ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಶಿಡ್ಲಘಟ್ಟ ತಾಲೂಕಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ

1 min read

ಶಿಡ್ಲಘಟ್ಟ ತಾಲೂಕಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ

ಕನ್ನಡ ಜ್ಯೋತಿ ರಥಯಾತ್ರೆಗೆ ಲಕ್ಕಹಳ್ಳಿ ಗೇಟ್‌ನಲ್ಲಿ ಆತ್ಮೀಯ ಸ್ವಾಗತ

ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, ತಹಸೀಲ್ದಾರ್ ಬಿ.ಎನ್. ಸ್ವಾಮಿ ಸೇರಿದಂತೆ ಕನ್ನಡಪರ ಸಂಘಟನೆಗಳಿ0ದ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ರಥಕ್ಕೆ ಹೂವಿನ ಹಾರ ಹಾಕಿ, ಕೈ ಮುಗಿದು ನಮಿಸಿ, ಸಂಭ್ರಮದಿ0ದ ರಥಯಾತ್ರೆ ಬರಮಾಡಿಕೊಂಡರು.

ಕನ್ನಡ ಜ್ಯೋತಿ ರಥಯಾತ್ರೆ ಇಂದು ಶಿಡ್ಲಘಟ್ಟ ತಾಲೂಕಿಗೆ ಆಗಮಿಸಿದ್ದು, ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, ಒಕ್ಕೂಟದ ವ್ಯವಸ್ಥೆಯಲ್ಲಿ ನಾಡು ಎಷ್ಟು ಮುಖ್ಯವೋ ದೇಶವೂ ಅಷ್ಟೆ ಮುಖ್ಯ, ದೇಶದ ಸ್ವಾತಂತ್ರ ಹಾಗೂ ನಾಡನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಆ ಮೂಲಕ ಉತ್ತಮ ನಾಡನ್ನು ಕಟ್ಟಿ ಬೆಳೆಸಬೇಕೆಂದು ಮನವಿ ಮಾಡಿದರು.

ಆಂಧ್ರದ ಗಡಿಯಲ್ಲಿದ್ದು, ಇಲ್ಲಿ ತೆಲುಗು ಭಾಷೆ ಪ್ರಭಾವ ಇದೆ. ಇಲ್ಲಿ ಕನ್ನಡ ಪರ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯದ ಎಲ್ಲ ವಿಧಾನಸಭ ಕ್ಷೇತ್ರಗಳಲ್ಲೂ ನಡೆಸುತ್ತಿದೆ. ಶಿಡ್ಲಘಟ್ಟಕ್ಕೆ ಆಗಮಿಸಿದ ರಥವನ್ನು ಎಲ್ಲರೂ ಜಾತಿ ಧರ್ಮ ತಾರತಮ್ಯವಿಲ್ಲದೆ ಸಂಭ್ರಮದಿAದ ಬರ ಮಾಡಿಕೊಂಡಿದ್ದು, ಎಲ್ಲರಿಗೂ ತಾಲೂಕು ಆಡಳಿತದ ಪರವಾಗಿ ಅಭಿನಂದನೆ ತಿಳಿಸುವುದಾಗಿ ಹೇಳಿದರು.

ಕನ್ನಡ ಜ್ಯೋತಿ ರಥಯಾತ್ರೆಯು ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತ, ಕೆಂಪಣ್ಣ ವೃತ್ತ, ದಿಬ್ಬೂರಹಳ್ಳಿ ಅಂಡರ್ ಪಾಸ್ ವೃತ್ತದ ಮೂಲಕ ದಿಬ್ಬೂರಹಳ್ಳಿ ಮಾರ್ಗದಲ್ಲಿ ಸಾಗಿತು. ರಥದ ಮುಂದೆ ತಲೆ ಮೇಲೆ ಕಳಶ ಹೊತ್ತು ಸಾಗಿದ ಮಹಿಳೆಯರು, ಕೈಯಲ್ಲಿ ನಾಡ ಧ್ವಜ ಹಿಡಿದ ವಿದ್ಯಾರ್ಥಿಗಳ ಸಾಲು, ತಮಟೆ ಇನ್ನಿತರೆ ಜನಪದ ಕಲಾ ತಂಡಗಳ ನೃತ್ಯ ಕನ್ನಡ ಜ್ಯೋತಿಯ ರಥಯಾತ್ರೆಗೆ ಇನ್ನಷ್ಟು ಕಳೆ ಕಟ್ಟಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ನಾಗರಿಕರು ಕನ್ನಡ ಜ್ಯೋತಿ ರಥಯಾತ್ರೆ ಕಣ್ತುಂಬಿಕೊ0ಡರು.

ತಹಸೀಲ್ದಾರ್ ಬಿ.ಎನ್. ಸ್ವಾಮಿ, ಇಒ ಹೇಮಾವತಿ, ಬಿಇಒ ನರೇಂದ್ರ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ನಗರಸಭೆ ಪೌರಾಯುಕ್ತ ಮಂಜುನಾಥ್, ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ಕೆ.ಎನ್. ಸುಬ್ಬಾರೆಡ್ಡಿ. ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಮುನಿಕೆಂಪಣ್ಣ, ರವಿಪ್ರಕಾಶ್, ಕಸಾಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ವಚನ ಸಾಹಿತ್ಯ ಪರಿಷತ್‌ನ ಚಲಪತಿ ಇದ್ದರು.

About The Author

Leave a Reply

Your email address will not be published. Required fields are marked *