ವಾಟರ್ ಬಿಲ್‌ಗಾಗಿ ನಗರಸಭಾ ಸದಸ್ಯರ ಟಾಕ್ ವಾರ್
1 min readವಾಟರ್ ಬಿಲ್‌ಗಾಗಿ ನಗರಸಭಾ ಸದಸ್ಯರ ಟಾಕ್ ವಾರ್
ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶ
ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್ ನೀಡುತ್ತಿರುವ ನಂಜನಗೂಡಿನ ನಗರಸಭೆ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂಜನಗೂಡು ನಗರದ ನಗರಸಭಾ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಆಯುಕ್ತ ನಂಜು0ಡಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಾಟರ್ ಬಿಲ್ ಗಾಗಿ ನಗರಸಭಾ ಸದಸ್ಯರ ಟಾಕ್ ವಾರ್ ಜೋರಾಗಿಯೇ ನಡೆಯಿತು.
ನಂಜನಗೂಡು ನಗರ ಸಭಾ ಅಧ್ಯಕ ಶ್ರೀಕಂಠ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ನಮ್ಮ ಅಧಿಕಾರದ ಅವಧಿಯಲ್ಲಿ ಈ ರೀತಿ ನಡೆದಿರಲಿಲ್ಲ. ಕುಡಿಯುವ ನೀರಿನ ಬಿಲ್ ೮೦ ಸಾವಿರಕ್ಕೆ ಏರಿಕೆಯಾಗಿದೆ. ಸಾಮಾನ್ಯ ಜನರು ನೀರಿನ ಬಿಲ್ ಕಟ್ಟುವುದಾದರೂ ಹೇಗೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ ಮತ್ತು ಸದಸ್ಯ ಮಹದೇವಪ್ರಸಾದ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಭೆ ಮುಗಿಯುವ ತನಕ ಗದ್ದಲದ ಗೂಡಾಗಿಯೇ ಸಭೆ ಪರಿಣಮಿಸಿತು.
ಅಧಿಕಾರಿಗಳ ದುರಾಡಳಿತದಿಂದ ನಂಜನಗೂಡಿನ ಜನರು ಈಗಾಗಲೇ ರೊಚ್ಚಿಗೆದ್ದಿದ್ದಾರೆ ಕೂಡಲೇ ನಗರಸಭೆ ಆಡಳಿತ ಎಚ್ಚೆತ್ತುಕೊಂಡು ಕುಡಿಯುವ ನೀರಿಗೆ ನೀಡುತ್ತಿರುವ ಬಿಲ್ಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ನಲ್ಲಿಗಳಿಗೆ ಅಳವಡಿಸಿರುವ ಮೀಟರ್‌ಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ