೂ ವೀರೇಂದ್ರ ಹೆಗಡೆ ಅವರ ಹುಟ್ಟಿದ ದಿನದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು 25ಕ್ಕೂ ಹೆಚ್ಚು ಮಂದಿ ಕಣ್ಣಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಕೆಲಸವನ್ನು ಮಾಡುತ್ತಿದ್ದೇವೆ. ಈ 25 ಮಂದಿ ರಕ್ತದಾನ ಮಾಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೈ ಕರ್ನಾಟಕ ಸಂಘದ ಸಾಧತ್ ಪಾಷಾ, ಮಂಜುನಾಥ ರಾವ್, ಪ್ರಕಾಶ್, ಫಯಾಜ್, ಅಶೋಕ್, ಧರ್ಮಸ್ಥಳ ಸಂಘದ ನಾಗರಾಜ್ ನಾಯ್ಕ್, ಪ್ರಾಂಶುಪಾಲ ಎಂ. ಜಿ. ಶ್ರೀನಿವಾಸ್ ಇದ್ದರು.