ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಸಮತಾ ಸೈನಿಕ ದಳಕ್ಕೆ ನೂರು ವರ್ಷ ಪೂರ್ಣ

1 min read

ಸಮತಾ ಸೈನಿಕ ದಳಕ್ಕೆ ನೂರು ವರ್ಷ ಪೂರ್ಣ

ದೇಶಾದ್ಯಂತ ಶತಮಾನೋತ್ಸವ ಸಂಭ್ರಮಾಚರಣೆ

ಅ0ಬೇಡ್ಕರ್ ಅವರ ಚಿಂತನೆಗಳಿ0ದ ಪ್ರೇರಿತವಾಗಿ ಸ್ಥಾಪಿತವಾದ ಸಮತ ಸೈನಿಕ ದಳ ನೂರು ವರ್ಷಗಳನ್ನು ಪೂರೈಸಿದ ಸಂತಸವನ್ನು ದೇಶಾದ್ಯಂತ ವಿಜೃಂಭಣೆಯಿ0ದ ಆಚರಿಸುತ್ತಿದೆ. ನೂರು ವರ್ಷ ಪೂರೈಸಿದ ಅಂಗವಾಗಿ ದೇಶದ ವಿವಿಧ 100 ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ಹೇಳಿದರು.

ಸಮತಾ ಸೈನಿಕ ದಳದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ವೆಂಕಟರೋಣಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನವೆಂಬರ್ 26ರಂದು ಚಿಕ್ಕಬಳ್ಳಾಪುರದಲ್ಲಿ ಸಮತಾ ಸೈನಿಕ ದಳ ನೂರು ವರ್ಷಗಳ ಸಂಭ್ರಮಾಚರಣೆ ಅದ್ಧೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ನಾಯಕರು, ವಿವಿಧ ರಾಜ್ಯಗಳಿಂದ ಬರುವ ಗಣ್ಯಾತಿಗಣ್ಯರು, ಸಂವಿಧಾನ ತಜ್ಞರು ಹಾಗೂ ಬುದ್ಧಿಜೀವಿಗಳು ಭಾಗವಹಿಸಲಿದ್ದಾರೆ. ಸಮತಾ ಸೈನಿಕ ದಳ ಎಲ್ಲಾ ವರ್ಗ ಮತ್ತು ಜಾತಿಗಳನ್ನು ಒಳಗೊಂಡಿರುವ ಜನಸಾಮಾನ್ಯರ ಸಂಘಟನೆ. ಈ ಸಂಘಟನೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಿಲ್ಲದೆ, ಸಮಾನತೆ ಮತ್ತು ನ್ಯಾಯದ ಪರವಾಗಿ ಕೆಲಸ ಮಾಡುತ್ತಿದೆ. ದಲಿತರ ಸಮಸ್ಯೆಗಳಿಗೆ ಧ್ವನಿಯಾಗಿರುವ ಸಮತಾ ಸೈನಿಕ ದಳ ಅನೇಕರ ಬದುಕು ಬೆಳಗಿಸಿದೆ.
ಸಮಾಜಿಕ ಅಸಮತೆ ನಿವಾರಣೆಗೆ ಮತ್ತು ಸಾಮೂಹಿಕ ನ್ಯಾಯವನ್ನು ಸಾಧಿಸಲು ಸಂಘಟನೆ ನಿರಂತರ ಶ್ರಮಿಸುತ್ತಿದೆ ಎಂದು ಹೇಳಿದರು.

ದೇಶದ ದಲಿತರ ಮತ್ತು ಶೋಷಿತ ವರ್ಗದ ಸಮಸ್ಯೆಗಳಿಗೆ ಸ್ಪಂದಿಸಲು ಸೈನಿಕ ದಳ ಎನ್‌ಡಿಎ ಜೊತೆ ಸಹಭಾಗಿತ್ವದಲ್ಲಿರುವುದು ಅರ್ಥಪೂರ್ಣ. ಸಾರ್ವಜನಿಕರ ತೊಂದರೆಗಳಿಗೆ ಸ್ಪಂದಿಸುವ ಈ ಸಂಘಟನೆ ಜನಮಾನ್ಯರ ಅಗತ್ಯಗಳನ್ನು ಪೂರೈಸಲು ನಿರಂತರವಾಗಿ ದುಡಿಯುತ್ತಿದೆ. ಈಗಾಗಲೇ ದೇಶಾದ್ಯಂತ ನಡೆಯುತ್ತಿರುವ ಸಂಭ್ರಮಾಚರಣೆಗಳಲ್ಲಿ, ಚಿಕ್ಕಬಳ್ಳಾಪುರ ಕಾರ್ಯಕ್ರಮ ವಿಶೇಷ ಗಮನ ಸೆಳೆಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಈಶ್ವರಪ್ಪ, ಅಶ್ವತ್ಥಪ್ಪ, ಪ್ರಕಾಶ್, ಮುನಿ ಅಂಜನಪ್ಪ ,ಮುನಿರಾಜು ಇದ್ದರು.

About The Author

Leave a Reply

Your email address will not be published. Required fields are marked *