ನಿರಾಶ್ರಿತ ವಯೋವೃದ್ಧರಿಗಾಗಿ ಸಿದ್ಧವಾಗುತ್ತಿದೆ ರಾಮಕೃಷ್ಣ ಆಶ್ರಮ
1 min readನಿರಾಶ್ರಿತ ವಯೋವೃದ್ಧರಿಗಾಗಿ ಸಿದ್ಧವಾಗುತ್ತಿದೆ ರಾಮಕೃಷ್ಣ ಆಶ್ರಮ
ಅಗಲಗುರ್ಕಿ ಸಮೀಪ ಸಿದ್ಧವಾಗುತ್ತಿರುವ ಅನಾಥಾಶ್ರಮ
ತಂದೆತಾಯಿ, ಅತ್ತೆಮಾವಂದಿರನ್ನು ನೋಡಿಕೊಳ್ಳಲಾಗದೆ ನಿರಾಶ್ರಿತರಾಗುವ ವೃದ್ಧರಿಗಾಗಿ ಉಚಿತ ವಸತಿ, ಊಟ ಆರೋಗ್ಯ ಅತ್ಯಾದುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಚಿಕ್ಕಬಳ್ಳಾಪುರ ನಗರ ಹೊರವಲಯದ ಅಗಲಗುರ್ಕಿ ಸಮೀಪದ ರಾಮಕೃಷ್ಣಪ್ಪ ಆಶ್ರಮ ಇದೀಗ ವೃದ್ಧರ ಆರೈಕೆ ಮಾಡಲು ಸಿದ್ದವಾಗಿದೆ.
ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ದಲಿತರ, ಬಡವರ ಕಷ್ಟಗಳಿಗೆ ಸ್ಪಂಧಿಸುತ್ತಿರುವ ಸಮಾಜ ಸೇವಕ ಈಗ ಅಗಲಗುರ್ಕಿ ಸಮೀಪ ಬಡವರಿಗೆ ತಮ್ಮದೇ ಆದ ಜಮೀನಿನಲ್ಲಿ ಅನಾಥ ಆಶ್ರಮ ಸಿದ್ದಪಡಿಸಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಘಟನೆಯಿ0ದ ಈಗ ಸಾಮಾಜಿಕ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲಾ, ಸಮಾಜಸೇವೆ ಸಂಘಟನೆ ಎಂದರೆ ಬೇರೆ ಅರ್ಥದಲ್ಲಿ ನೋಡುತ್ತಾರೆ, ಹಾಗಾಗಿ ಬಡವರಿಗೆ ಊಟ ಹಾಕಲು ನಿರ್ಧಾರ ಮಾಡಿದ್ದು, ಆಶ್ರಮ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಆಶ್ರಮದಲ್ಲಿ ಉಚಿತ ಊಟ ವಸತಿ, ಬಟ್ಟೆ, ಓದುವ ವಿದ್ಯಾರ್ಥಿಗಳಿದ್ದರೇ ವಿದ್ಯಾಭ್ಯಾಸದ ಸೌಲಭ್ಯ ಕಲ್ಪಿಸಲಾಗುತ್ತದೆ. ತಂದೆತಾಯಿ ಅತ್ತೆಮಾವ ಮಕ್ಕಳನ್ನು ನೋಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದರೆ ರಾಮಕೃಷ್ಣ ಆಶ್ರಮಕ್ಕೆ ಸೇರಿಸಿ ಎಂದು ಟ್ರಸ್ಟ್ ಮುಖಂಡ ಮನವಿ ಮಾಡಿದ್ದಾರೆ. ಆಶ್ರಮದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಏರ್ಪಡಿಸಲಾಗಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದೆಂದು ಆಶ್ರಮದ ಸೇವೆಗಳ ಬಗ್ಗೆ ತಿಳಿಸಿದರು.