ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಲಹೆ
1 min readಪ್ರತಿಯೊಬ್ಬರೂ ಮಾನವೀಯತೆ ರೂಡಿಸಿಕೊಳ್ಳಬೇಕು
ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಲಹೆ
ಶಿಡ್ಲಘಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಾನವೀಯತೆ ಎನ್ನುವುದು ಮುಖ್ಯ ಮೌಲ್ಯವಾಗಿದ್ದು, ಪ್ರತಿಯೊಬ್ಬರೂ ಮಾನವೀಯತೆ ರೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ನೆಲೆಸುತ್ತದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.
ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ರಸ್ತೆಯ ಶ್ರೀ ಭುವನೇಶ್ವರಿ ವೃತ್ತದಲ್ಲಿ ಲಿಯೋ ಕ್ಲಬ್ ಆಫ್ ಕಿರಣ ಹಾಗು ಎಂವಿಜೆ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಇಂದು ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಭಿರದಲ್ಲಿ ಮಾತನಾಡಿದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹುಟ್ಟಿದಾಗ ಮಾನವನಾಗಿ ಹುಟ್ಟದಿದ್ದರೂ, ಜೀವನ ಪಥದಲ್ಲಿ ಮಾನವೀಯತೆ ಅಳವಡಿಸಿಕೊಂಡು ಸಾಯುವಾಗ ಮಾನವನಾಗಿ ಸತ್ತರೆ ಅದಕ್ಕಿಂತೆ ಉನ್ನತ ಗೌರವ ಮತ್ತೊಂದಿಲ್ಲ ಎಂದರು.
ಶಾ0ತಿಯಿ0ದ ದೇಶದಲ್ಲಿ ಬದಲಾವಣೆ ಬಂದರೆ ಅದರಿಂದ ಯಾವುದೇ ತೊಂದರೆಯಿಲ್ಲ, ಆದರೆ ಕ್ರಾಂತಿಯಿ0ದ ಬದಲಾವಣೆ ಬರುವುದಾದರೆ ಅದರಿಂದ ದೇಶದ ಯಾರೊಬ್ಬರಿಗೂ ಪ್ರಯೋಜನವಿಲ್ಲ. ಕ್ರಾಂತಿಯಿ0ದ ದೇಶದಲ್ಲಿ ಬದಲಾವಣೆ ಬಂದದ್ದೇ ಆದರೆ ದೇಶ 25 ರಾಷ್ಟಗಳಾಗಿ ಮಾರ್ಪಡಾಗುತ್ತದೆ, ರಾಜ್ಯಗಳನ್ನು ಪ್ರತ್ಯೇಕ ರಾಷ್ಟಗಳಾನ್ನಾಗಿಸಿ ನಾವೂ ಪ್ರಧಾನಿಗಳಾಗಬೇಕು ಎಂದು ಬಹುತೇಕ ರಾಜಕಾರಣಿಗಳು ಕಾಯುತ್ತಿದ್ದಾರೆ. ಹಾಗಾಗಿ ಯುವಜನತೆ ನಮ್ಮ ಹಿರಿಯರು ಕಲಿಸಿಕೊಟ್ಟ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಆರೋಗ್ಯ ಶಿಬಿರದಲ್ಲಿ ಸುಮಾರು 270 ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಬದಲ್ಲಿ ತುಮಕೂರಿನ ನಾಗರಿಕ ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಕೆ.ಎನ್. ರಮೇಶ್, ಗ್ರೇಡ್ 2 ತಹಸೀಲ್ದಾರ್ ಪೂರ್ಣಿಮಾ, ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್, ತಮೀಮ್, ವೈದ್ಯೆ ಡಾ,ಲತಾ, ಶ್ರೀಕಾಂತ್, ಲೋಕೇಶ್ ಇದ್ದರು,