ಪ್ರಾಣ ಪಣಕ್ಕಿಟ್ಟು ಹೆದ್ದಾರಿ ದಾಟುತ್ತಿರುವ ಗ್ರಾಮಸ್ಥರು
1 min readಪ್ರಾಣ ಪಣಕ್ಕಿಟ್ಟು ಹೆದ್ದಾರಿ ದಾಟುತ್ತಿರುವ ಗ್ರಾಮಸ್ಥರು
ಕೆಸ್ತೂರು ಗೇಟ್ ನಲ್ಲಿ ಸ್ಕೆವಾಕ್ ನಿರ್ಮಾಣಕ್ಕೆ ಆಗ್ರಹ
ದೊಡ್ಡಬಳ್ಳಾಪುರ ತಾಲೂಕಿನ ದಾಬಸ್ ಪೇಟೆ, ಹೊಸಕೋಟೆ ಮಾರ್ಗದ ರಾಷ್ಟಿಯ ಹೆದ್ದಾರಿ ಪ್ರಾರಂಭವಾಗಿ ಒಂದು ವರ್ಷವಾಗುತ್ತಿದೆ, ಆದರೆ ಈವರೆಗೂ ಹೆದ್ದಾರಿಯಲ್ಲಿ ಸ್ಕೆ`ವಾಕ್ ನಿರ್ಮಾಣವಾಗಿಲ್ಲ, ಹೆದ್ದಾರಿಯನ್ನ ದಾಟ ಬೇಕಾದ್ರೆ ಜನರು ತಮ್ಮ ಪ್ರಾಣ ಪಣಕ್ಕಿಡ ಬೇಕಿದೆ, ರಾಷ್ಟಿಯ ಹೆದ್ದಾರಿ ಪ್ರಾಧಿಕಾರವರ ನಿರ್ಲಕ್ಷದಿಂದ ಅಮಾಯಕರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಅರೋಸಿದ್ದಾರೆ.
ಉಪನಗರ ವರ್ತುಲ ರಸ್ತೆ ಯೋಜನೆಯಡಿ ದಾಬಸ್ ಪೇಟೆ- ಹೊಸಕೋಟೆ ಮಾರ್ಗದ ರಾಷ್ಟಿಯ ಹೆದ್ದಾರಿ 648 ನ್ನು ಅಭಿವೃದ್ಧಿ ಪಡಿಸಲಾಗಿದೆ, ಹೆದ್ದಾರಿಯಲ್ಲಿ ವಾಹನ ಸಂಚಾರ ಪ್ರಾರಂಭವಾದ ನಂತರ ಹೆದ್ದಾರಿ ಬದಿ ಇರುವ ಗ್ರಾಮಗಳು ರಸ್ತೆಯ ಮತ್ತೊಂದು ಬದಿಯ ಸಂಪರ್ಕ ಕಳೆದುಕೊಳ್ಳುವಂತೆ ಆಗಿದೆ, ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಹೆದ್ದಾರಿ ಬದಿ ಇರುವ ಪ್ರಮುಖ ಗ್ರಾಮ, ಇಲ್ಲಿನ ಜನ ಹೆದ್ದಾರಿ ಕಂಡರೆ ಭಯಪಡುವಂತಾಗಿದೆ.
ಈ ಕುರಿತು ಕೆಸ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಮಾತನಾಡಿ, ತಮ್ಮ ಪಂಚಾಯಿತಿ ವ್ಯಾಪ್ತಿಯ ಕೆಸ್ತೂರು ಗೇಟ್, ಮೇಸ್ಟು ಮನೆ, ಕೂಗನಹಳ್ಳಿ, ಬ್ಯಾಡರಹಳ್ಳಿ ಗೇಟ್ ಬಳಿ ಸ್ಕೆವಾಕ್ ನಿರ್ಮಿಸುವಂತೆ 6 ತಿಂಗಳ ಹಿಂದೆಯೇ ರಾಷ್ಟಿಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಹೆದ್ದಾರಿ ಪ್ರಾರಂಭವಾಗಿ ವರ್ಷವಾದರು ಸ್ಕೆವಾಕ್ ನಿರ್ಮಾಣ ಮಾಡದೆ ಜನರ ಪ್ರಾಣದೊಂದಿದೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕೆಸ್ತೂರು ಗೇಟ್ ನಲ್ಲಿ ಸ್ಕೆವಾಕ್ ಇಲ್ಲದೆ ಗ್ರಾಮಸ್ಥರು ಒಂದು ಕಿ.ಮೀ ಬಳಸಿ ಅಂಡರ್ ಪಾಸ್ ಮೂಲಕ ಗ್ರಾಮಕ್ಕೆ ಬರ ಬೇಕಿದೆ, ಹಾಗೊಂದು ವೇಳೆ ಹೆದ್ದಾರಿ ದಾಟಲು ಪ್ರಯತ್ನಿಸಿದ್ರೆ ೧೫೦ ಕಿ.ಮೀ ವೇಗದಲ್ಲಿ ಬರುವ ವಾಹನಗಳು ಜನರ ಪ್ರಾಣ ಬಲಿ ಪಡೆಯುತ್ತಿವೆ, ರೈತರಿಂದ ಭೂಸ್ವಾಧೀನ ಮಾಡಿದ್ರು ಸರ್ವಿಸ್ ರಸ್ತೆ ಮಾಡಿಲ್ಲ, ಹೆದ್ದಾರಿ ಸಂಪರ್ಕಿಸುವ ವೇಳೆ ಅಪಘಾತಕ್ಕೆ ತುತ್ತಾಗಿ ಗ್ರಾಮಸ್ಥರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಸ್ಕೆವಾಕ್ ನಿರ್ಮಾಣಕ್ಕಾಗಿ 27 ಕೋಟಿಯ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂಬ ಮಾಹಿತಿ ಇದೆ, ಅದಷ್ಟು ಬೇಗ ಸ್ಕೆವಾಕ್ ನಿರ್ಮಾಣ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಹೆದ್ದಾರಿ ನಿರ್ಮಾಣಕ್ಕಾಗಿ ರೈತರ ಪಲವತ್ತಾದ ಭೂಮಿಯನ್ನ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದವರು ಭೂಸ್ವಾಧೀನ ಮಾಡಿಕೊಂಡಿದ್ದಾರೆ, ಆದರೆ ಪ್ರಭಾವಿ ಎಂಬ ಕಾರಣಕ್ಕೆ ಅವರ ಜಮೀನು ಭೂಸ್ವಾಧೀನ ಮಾಡದೆ ಹಾಗೆಯೇ ಬಿಟ್ಟಿದ್ದಾರೆ, ಅಮಾಯಕ ರೈತರಿಗೆ ಒಂದು ನ್ಯಾಯ ಪ್ರಭಾವಿಗಳಿಗೆ ಮತ್ತೊಂದು ನ್ಯಾಯನಾ, ಸಂವಿಧಾನದಲ್ಲಿ ಉನ್ನತ ಹುದ್ದಾರಿಯಲ್ಲಿರುವರೇ ಹೀಗೆ ಮಾಡಿದ್ರೆ ಹೇಗೆ ಎಂಬ ಪ್ರಶ್ನೆ ಮಾಡಿದ್ರು.