ನ್ಯುಮೋನಿಯಾ ತಡೆಯಲು ಪೌಷ್ಠಿಕಾಂಶಗಳ ಅಗತ್ಯ
1 min read
ನ್ಯುಮೋನಿಯಾ ತಡೆಯಲು ಪೌಷ್ಠಿಕಾಂಶಗಳ ಅಗತ್ಯ
ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ. ಮಂಜುನಾಥ್
ಮಕ್ಕಳಲ್ಲಿ ನ್ಯುಮೋನಿಯಾ ಅಸಹಜ ಉಸಿರಾಟ ಮಾದರಿಗಳನ್ನು ಗಮನಿಸಿ ಮಗುವಿನ ಶ್ವಾಸಕೋಶ ಆಲಿಸುವುದು ಸೇರಿದಂತೆ ದೈಹಿಕ ಪರೀಕ್ಷೆ ಮೂಲಕ ಆರೋಗ್ಯ ಕಾರ್ಯಕರ್ತರು ನ್ಯುಮೋನಿಯಾ ಎಂದು ನಿರ್ಣಯಿಸಬಹುದು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ನಗರದ ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ಇಂದು ಆಯೋಜಿಸಿದ್ದ ನವಜಾತ ಶಿಶು ಸಪ್ತಾಹ 2024 ಮತ್ತು ಮಕ್ಕಳಲ್ಲಿ ನ್ಯೂಮೋನಿಯಾ ತಡೆಯಲು ಅಭಿಯಾನ ಸಪ್ತಾಹ ಉದ್ಘಾಟಿಸಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿದರು. ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ೬ ತಿಂಗಳು ಎದೆಹಾಲು ಮಾತ್ರ ನೀಡುವುದು, ಪೌಷ್ಠಿಕಾಂಶ ಒದಗಿಸಿವುದು, ಸಮಯಕ್ಕೆ ಸರಿಯಾಗಿ ಚುಚ್ಚು ಮದ್ದನ್ನು ಹಾಕಿಸುವುದು, ಮನೆಯೊಳಗೆ ಮಾಲಿನ್ಯ ನಿಯಂತ್ರಿಸುವುದರಿ0ದ ರೋಗ ನಿಯಂತ್ರಣ ಸಾಧ್ಯ ಎಂದರು.
ವಿಶ್ವ ನ್ಯೂಮೋನಿಯಾ ದಿನ ಹಾಗೂ ಸಪ್ತಾಹವನ್ನು ಜಿಲ್ಲೆಯಲ್ಲಿ ನವೆಂಬರ್ 12 ರಿಂದ 28 ರ ವರಗೆ ಜಾಗೃತಿ ಮೂಡಿಸುವ ವಿವಿಧ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ. ಮಂಜುನಾಥ್, ಜಿಲ್ಲಾ ಶಸ್ತಚಿಕಿತ್ಸಕಿ ಡಾ. ಮಂಜುಳಾದೇವಿ, ಆರ್ಸಿಹೆಚ್ ಅಧಿಕಾರಿ ಡಾ. ಸಂತೋಷ್ ಬಾಬು, ತಾಲ್ಲೂಕು ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ಚಂದ್ರ ಶೇಖರ್ ರೆಡ್ಡಿ, ನೋಡಲ್ ಅಧಿಕಾರಿ ಡಾ. ವಿಜಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ, ಡಾ. ಪ್ರಕಾಶ್ ಇದ್ದರು.