ಕೆರೆಗೆ ಹರಿಯುತ್ತಿರುವ ಯುಜಿಡಿ ನೀರು ತಡೆಗೆ ಮುಂದಾದ ನಗರಸಭೆ
1 min readಕೆರೆಗೆ ಹರಿಯುತ್ತಿರುವ ಯುಜಿಡಿ ನೀರು ತಡೆಗೆ ಮುಂದಾದ ನಗರಸಭೆ
ನಿರಂತರವಾಗಿ ಕಂದವಾರ ಕೆರೆಗೆ ಹರಿಯುತ್ತಿರುವ ಯುಜಿಡಿ ನೀರು
ಉಪಾಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಪತ್ತೆ ಕಾರ್ಯ ಆರಂಭ
ಬೆಂಗಳೂರಿನ ಹೆಬ್ಬಾಳ ನಾಗವಾರ ಕೆರೆಯ ತ್ಯಾಜ್ಯ ನೀರು ಕಂದವಾರ ಕೆರೆಗೆ ಬರುತ್ತಿರೋದೆ ಸಮಸ್ಯೆಯಾಗಿದೆ. ಅದರ ಜೊತೆಗೆ ಚಿಕ್ಕಬಳ್ಳಾಪುರದ ಯುಜಿಡಿ ನೀರು ಸೇರಿ ಮತ್ತಷ್ಟು ಮಲಿನವಾಗುತ್ತಿದೆ. ಇದು ಒಂದು ದಿನಕ್ಕೆ ಸೀಮಿತವಾಗದೆ ಕಳೆದ ಹಲವು ತಿಂಗಳುಗಳಿ0ದ ನಿರಂತರವಾಗಿ ನಡೆಯುತ್ತಿದ್ದು, ಈ ಸಮಸ್ಯೆ ಪರಿಹಾರಕ್ಕಾಗಿ ಇಂದು ನಗರಸಭೆ ಉಪಾಧ್ಯಕ್ಷರು ಮುಂದಾಗಿದ್ದಾರೆ.
ವೀಕ್ಷಕರೆ, ಇಲ್ಲಿ ಕಾಣ್ತಾ ಇದೆಯಲ್ಲಾ, ಇದು ಚಿಕ್ಕಬಳ್ಳಾಪುರಕ್ಕೆ ಹೊಂದಿಕೊ0ಡೇ ಇರುವ ಕಂದವಾರ ಕೆರೆ. ಇದರಲ್ಲಿ ಹೀಗೆಲ್ಲ ಬೆಳೆದಿರೋದು ಏನು ಅಂತ ನೋಡ್ತಿದ್ದೀರಾ ಅಲ್ಲವೆ, ಇದು ಯಾವ ರೀತಿಯ ಸಸ್ಯ ಜಾತಿಗೆ ಸೇರಿದೆ, ಇದರಿಂದ ಜನರಿಗೆ ಏನಾದರೂ ಉಪಯೋಗ ಇದೆಯಾ, ಇಲ್ಲವೇ ಅಪಾಯವಾ ಯಾವುದೂ ಗೊತ್ತಿಲ್ಲ. ತಿಳಿಯೋ ಪ್ರಯತ್ನವನ್ನೂ ಯಾರೂ ಮಾಡಿಲ್ಲ ಬಿಡಿ. ಹೀಗೆ ಬೆಳೆದಿರೋ ಜಂಡು ಎಚ್‌ಎನ್ ವ್ಯಾಲಿ ನೀರು ಹರಿಯುತ್ತಿರೋ ಕೆರೆಗಳಲ್ಲಿ ಮಾತ್ರ ಬೆಳೆದಿದ್ದು, ಇದರಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು ಎಂಬ ಆತಂಕ ಜನರಲ್ಲಿಯೂ ಇದೆ. ಇದರ ಕತೆ ಇರಲಿ, ಈಗ ವಿಷಯ ಅದಲ್ಲ.
ಜೆಸಿಬಿ ತಂದು ಹೀಗೆ ನೆಲ ಅಗೆಯುತ್ತಿರೋದಾದರೂ ಯಾಕೆ ಅನ್ನೋ ಸಂಶಯ ನಮಗೂ ಬಂತು. ಹಾಗಾಗಿಯೇ ನೇರವಾಗಿ ಕ್ಯಾಮೆರಾ ಜೊತೆ ಹೋಗಿ ನಗರಸಭೆ ಉಪಾಧ್ಯಕ್ಷರನ್ನೇ ವಿಚಾರಿಸಿದ್ವಿ. ಆಗಲೇ ನೋಡಿ ವಿಷಯ ಗೊತ್ತಾಗಿದ್ದು. ಈ ಹಿಂದೆ ನಿಮಗೆ ನೆನಪಿರಬಹುದು, ನಗರದ ೭ನೇ ವಾರ್ಡಿನಿಂದ ಕಂದವಾರ ಕೆರೆಗೆ ಯುಜಿಡಿ ನೀರು ಹರಿಯುತ್ತಿದೆ ಎಂಬ ಸುದ್ದಿ ಪ್ರಸಾರ ಮಾಡಲಾಗಿತ್ತು. ಆದರೆ ಆಗ ಆಡಳಿತ ಮಂಡಳಿ ಇರಲಿಲ್ಲ. ಇದ್ದ ಅಧಿಕರಿಗಳಿಗೆ ಈ ವಿಚಾರ ಬೇಕಿರಲಿಲ್ಲ. ಹಾಗಾಗಿ ನಗರದ ಸುಮಾರು ನಾಲ್ಕು ವಾರ್ಡುಗಳ ಯುಜಿಡಿ ನೀರು ನೇರವಾಗಿ ಕೆರಗೆಎ ಹರಿಯುತ್ತಲೇ ಇತ್ತು.
ಇದನ್ನು ಅರಿತ ನಗರಸಭೆ ಉಪಾಧ್ಯಕ್ಷರು, ಸಮಸ್ಯೆ ಯಾಕೆ ಬಂದಿದೆ, ಅದರ ನಿವಾರಣೆ ಹೇಗೆ ಎಂಬುದನ್ನು ತಿಳಿಯಲು ಇಂದು ನಗರಸಭೆ ಅಧಿಕಾರಿಗಳೊಂದಿಗೆ ನೇರವಾಗಿ ಈ ಕಂದವಾರ ಕೆರೆಯ ಬಳಿ ಆಕಮಿಸಿದ್ದಾರೆ. ಹಾಗೆ ಬಂದವರಿಗೆ ಅರ್ಥವಾಗಿದ್ದಾದರೂ ಏನು ಅಂತೀರಾ, ಯುಜಿಡಿಯ ಸುಮಾರು ನಾಲ್ಕೆದು ಮ್ಯಾನ್‌ಹೋಲ್‌ಗಳು ಮುಚ್‌ಚಲ್ಪಟ್ಟಿವೆ ಎಂಬುದು. ಈ ಹಿಂದೆ ಎಚ್‌ಎನ್ ವ್ಯಾಲಿ ನೀರು ಬಿಡುವ ಉಧ್ಧೇಶದಿಂದ ಕಂದವಾರ ಕೆರೆ ಮತ್ತು ಅದರ ಏರಿಯನ್ನು ಸ್ವಚ್ಛಗೊಳಿಸಲಾಗಿತ್ತು. ಹಾಗೆ ಸ್ವಚ್ಛಗೊಳಿಸುವ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ತನ್ನ ಕೆಲಸ ಮುಗಿಸುವುದಷ್ಟೇ ಮುಖ್ಯ ಎಂದು ಭಾವಿಸಿದ ಪರಿಣಾಮ ಈ ಸಮಸ್ಯೆ ಎದುರಾಗಿದೆ ಎಂಬುದು ಈಗ ಬಹಿರಂಗವಾಗಿರುವ ವಿಚಾರವಾಗಿದೆ.
ಕೆರೆ ಏರಿ ಸ್ವಚ್ಛಗೊಳಿಸುವ ವೇಳೆ ಕೆಳಗೆ ಮ್ಯಾನ್‌ಹೋಲ್‌ಗಳಿವೆ ಎಂಬುದನ್ನೂ ಗಮಿಸದ ಗುತ್ತಿಗೆದಾರ ಕೆರೆ ಏರಿಯ ಮಣ್ಣು ತಂದು ಕೆಳಗೆ ಸುರಿದಿದ್ದಾನೆ. ಹೀಗೆ ಸುರಿಯುವ ವೇಳೆ ಮ್ಯಾನ್‌ಹೋಲ್‌ಗಳೂ ಮುಚ್ಚಿಹೋಗಿವೆ. ಹಾಗೆ ಮುಚ್ಚಿಹೋದ ಕಾರಣ ಯುಜಿಡಿ ನೀರು ಒಳಗೆ ಹರಿಯಲಾಗದೆ, ಅದು ಚರಂಡಿಗೆ ಹರಿದು, ಚರಂಡಿ ಮೂಲಕ ಕಂದವಾರ ಕೆರೆ ಸೇರತ್ತಿದೆ. ಈಗ ಮುಚ್ಚಿ ಹೋದ ಮ್ಯಾನ್‌ಹೋಲ್‌ಗಳು ಎಷ್ಟು, ಅವು ಎಲ್ಲಿವೆ ಎಂಬುದನ್ನು ಪತ್ತೆ ಮಾಡಿ, ಅವನ್ನು ಸ್ವಚ್ಛಗೊಳಿಸಿದರೆ ಇಲ್ಲಿನ ಸಮಸ್ಯೆ ಪಿರಾಹರವಾಗಲಿದೆ. ಹಾಗಾಗಿಯೇ ನಗರಸಭೆ ಉಪಾಧ್ಯಕ್ಷರು ಜೆಸಿಬಿ ಮತ್ತು ಅಧಿಕಾರಿಗಳ ತಂಡದೊ0ದಿಗೆ ಆಗಮಿಸಿ, ಈ ಕೆಲಸ ಪ್ರಾರಂಭಿಸಿದ್ದಾರೆ.
ಇದು ಒಂದು ದಿನದಲ್ಲಿ ಮುಗಿಯೋ ಕೆಲಸವಲ್ಲ. ಹಾಗಾಗಿ ಮುಚ್ಚಿಹೋಗಿರುವ ಮ್ಯಾನ್‌ಹೋಲ್‌ಗಳ ಪತ್ತೆ ಕಾರ್ಯ ಇಂದು ಆರಂಭಿಸಲಾಗಿದ್ದು, ಅವುಗಳನ್ನು ಪತ್ತೆ ಮಡಾಇ, ಸ್ವಚ್ಛಗೊಳಿಸುವ ಮೂಲಕ ಕಂದವಾರ ಕೆರೆಗೆ ಹರಿಯುತ್ತಿರುವ ಯುಜಿಡಿ ನೀರು ನೇರವಾಗಿ ಒಳ ಚರಂಡಿಯಲ್ಲಿಯೇ ಹರಿಯುವಂತೆ ಮಾಡಲು ನಗರಸಭೆ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಹಲವು ತಿಂಗಳುಗಳ ನಂತರವಾದರೂ ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾದ ನಗರಸಬೆ ಉಪಾಧ್ಯಕ್ಷರ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣ ಯುಜಿಡಿ ನೀರು ಚರಂಡಿ ಮೂಲಕ ಕೆರೆಗೆ ಹರಿಯುತ್ತಿರುವ ಕಾರಣ ದುರ್ವಾಸನೆ ಬಾರುತ್ತಿದೆ. ಹಾಗೆ ಬೀರುತ್ತಿರುವ ದುರ್ವಾಸನೆಯಿಂದ ಸುತ್ತಮುತ್ತ ಇರೋ ನಿವಾಸಿಗಳು ಮನೆಯಲ್ಲಿ ಊಟ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಎಂದು ಸ್ಥಳೀಯರು ಹಲವು ಬಾರಿ ನಗರಸಭೆಗೆ ಮನವಿ ಮಡಾಇದ್ದರು. ಆದರೆ ನಗರಸಭೆ ಮಾತ್ರ ಥಅತ್ ತಿರುಗಿಯೂ ನೋಡಿರಲಿಲ್ಲ. ಸಿಟಿವಿ ನ್ಯೂಸ್‌ನಲ್ಲಿ ಈ ಸಂಬ0ಧ ಸುದ್ದಿ ಪ್ರಸಾರ ಮಾಡಿದಾಗ ಮಾತ್ರ ಹೋಗಿ ಪರಿಶೀಲನೆ ನಡೆಸುವಂತೆ ನಟಿಸಿದ ಅಧಿಕಾರಿಗಳು ಮತ್ತೆ ಅದನ್ನು ಮರೆತಿದ್ದರು.
ಆದರೆ ಇದೀಗ ನಗರಸಭೆ ಉಪಾಧ್ಯಕ್ಷರು ಈ ಸಮಸ್ಯೆ ಬಗೆಹರಿಸಿಯೇ ತೀರುವುದಾಗಿ ಮುಂದಾಗಿದ್ದು, ಆದಷ್ಟು ಬೇಗ ಈ ಸಮಸ್ಯೆ ನಿವಾರಣೆ ಮಡಾಇ, ಸ್ಥಳೀಯರನ್ನು ಸಂಕಷ್ಟದಿ0ದ ಪಾರು ಮಾಡುವಂತೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಗರಸಬೆ ಕಾರ್ಯೋನ್ಮುಖವಾಗಲಿ ಎಂದು ಹೇಳೋಣ ಅಲ್ಲವೆ.