ಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ಮೇಲೆ ಕನ್ನಡ ಧ್ವಜಾರೋಹಣ
1 min readಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ಮೇಲೆ ಕನ್ನಡ ಧ್ವಜಾರೋಹಣ
ಗುಡಿಬಂಡೆ ಬೆಟ್ಟದ ಮೇಲೆ ಧ್ವಜಾರೋಹಣ ಮಾಡಿದ ಯುವಕರು
69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಗಡಿ ನಾಡು ಗುಡಿಬಂಡೆ ಬೆಟ್ಟದ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ಮೇಲೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರವೇ, ಗೌರಿಬಿದನೂರು ಹೊಯ್ಸಳ ಟ್ರೆಕ್ಕಿಂಗ್ ತಂಡ ಬೆಟ್ಟದಲ್ಲಿ ರಾಜ್ಯೋತ್ಸವ ಆಚರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ನಾಡಭಾಷೆ ಕನ್ನಡ, ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚು ಕನ್ನಡ ಭಾಷೆ ಬಳಸೋಣ, ಆ ಮೂಲಕ ಕನ್ನಡವನ್ನು ಬೆಳೆಸೋಣ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದರು. ಗೌರಿಬಿದನೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ನಂಜು0ಡಪ್ಪ ಮಾತನಾಡಿ, ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ಗೊಳಿಸದೆ ವರ್ಷವಿಡೀ ಕನ್ನಡ ಕಾರ್ಯಕ್ರಮಗಳು ಮಾಡೋಣ ಎಂದು ಕರೆ ನೀಡಿದರು.
ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಗೌರವಿಸೋಣ. ಕರ್ನಾಟಕದ ಏಕತೆ ಮತ್ತು ಏಳಿಗೆಗಾಗಿ ತಮ್ಮನ್ನು ಅರ್ಪಿಸಿಕೊಂಡ ದಾರ್ಶನಿಕರನ್ನು ಸ್ಮರಿಸೋಣ. ಏಕತೆ, ಸಹೋದರತ್ವ ಮತ್ತು ಸಾಮಾಜಿಕ ಸಾಮರಸ್ಯ ಉತ್ತೇಜಿಸುವ ಮೂಲಕ ಕನ್ನಡ ಪರಂಪರೆ ಗೌರವಿಸೋಣ ಎಂದರು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಶ್ರೀನಿವಾಸ್ ಯಾದವ್, ಗೌರಿಬಿದನೂರು ಹೊಯ್ಸಳ ಟ್ರೆಕ್ಕಿಂಗ್ ತಂಡದ ನೇತಾಜಿ ಅಶೋಕ್, ಶ್ರೀನಿವಾಸ್ ಗಾಂಧಿ ಇದ್ದರು.