ಪ್ರಥಮ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕಡಲೆಕಾಯಿ ಪರಿಷೆ
1 min readಪ್ರಥಮ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕಡಲೆಕಾಯಿ ಪರಿಷೆ
ಕಡಲೇಕಾಯಿ ಪರಿಷೆ ಪ್ರಯುಕ್ತ 9 ಜಿಲ್ಲೆಗಳ ಹೊನಲು ಬೆಳಕಿನ ಕುಸ್ತಿ
ದೊಡ್ಡಬಳ್ಳಾಪುರ ಬಯಲು ಬಸವಣ್ಣ ಜಾತ್ರಾ ಪ್ರಯುಕ್ತ ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದಿ0ದ 9 ಜಿಲ್ಲೆಗಳ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಲಕ್ಷಿನಾರಾಯಣ್ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರ ತಾಲೂಕು ಕುಸ್ತಿ ಸಂಘದ ಅಧ್ಯಕ್ಷ ಲಕ್ಷಿನಾರಾಯಣ್, ಈ ಪಂದ್ಯಾವಳಿ ಮೂಲಕ ತಾಲೂಕಿನ ಯುವಕರಿಗೆ, ಮಕ್ಕಳಿಗೆ ಕುಸ್ತಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಮುಂದಾಗಿದ್ದೇವೆ, ಈ ಕಾರ್ಯಕ್ರಮದಲ್ಲಿ ಸುಮಾರು 9 ಜಿಲ್ಲೆಗಳ ಕುಸ್ತಿಪಟುಗಳು ಪಾಲ್ಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿಜೇತರಿಗೆ ಬಿರುದು ನೀಡುವ ಜೊತೆಗೆ ಬೆಳ್ಳಿ ಗದೆ ಬಹುಮಾನವಾಗಿ ನೀಡಲಾಗುವುದು ಎಂದರು.
ಪೈಲ್ವಾನ್ ಚೌಡಯ್ಯ ಮಾತನಾಡಿ, ಈ ಪಂದ್ಯಾವಳಿಗಳನ್ನು ತಾಲೂಕಿನ ಹೆಸರಾಂತ ಗರಡಿ ಮನೆಗಳಾದ ಹನುಮಾನ್ ಗರಡಿ, ದೊಡ್ಡವೆಂಕ್ಟೊಣಪ್ಪ ಗರಡಿ, ಕೋಟೆ ಗರಡಿ, ಎಸ್‌ಆರ್‌ಸಿ ಗರಡಿ, ಇಂದಿನ ಪೀಳಿಗೆಗೆ ಮಟ್ಟಿ ಕುಸ್ತಿ ಎಂದರೆ ಏನೆಂಬುದೇ ತಿಳಿದಿಲ್ಲ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಇಂದಿನ ಪೀಳಿಗೆಗೆ ಮಟ್ಟಿ ಕುಸ್ತಿಯನ್ನು ಪರಿಚಯಿಸುವದಷ್ಟೇ ಅಲ್ಲದೆ, ಈ ಕಲೆಯನ್ನು ಮುಂದಿನ ಪೀಳಿಗೆಗೆ ರವಾನಿಸುವುದಾಗಿದೆ ಎಂದರು.