ಮುಂದುವರಿದ ಗಣಿ ಟಿಪ್ಪರ್‌ಗಳ ಅಠ್ಟಹಾಸ
1 min readಮುಂದುವರಿದ ಗಣಿ ಟಿಪ್ಪರ್‌ಗಳ ಅಠ್ಟಹಾಸ
ಮತ್ತೆ ಲಾರಿಗೆ ಡಿಕ್ಕಿ ಹೊಡೆದ ಗಣಿ ಟಿಪ್ಪರ್
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಚಾಲಕ
ಚಿಕ್ಕಬಳ್ಳಾಪುರದಲ್ಲಿ ಗಣಿ ಟಿಪ್ಪರ್ ಎಂಬ ಯಮಕಿಂಕರರಿಗೆ ಕಡಿವಾಣ ಹಾಕೋರೇ ಇಲ್ಲವಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಗಣಿ ಟಿಪ್ಪರ್‌ಗಳ ಅಟ್ಟಹಾಸ ಮುಂದುವರಿದಿದೆ. ಮೊನ್ನೆಯಷ್ಟೆ ಚದಲಪುರ ಕ್ರಾಸ್‌ನಲ್ಲಿ ಒಬ್ಬರನ್ನು ಬಲಿ ಪಡೆದಿದ್ದ ಟಿಪ್ಪರ್, ಇಂದು ಮತ್ತೆ ಅಪಘಾತ ಮಾಡಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹೌದು, ಗಣಿ ಟಿಪ್ಪರ್‌ಗಳು ಚಿಕ್ಕಬಳ್ಳಾಪುರದಲ್ಲಿ ಯಮರೂಪಿಗಳಾಗಿ ಬದಲಾಗಿವೆ. ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಮಾಡಿ, ಹೆದ್ದಾರಿ ಪ್ರಯಾಣಿಕರನ್ನು ನಿರಂತರವಾಗಿ ಬಲಿ ಪಡೆಯುತ್ತಿದ್ದರೂ ಸಂಬ0ಧಿಸಿದ ಅಧಿಕರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಟಿಪ್ಪರ್‌ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಟಿಪ್ಪರ್‌ಗಳ ಬಲಿಪೂಜೆ ಮುಂದುವರಿಯಲು ಇದು ಸಹಕಾರಿಯಾದಂತಿದೆ.
ಗಣಿ ಟಿಪ್ಪರ್‌ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಆರ್‌ಟಿಒ ಅಧಿಕಾರಿಗಳು, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ಇಲಾಖೆ, ಪರಿಸರ ಇಲಾಖೆಯ ಸೇರಿ ಹಲವು ಇಲಾಖೆಗಳಿಗೆ ಅಧಿಕಾರ ಇದೆ. ಅಧಿಕ ಭಾರ ಹೊತ್ತು ಅತಿ ವೇಗವಾಗಿ ಸಂಚಾರ ಮಾಡುವುದು ಸಾಮಾನ್ಯವಾಗಿದ್ದರೂ ಈ ಯಾವುದೇ ಇಲಾಖೆ ಟಿಪ್ಪರ್‌ಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಇನ್ನು ಮಿತಿಗಿಂತ ಹೆಚ್ಚು ತೂಕದ ಜೆಲ್ಲಿ, ಎಂ ಸ್ಯಾಂಡ್ ಹೊತ್ತು ಟಿಪ್ಪರ್‌ಗಳು ರಾಜಾರೋಷವಾಗಿ ರಾಷ್ಟಿಯ ಹೆದ್ದಾರಿಯಲ್ಲಿ ಸಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬ0ಭವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಟಿಪ್ಪರ್‌ಗಳ ಮಾಲೀಕರು ಅಧಿಕ ಭಾರಹೊತ್ತು ಅತಿ ವೇಗವಾಗಿ ಸಂಚರಿಸುವುದೇ ತಮ್ಮ ಹಕ್ಕು ಎಂಬ0ತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ ಜೆಲ್ಲಿ ಮತ್ತು ಎಂ ಸ್ಯಾಂಡ್ ತುಂಬಿದ ಟಿಪ್ಪರ್‌ಗಳ ಮೇಲೆ ಯಾವುದೇ ಹೊದಿಕೆ ಇಲ್ಲದೆ ಸಂಚಾರ ಮಾಡುತ್ತಿದ್ದು, ಈ ಟಿಪ್ಪರ್‌ಗಳಿಂದ ಜೆಲ್ಲಿಕಲ್ಲು ಬಿದ್ದು ಬಿಂದೆ ಬರುವ ಬೈಕ್‌ಗಳು ಅಪಘಾತಕ್ಕೆ ಈಡಾದರೆ, ಕಾರು ಸೇರಿದಂತೆ ಇತರೆ ನಾಲ್ಕು ಚಕ್ರದ ವಾಹನಗಳ ಮುಂದಿನ ಗಾಜು ಹೊಡೆದು ತೀವ್ರ ಸಂಕಷ್ಟಕ್ಕೆ ಸಿಲುಕಿದ ನಿದರ್ಶನಗಳು ಪ್ರತಿನಿತ್ಯ ನಡೆಯುತ್ತಲೇ ಇವೆ.
ಇಷ್ಟೆಲ್ಲ ನಡೆದು, ಸಾರ್ವಜನಿಕರ ಜೀವಗಳು ಹಾರಿಹೋಗುತ್ತಿದ್ದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಈ ಟಿಪ್ಪರ್‌ಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಹಾಗಾಗಿಯೇ ಇಂದು ಮತ್ತೊಂದು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಟಿಪ್ಪರ್ ಬಂದು ಲಾರಗಿ ಎಹಿಂಬದಿಯಿ0ದ ಡಿಕ್ಕಿ ಹೊಡೆದಿದೆ. ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟಿಯ ಹೆದ್ದಾರಿ 44ರಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಿಕ್ಕಬಳ್ಳಾಪುರ ತಾಲೂಕಿನ ಹೂನೆಗಲ್ ಗೇಟ್ ಸಮೀಪ ಅಪಘಾತ ನಡೆದಿದ್ದು, ಬಾಗೇಪಲ್ಲಿ ಯಿಂದ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದ ಲಾರಿಗೆ ಎದುರಿನಲ್ಲಿ ನಾಯಿ ಅಡ್ಡ ಬಂದ ಹಿನ್ನಲೇ ಲಾರಿ ವೇಗ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಹಿಂದೆ ಅಧಿಕ ಭಾರ ಹೊತ್ತು ಅತಿ ವೇಗವಾಗಿ ಬರುತ್ತಿದ್ದ ಗಣಿ ಟಿಪ್ಪರ್ ಬಂದು ಅಪ್ಪಳಿಸಿದೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಬಚಾವ್ ಆಗಿದ್ದಾನೆ. ಗಾಯಗೊಂಡ ಚಾಲಕರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ನಡೆದ ಸ್ಥಳಕ್ಕೆ 112 ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಸಂಬ0ಧಿಸಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರಂತರವಾಗಿ ಟಿಪ್ಪರ್‌ಗಳಿಂದ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬAಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸದಿದ್ದು, ಇನ್ನಾದರೂ ಟಿಪ್ಪರ್‌ಗಳ ಕಡಿವಾಣಕ್ಕೆ ಸಂಬ0ಧಿಸಿದವರು ಕಡಿವಾಣ ಹಾಕಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.