ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ರಾಜ್‌ಕುಮಾರ್ ಕುಟುಂಬ ನಿಜವಾದ ರಾಯಭಾರಿಗಳು

1 min read

ರಾಜ್‌ಕುಮಾರ್ ಕುಟುಂಬ ನಿಜವಾದ ರಾಯಭಾರಿಗಳು

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿ0ದ ಅರ್ಥಪೂರ್ಣ ಕಾರ್ಯಕ್ರಮ

ರಾಜ್‌ಕುಮಾರ್ ಮತ್ತು ಅವರ ಕುಟುಂಬ ನಾಡು ನುಡಿಕಟ್ಟುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಕನ್ನಡದ ನಿಜದ ರಾಯಭಾರಿಗಳಾಗಿದ್ದಾರೆ ಎಂದು ಕಸಾಪ ಮಾಜಿ ಅಧ್ಯಕ್ಷ ಮನುಬಳಿಗಾರ್ ಹೇಳಿದರು.

ಚಿಕ್ಕಬಳ್ಳಾಪುರ ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕನ್ನಡ ಕ್ರಿಯಾ ಘಟಕ ಕಚೇರಿ ಆವರಣದಲ್ಲಿ ಇಂದು ಏರ್ಪಡಿಸಿದ್ದ ಡಾ. ರಾಜ್‌ಕುಮಾರ್ ಸಂಸ್ಮರಣೆ ಸಮಾರಂಭ ಹಾಗೂ 69ನೇ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್, ತಾಯಿ ಭುವನೇಶ್ವರಿಯನ್ನು ಸ್ತುತಿಸುವ ನಾಡ ಹಬ್ಬವಾದ ರಾಜ್ಯೋತ್ಸವ ಕನ್ನಡಿಗರ ಹೆಮ್ಮೆಯ ಕಾರ್ಯಕ್ರಮವಾಗಿದೆ ಎಂದರು.

ಅಖ0ಡ ಕರ್ನಾಟಕದ ಏಳುಬೀಳುಗಳ ಕುರಿತು ಬೆಳಕು ಚೆಲ್ಲುವ ಕೆಲಸವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಚಿಕ್ಕಬಳ್ಳಾಪುರ ಸಾರಿಗೆ ಸಂಸ್ಥೆಯ ಸಿಬ್ಬಂದಿ ರಾಜ್‌ಕುಮಾರ್ ಬದುಕಿನ ಸ್ಮರಣೋತ್ಸವದ ಮೂಲಕ ರಾಜ್ಯೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ. ಎಸ್.ಎ.ಚಿನ್ನೇಗೌಡ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವಂತೆ, ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕನ್ನಡ ಕೆಲಸ ಆಗಬೇಕಾದರೆ ರಾಜ್ ಕುಮಾರ್ ಅವರ ಅವರ ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿದರೆ ಸಾಕಿತ್ತು. ಕುಮಾರ ಗಂಧರ್ವರ ರಂಗಮ0ದಿರ ಕಟ್ಟಲು ಅವರನ್ನು ಬೆಳಗಾವಿಗೆ ಕರೆಸಿ ಕಾರ್ಯಕ್ರಮ ಮಾಡಿದಾಗ, ನಿಮ್ಮ ಸಂಭಾವನೆ ಎಷ್ಟು ಸರ್ ಎಂದು ಕೇಳಿದರೆ ಅವರು ನಯಾಪೈಸೆ ತೆಗೆದುಕೊಳ್ಳದೆ ಉಚಿತವಾಗಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಸಾಧಕರಿಗೆ ಗೌರವ ಸಲ್ಲಿಸಿದರು. ಇದು ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವು ಕೊಟ್ಟ ಘಟನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ ಮನು ಬಾಳಿಗಾರ್, ನಿರ್ಮಾಪಕ ಎಸ್ ಎ ಚೆನ್ನೆಗೌಡ, ವಿಭಾಗಿಯ ನಿಯಂತ್ರಣಾಧಿಕಾರಿ ಬಸವರಾಜು ಇದ್ದರು

About The Author

Leave a Reply

Your email address will not be published. Required fields are marked *