ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಹೋರಾಟ
1 min readಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಹೋರಾಟ
ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಬೀದಿಗಿಳಿದ ಬಿಜೆಪಿ
ಸಿದ್ದರಾಮಯ್ಯ, ಜಮೀರ್ ಅಹ್ಮದ್ ವಿರುದ್ಧ ತೀವ್ರ ಆಕ್ರೋಶ
ಸರ್‌ಎಂವಿ ಓದಿದ ಶಾಲೆಯಲ್ಲಿ ದರ್ಗಾ, ಮಸೀದಿಗೆ ವಿರೋಧ
ನಮ್ಮ ಭೂಮಿ ನಮ್ಮ ಹಕ್ಕು, ಅವರಪ್ಪನದೂ ಅಲ್ಲ, ವಕ್ಫ್ ಅಪ್ಪನದೂ ಅಲ್ಲ, ಲವ್ ಜಿಹಾದ್ ಆಯ್ತು, ಈಗ ಲ್ಯಾಂಡ್ ಜಿಹಾದ್ ಆರಂಭವಾಗಿದೆ, 1994ರಲ್ಲಿ ಕಾಂಗ್ರೆಸ್ ಮಾಡಿದ ಕಾಯ್ದೆ ವಕ್ಪ್ ಎಂಬ ಪಿಶಾಚಿಗೆ ಎಲ್ಲ ಅಧಿಕಾರವನ್ನೂ ನೀಡಿದ ಪರಿಣಾಮ ಇಂದು ನಮ್ಮ ಮನೆಯಲ್ಲಿ ನಾವೇ ಪರಕೀಯರಾಗಿದ್ದೇವೆ. ಈ ಗಜೆಟ್ ವಾಪಸ್ ಪಡೆದು, ರೈತರ, ದೇವಾಲಯಗಳ, ಮಠಗಳ ಭೂಮಿ ವಾಪಸ್ ಬರೋವರೆಗೂ ಹೋರಾಟ ಮುಂದುವರಿಯಲಿದೆ. ಹೀಗಂತ ವಿಪಕ್ಷ ನಾಯಕ ಆರ್. ಅಶೋಕ್ ಘೋಷಣೆ ಮಾಡಿದರು.
ಹೌದು, ಚಿಕ್ಕಬಳ್ಳಾಪುರದಲ್ಲಿ ಇಂದು ವಕ್ಫ್ ದಬ್ಬಾಳಿಗೆ ವಿರುದ್ಧ ಆಕ್ರೋಶ ಮೂಗಿಲೆದ್ದಿತ್ತು. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹೋರಾಟ ನಡೆಯಿತು. ಭಾರತ ರತ್ನ, ವಿಶ್ವದ ಶ್ರೇಷ್ಠ ಎಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ಓದಿದ ಶಾಲೆಯೂ ಇಂದು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸಾವಿರಾರು ರೈತರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ, ನಾಡಿಗೆ ಅನ್ನ ಕೊಟ್ಟ ಭೂಮಿ ವಕ್ಫ್ ಬೋರ್ಡ್ ಹೆಸರಲ್ಲಿದೆ, ಕೊಳ್ಳಿದೆವ್ವದ ರೀತಿ ವಕ್ಫ್ ಬೋರ್ಡ್ ಹೋದಲ್ಲೆಲ್ಲ ಬೆಂಕಿ ಹಚ್ಚಿಕೊಂಡು ಬರುತ್ತಿದೆ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಾಲೆಯನ್ನೂ ಬಿಟ್ಟಿಲ್ಲ, ಪ್ರಧಾನಿ ಸೇರಿ ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಅನೇಕ ಗಣ್ಯರು ಬಂದಿರುವ ಜಾಗ ಇದು, ಕೆಆರ್‌ಎಸ್ ಸೇರಿ ಅನೇಕ ಅಣೆಕಟ್ಟುಗಳ ನಿರ್ಮಾಣ ಮಾಡಿದ ಸರ್‌ಎಂವಿ ಅವರು ಓದಿದ ಶಾಲೆಯೇ ವಕ್ಫ್ ಹೆಸರಿನಲ್ಲಿದೆ, ಲ್ಯಾಂಡ್ ಜಿಹಾದ್‌ಗೆ ತೆರೆ ಎಳೆಯಲು ನಾವು ಇಲ್ಲಿಗೆ ಬರಲಾಗಿದೆ, ನೂರು ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಶಾಲೆ, ಸುತ್ತಲೂ ಕಾಂಪೌ0ಡ್ ಇದೆ, ಈ ಕಾಂಪೌ0ಡ್ ಒಳಗೆ ಮಸೀದ ಬಂದಿದ್ದಾರೂ ಹೇಗೆ, ಅಂಗನವಾಡಿ ಸೇರಿ ಮಕ್ಕಳು ಓದುತ್ತಿದ್ದಾರೆ, ಈ ಶಾಲೆಯ ಮಧ್ಯ ದರ್ಗಾ ಬಂದಿದೆ, ನೂರು ವರ್ಷಗಳಿಂದ ಇದು ಶಾಲೆಯಾಗಿದೆ, ಯಾವ ಕಳ್ಳ, ಖದೀಮ ಇದಕ್ಕೆ ಅರ್ಜಿ ಸಲ್ಲಿಸಿದ
ಗೋರಿ ಇಟ್ಟು, ಹಸಿರು ಭಾವುಟ ಹಾರಿಸಲಾಗಿದೆ ಎಂದು ಪ್ರಶ್ನಿಸಿದರು.
ವರ್ಷದ ೩೬೫ ದಿನವೂ ಇಲ್ಲಿ ಹಸಿರು ಭಾವುಟ ಹಾರುತ್ತಿದೆ, ಇದರಿಂದ ಮಕ್ಕಳಿಗೆ ಯಾವ ಸಂದೇಶ ನೀಡುತ್ತೀರಿ, ಶಾಲೆ ಒಳಗೇ ದರ್ಗಾ, ಮಸೀದಿ, ಹಸಿರು ಭಾವುಟ, ಮನೆಹಾಳು ಕಾಂಗ್ರೆಸ್ ಬಂದು ಇಂತಹ ಕೆಲಸ ನಡೆಯುತ್ತಿದೆ, ವಿಶ್ವದ 7 ಅದ್ಭುತಗಳ ಜೊತೆ ಇದು ಎಂಟನೇ ಅದ್ಭುತ. ಮಕ್ಕಳು ಮತಾಂತರ ಆಗಲಾ, ಲವ್ ಜಿಹಾದ್ ಮಾಡಲಾ ಇಲ್ಲಿ ಮಸೀದಿ ದರ್ಗಾ ನಿರ್ಮಿಸಲಾಗಿದೆ. ಶಾಲೆ ಕೇಂದ್ರ ಭಾಗದಲ್ಲಿ ಹಸಿರು ಭಾವುಟ ಹೇಗೆ ಹಾರಿಸಿದರಿ, ದಿನಾ ಮಸೀದಿಯಲ್ಲಿ ಕೂಗಿದರೆ ಮಕ್ಕಳು ಹೇಗೆ ವ್ಯಾಸಂಗ ಮಾಡಲು ಸಾಧ್ಯ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಮತಾಂತರಕ್ಕೆ ಬಂಬಲ ನೀಡುತ್ತಿದ್ದೀರಾ, ಸರ್‌ಎಂವಿ ಓದಿದ ಜಾಗಕ್ಕೆ ಇಷ್ಟು ಅಪಮಾನ ಮಾಡಿದ್ದೀರಿ, ನಾವು ಬರುತ್ತಿರುವ ಬಗ್ಗೆ ತಿಳಿಯುತ್ತಿದ್ದಂತೆ ಒಂದೇ ವಾರದಲ್ಲಿ ಹೆಸರು ಬದಲಾವಣೆ ಮಾಡಿದ್ದಾರೆ, ವಿರೋಧ ಪಕ್ಷದ ಶಕ್ತಿ ಏನು ಅನ್ನೋದು ಇದರಿಂದ ತಿಳಿಯುತ್ತಿದೆ. ಮಂಡ್ಯ ಜಿಲ್ಲೆಯ ಮಹದೇವಪುರದಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಇಲ್ಲ, 400 ವರ್ಷ ಇತಿಹಾಸವುಳ್ಳ ಚಿಕ್ಕಮ್ಮ ದೇವಾಲಯದ ಜಾಗ ಸ್ಮಶಾನ ಎಂದು ನಮೂದಿಸಿದ್ದಾರೆ. ಹಿಂದೂಗಳ ಮುಜರಾಯಿಗೆ, ಸಿಖ್, ಜೈನ, ಬೌದ್ಧರಿಗೆ ಯಾವುದೇ ಅನುಕೂಲಗಳಿಲ್ಲ
ಮೊದಲ ಹಕ್ಕು ಇರೋದು ಮುಸಲ್ಮಾನರಿಗೆ ಅಂತ ಮನಮೋಹನ್ ಸಿಂಗ್ ಅವರೇ ಹೇಳಿದ್ದಾರೆ ಎಂದರು.
ನ್ಯಾಯ0ಗದ ಶಕ್ತಿ ಕಾಂಗ್ರೆಸ್‌ನವರೇ ವಕ್ಫ್ಗೆ ನೀಡಿದ್ದಾರೆ, ಮುಸಲ್ಮಾನರಿಗೆ ಅವರದೇ ಕೋರ್ಟ್, ಅವರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. 94ರ ಗಜೆಟ್ ಹಿಂಪಡೆಯದಿದ್ದರೆ ಇದೇ ಸಮಸ್ಯೆ ಮುಂದುವರಿಯಲಿದೆ. ಗೌರಿಬಿದನೂರಿನಲ್ಲಿಯೂ ಪಿತ್ರಾರ್ಜಿತ ಆಸ್ತಿಯೇ ವಕ್ಫ್ಗೆ ಸೇರಿದ್ದು ಎಂದಿದ್ದಾರೆ, ರಾಜ್ಯದಲ್ಲಿ ಎಲ್ಲಿಯೇ ಸಮಸ್ಯೆ ಇದ್ದರೂ ನಾವು ಬಂದು ಪರಿಹಾರ ಮಾಡುತ್ತೇವೆ, ವಿರೋಧ ಪಕ್ಷದ ಪವರ್ ಕಾಂಗ್ರೆಸ್‌ಗೆ ತೋರಿಸಿಕೊಟ್ಟಿದ್ದೇವೆ, ಇದೇ ರೀತಿ ಎಲ್ಲ ಬದಲು ಮಾಡಬೇಕು, ಇಲ್ಲವಾದರೆ ನಿಮ್ಮನ್ನು ಒದ್ದು ಓಡಿಸಲಿದ್ದಾರೆ ರಾಜ್ಯದ ಜನ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪಾಪದ ಕೊಡ ವಕ್ಫ್ ಬೋರ್ಡಿನಲ್ಲಿ ತುಂಬಿ ತುಳುಕುತ್ತಿದೆ, 94 ಗಡೆಟ್ ರದ್ದು ಮಾಡಬೇಕು, ನೋಟಿಸ್ ಮಾತ್ರ ವಾಪಸ್ ಪಡೆದಿದ್ದೀರಿ, ನಿಮಗೆ ಕಣ್ಣಿದ್ದರೆ, ಶಾಲೆ ಮಧ್ಯ ಹೇಗೆ ಮಸೀದಿ ಬಂತು, ಭಾವುಟ ಹೇಗೆ ಬಂತು, ದರ್ಗಾ ಹೇಗೆ ಬಂತು ಹೇಳಿ
ವಕ್ಫ್ ಬೋರ್ಡ್ ಪಿಶಾಚಿ ಇದ್ದಂಗೆ, ಪಿಶಾಚಿಗಳು ಸ್ಮಶಾನದಲ್ಲಿ ಮಾತ್ರ ಈವರೆಗೂ ಇತ್ತು, ಈಗ ಊರೆಲ್ಲಾ ತುಂಬಿವೆ. ಈ ಪಿಶಾಚಿಯನ್ನು ಕಟ್ಟಿ ಹಾಕಿ, ಭೂತ ದಹನ ಮಾಡಲು ಬಿಜೆಪಿ ಬಂದಿದೆ, ವಿಶ್ವೇಶ್ವರಯ್ಯನವರ ಜನ್ಮ ಭೂಮಿಯಲ್ಲಿ ಪ್ರತಿಜ್ಞೆ ಮಾಡುತ್ತಿದ್ದೇವೆ, ರಾಜ್ಯದ ಎಲ್ಲ ದೇವಾಲಯ, ಮಠ, ರೈತರ ಜಮೀನು ಅವರಿಗೆ ಸೇರಬೇಕು, ನಮ್ಮ ಭೂಮಿ ನಮ್ಮ ಹಕ್ಕು, ಇವರಪ್ಪನದಲ್ಲ, ವಕ್ಫ್ ಬೋರ್ಡಿನ ಅಪ್ಪನದೂ ಅಲ್ಲ, ನಮ್ಮ ಮನೆಯಲ್ಲಿ ನಾವೇ ಪರಕೀಯರಾಗಿದ್ದೇವೆ, ಇದು ಸಿದ್ದರಾಮಯ್ಯನವರಿಂದ ಆಗಿದೆ, ಈ ಸಮಸ್ಯೆ ಪರಿಹಾರ ಆಗೋವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಯಾವರೀತಿ ಆಡಳಿತ ಮಾಡುತ್ತಿದೆ ಎಂಬುದಕ್ಕೆ ಇದು ನಿದರ್ಶನ, ಬ್ರಿಟೀಷರು ರೀತಿಯಲ್ಲಿ ಒಡೆದು ಆಳುವ ನೀತಿ ಕಾಂಗ್ರೆಸ್ ಸರ್ಕಾರ ಕಲಿತಿದೆ, ನಾಡಿನ ಜನರನ್ನು ಒಡೆದು ಆಳುವ ನೀತಿ ಮುಂದುವರಿಸಿದ್ದಾರೆ, ಹನುಮನ ಧ್ವಜ ಕಟ್ಟಿದರೆ ಇಳಿಸುತ್ತಾರೆ, ಅಯೋಧ್ಯ ಮಂದಿರಕ್ಕೆ ಹೋಗಲ್ಲ ಅಂತಾರೆ, ಕರಸೇವಕರನ್ನು ಬಂಧಿಸಿ ಜೈಲಿಗೆ ಹಾಕ್ತಾರೆ, ವಿನಾಯಕನನ್ನು ಆರಾಧಿಸಿದರೆ ಗಣೇಶನನ್ನೇ ಬಂಧಿಸುತ್ತಾರೆ ಇದು ಕಾಂಗ್ರೆಸ್ ನೀತಿ ಎಂದರು.
ಡಿಜೆ ಹಾಕಂಗಿಲ್ಲ, ಎಸ್‌ಪಿ, ಡಿಸಿಯವರೇ ಕಾಂಗ್ರೆಸ್ ನಾಯಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಯಾವ ಅಧಿಕಾರ ಶಾಶ್ವತವಲ್ಲ, ೨೦೧೩ರಲ್ಲಿ ಕಾಯ್ದೆ ಬದಲಿಸಿ, ವಕ್ಫ್ ಆಡಳಿತ ಮಂಡಳಿಗೆ ಅಧಿಕಾರ, ಕಾನೂನು ರೀತಿ ಕ್ರಮ ಜರುಗಿಸಲು ಅವಕಾಶ ನೀಡಿದ್ದಾರೆ. ದೇವಾಲಯಗಳಿಗೆ ಶಕ್ತಿ ನೀಡುವುದಿರಲಿ, ದೇವಾಲಯಗಳನ್ನೇ ಉಳಿಸುತ್ತಿಲ್ಲ, ಹಿಂದೂಗಳನ್ನು ಕಾಂಗ್ರೆಸ್ ಸರ್ಕಾರಗಳು ಎರಡನೇ ದರ್ಜೆಯ ಪ್ರಜೆಗಳಾಗಿ ನೂಡುತ್ತಿದ್ದಾರೆ, ಸಮಾನತೆ ನೀಡುತ್ತಿಲ್ಲ, ವಿಶೇಷ ಅನುಕೂಲಗಳಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇವನ್ನೆಲ್ಲ ಪ್ರಶ್ನಿಸಿದರೆ ದೇಶದ್ರೋಹಿಗಳು ಅಂತಾರೆ, ನಾವಲ್ಲ ದೇಶ ದ್ರೋಹಿಗಳು ದೇಶದೊಳಗೆ ನುಸುಳಿ, ಬಹುಸಂಖ್ಯಾತರ ಮೇಲೆ ದರ್ಪ ತುರುತ್ತಿರುವ ನೀವು ದೇಶದ್ರೋಹಿಗಳು, ಭಾರತ ರತ್ನ ಸರ್‌ಎಂವಿ ಓದಿದ ಶಾಲೆಯನ್ನೇ ವಕ್ಫ್ಗೆ ಸೇರಿಸಿದ್ದಾರೆ, ಚಿಂತಾಮಣಿ ತಾಲೂಕಿನ ತಿಮ್ಮಸಂದ್ರದ ರೈತರ ಜಮೀನು, ಶಿಡ್ಲಘಟ್ಟ ದೇವಾಲಯ ,ಚಿಕ್ಕ ತಿರುಪತಿಯಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಇಲ್ಲದಿದ್ದರೂ ೧೦೦ ಎಕರೆಗೂ ಹೆಚ್ಚು ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ. ಈ ಎಲ್ಲದಕ್ಕೂ ಅಂತ್ಯ ಹಾಡಲು ಮೇಲೆ ನರೇಂದ್ರ ಮೋದಿ ಮತ್ತು ನಮ್ಮ ಸರ್ಕಾರ ಕೇಂದ್ರದಲ್ಲಿದೆ, ಚಳಿಗಾಲದ ಅಧಿವೇಶನದಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಮುಂದಿನ ೧೫ ದಿನಗಳಲ್ಲಿ ಕಾಂಗ್ರೆಸ್ ಕಾನೂನು ಬಾಹಿರವಾಗಿ ವಕ್ಫ್ಗೆ ನೀಡಿರುವ ಅವಕಾಶ ವಾಪಸ್ ಪಡೆಯುವ ಕಾಯ್ದೆ ತರಲಾಗುವುದು ಎಂದರು.
೧೫ ದಿನಗಳಲ್ಲಿ ಎಲ್ಲವೂ ಬಂದ್ ಆಗಲಿದೆ ಎಂಬುದನ್ನು ಅರಿತು ಕಾಂಗ್ರೆಸ್ ಈ ರಾತಿ ವರ್ತಿಸುತ್ತಿದೆ. ೧೫ ದಿನಗಳ ನಂತರ ವಾಪಸ್ ರೈತರಿಗೆ ತಂದುಕೊಡುವ ಕೆಲಸ ಬಿಜೆಪಿ ನಾಯಕರು ಮಾಡಲಿದ್ದಾರೆ. ವಿರೋಧ ಪಕ್ಷದ ಗತ್ತಿಗೆ ಹೆದರಿ ಸರ್‌ಎಂವಿ ಓದಿದ ಶಾಲೆ ವಾಪಸ್ ಶಾಲೆಗೆ ಸೇರಿಸಿದ್ದಾರೆ, ರೈತರ ಪರವಾಗಿ ಬಿಜೆಪಿ ಇದೆ, ಬಿಜೆಪಿ ಸೋತಿರಬಹುದು, ಸತ್ತಿಲ್ಲ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ರೈತರ ಜಮೀನು, ಮಠ ಮಾನ್ಯಗಳ ಭೂಮಿ, ಸರ್‌ಎಂವಿ ಓದಿದ ಶಾಲೆಯನ್ನೂ ವಕ್ಫ್ ಆಸ್ತಿ ಎನ್ನುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಬೇಕು, ಇದಕ್ಕಾಗಿ ಹೋರಾಟ ನಿರಂತರವಾಗಿ ಇರಲಿದೆ. ಪ್ರತಿ ಹಳ್ಳಿಯಲ್ಲೂ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ನಡೆಯಲಿದೆ. ಸಿದ್ದರಾಮಯ್ಯ ನವರೇ ನಿಮಗೆ ಮುಸ್ಲಿಂರು ಮಾತ್ರ ಮತ ಹಾಕಿದ್ದಾರಾ, ಇಟಲಿ ಮೇಡಂ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಐದಾರು ತಲೆಮಾರುಗಳಿಂದ ಇರುವ ಭೂಮಿಯನ್ನು ಪಾಕಿಸ್ತಾನದ ಏಜೆಂಟ್ ಜಮೀರ್ ಅಹ್ಮದ್ ಅವರ ಮಾತು ಕೇಳಿ ವಕ್ಫ್ಗೆ ಸೇರಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮಗೆ ಎಲ್ಲ ಸಮುದಾಯಗಳೂ ಮತ ಹಾಕಿವೆ, ಹುತ್ತಕ್ಕೆ ಪೂಜೆ ಮಾಡುವ ಜಾಗದಲ್ಲಿ ಹಸಿರು ಭಾವುಟ ಹಾಕಿದ್ದಾರೆ, ಮತಾಂತರ ಮಾಡಲು ದರ್ಗಾ ಶಾಲೆಯಲ್ಲಿ ಮಾಡಲಾಗಿದೆ, ಶಿಡ್ಲಘಟ್ಟ ಆಂಜನೇಯ ದೇವಾಲಯವೂ ವಕ್ಫ್ ಬೋರ್ಡಿಗೆ, ಚಿಂತಾಮಣಿಯ ರೈತ ಮುನಿರೆಡಿ ಭೂಮಿಯೂ ವಕ್ಫ್ ಭೂಮಿ ಎನ್ನುತ್ತಿದ್ದಾರೆ, ನೀವು ಮುನಿರೆಡ್ಡಿ ಅವರ ಅಪ್ಪನಿಗೆ ಹುಟ್ಟಿದ್ದೀರಾ, ಭಾರತ ಹಿಂದೂಸ್ತಾನ, ನಿಮಗೆ ಯಾವುದೇ ಹಕ್ಕಿಲ್ಲ, ಒಂದು ಸಮುದಾಯಕ್ಕೆ ಮಾತ್ರ ಮಾಡಬೇಕು ಎಂದಿದ್ದರೆ ಜಮೀರ್, ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಲಿ ಎಂದರು.