ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ಪ್ಲಾಸ್ಟಿಕ್ ವಶ
1 min readಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ಪ್ಲಾಸ್ಟಿಕ್ ವಶ
60 ಕೆಜಿ ಪ್ಲಾಸ್ಟಿಕ್ ವಶ, 22 ಸಾವಿರ ದಂಡ ವಿಧಿಸಿದ ಅಧಿಕಾರಿಗಳು
ಗೌರಿಬಿದನರು ನಗರದ ಹಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಮತ್ತು ನಗರಸಭೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದರು.
ಗೌರಿಬಿದನರು ನಗರದ ಹಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಮತ್ತು ನಗರಸಭೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ ಆಯುಕ್ತರ ಡಿ.ಎಂ. ಗೀತಾ ಮಾತನಾಡಿ,
ನಗರಸಭೆಯಿಂದ ಈ ಹಿಂದೆ ಹಲವು ಬಾರಿ ಪ್ಲಾಸ್ಟಿಕ್ ರೈಡ್ ಮಾಡಿ ದಂಡ ವಿಧಿಸಲಾಗಿದೆ. ಆದರೂ ಕೆಲ ಅಂಗಡಿ ಮತ್ತು ಬಾರ್ ಮಾಲೀಕರು ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡುಬ0ದಿದೆ. ಇಂದು ದಾಳಿ ನಡೆಸಿ 60 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 22 ಸಾವಿರ ದಂಡ ವಿಧಿಸಲಾಗಿದೆ ಎಂದರು.
ಇನ್ನಾದರೂ ಅಂಗಡಿ ಮತ್ತು ಬಾರ್ ಮಾಲೀಕರು ಎಚ್ಚೆತ್ತು ಪ್ಲಾಸ್ಟಿಕ್ ಬಳಕೆ ಮಾಡದೆ ನಿಷೇಧ ಮಾಡಿದರೆ ಉತ್ತಮ. ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವಾಯುಮಾಲಿನ್ಯ ಅಧಿಕಾರಿ ರಂಜಿತಾ ಮಾತನಾಡಿ, ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿದೆ, ಪ್ಲಾಸ್ಟಿಕ್ ಉಪಯೋಗದಿಂದ ಹಲವು ತೊಂದರೆ ಅಗುತ್ತದೆ ಎಂದು ಅರಿವು ಮೂಡಿಸಿದ್ದರೂ ಅಂಗಡಿ ಮಾಲೀಕರು ಇದನ್ನು ಉಪಯೋಗ ಮಾಡುತ್ತಾರೆ ಇದು ಕಾನೂನು ರೀತಿಯಲ್ಲಿ ಅಪರಾಧ ಎಂದರು.
ಹಲವು ಬಾರ್ ಮತ್ತು ರೆಸ್ಟೊರೆಂಟ್ ಮೇಲೆ ದಾಳಿ ಮಾಡಿ, ಅವರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ನಗರಸಭೆ ಕಿರಿಯ ಆರೋಗ್ಯ ಅಧಿಕಾರಿ ಶ್ವೇತ, ಸಿಬ್ಬಂದಿ ಮೊಹಮ್ಮದ್ ಸುಹೇಲ್ ಇದ್ದರು.