1.26 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ
1 min read1.26 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ
ಗೌರಿಬಿದನೂರು ನಗರ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲ ಎಂದ ಸುಧಾಕರ್
ಗೌರಿಬಿದನೂರು ನಗರದ ವಾರ್ಡುಗಳಿಗೆ ಶುಕ್ರದಸೆ ಬಂದಿದೆ, ಸಂಸದರ ಅನುದಾನದಲ್ಲಿ 1.26 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಂಸದ ಡಾ.ಕೆ,ಸುಧಾಕರ್ ಮತ್ತು ಶಾಸಕ ಕೆ,ಎಚ್,ಪುಟ್ಟಸ್ವಾಮಿಗೌಡ ಇಂದು ನೇರವೆರಸಿದರು.
ಗೌರಿಬಿದನೂರು ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನಡೀಇದ ನಂತರ ಸಂಸದ ಡಾ.ಕೆ,ಸುಧಾಕರ್ ಮಾತನಾಡಿ, ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ, ಒಟ್ಟಾರೆ ಜನ ಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸುವುದೇ ಆಗಿದೆ, ಹಲವು ವಾರ್ಡುಗಳಿಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅಭಿವೃದ್ದಿ ವಿಷಯದಲ್ಲಿ ಗೌರಿಬಿದನೂರು ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚು ಒತ್ತು ನೀಡಲಾಗುವುದು ಎಂದರು.
ನಗರದಲ್ಲಿ ಒಟ್ಟು 1.26 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಆಗಿದೆ. ಕಾಮಗಾರಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು, ತ್ವರಿತವಾಗಿ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು. ಉಪಚುನಾವಣೆ ಪಲಿತಾಂಶ ಕುರಿತು ಪ್ರತಿಕ್ರಿಯಿಸಿದ ಸಂಸದರು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ,ಇದು ಅಡಳಿತ ಪಕ್ಷವಾದ್ದರಿಂದ ಬಹುತೇಕ ಕಡೆ ಅಳುವ ಪಕ್ಷಕ್ಕೆ ಗೆಲುವು ಸಹಜ,ಚೆನ್ನಪಟ್ಟಣದ ಗೆಲವು ನಮ್ಮದು ಅಗಬೇಕಿತ್ತು, ಅಭ್ಯರ್ಥಿ ಅಯ್ಕೆಯಲ್ಲಿ ಗೊಂದಲ ವಾಗಿ ಮತ್ತು ನಿಖಿಲ್ ಕುಮಾರ ಸ್ವಾಮಿ ಅಚ್ಚರಿ ಅಭ್ಯರ್ಥಿ ಅಗಿದ್ದು, ಅವರು ಮಾನಸಿಕವಾಗಿ ಸಿದ್ದತೆ ಇಲ್ಲದೆ ಇರುವುದು, ಪಕ್ಷದಲ್ಲಿ ಗೊಂದಲ ವಾತಾವಾರಣ. ಒಗ್ಗಟಿನ ಕೊರತೆ, ನಾನು ಎಂಬ ವರ್ತನೆ, ಸಮೂಹಿಕ ನಾಯಕತ್ವದ ಕೊರತೆಯಿಂದ ಸೋಲು ಆಗಿದೆ ಎಂದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರ ಒಗ್ಗಟ್ಟು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಸಮರ್ಥ ನಾಯಕತ್ವದಿಂದ ಗೆಲುವು ಸಾಧಿಸಿದೆ. ಇದನ್ನು ನಮ್ಮ ನಾಯಕರು ಕಲಿಯಬೇಕು ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಪತ್ರಿ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಪರೀದ್, ಪೌರಾಯುಕ್ತೆ ಡಿಎಂ,ಗೀತಾ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎನ್,ಎಂ, ರವಿನಾರಾಯಣರೆಡ್ಡಿ, ಡಾ, ಶಶಿಧರ್, ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್ ಇದ್ದರು.