ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ತಹಸೀಲ್ದಾರ್
1 min readಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ತಹಸೀಲ್ದಾರ್
ಶ್ರೀನಿವಾಸಪುರದಲ್ಲಿ ನಡೆದ ಕನಕ ಜಯಂತಿಯಲ್ಲಿ ವಿಶೇಷ
ಸಮುದಾಯ ಮುಖಂಡರಲ್ಲಿಯೇ ಭಿನ್ನಮತ ಸ್ಫೋಟ
ಕನಕದಾಸ ಜಯಂತಿಯಲ್ಲಿ ಖಾಲಿ ಕುರ್ಚಿಗಳಿಗೆ ತಹಶೀಲ್ದಾರ್ ಹಾಗೂ ಶಾಸಕರು ಭಾಷಣ ಮಾಡಿದ ಘಟನೆ ಇಂದು ನಡೆಯಿತು. ಶ್ರೀನಿವಾಸಪುರ ಕನಕ ಭವನದಲ್ಲಿ ಇಂದು ನಡೆದ ಕನಕ ಜಯಂತಿಯಲ್ಲಿ ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳೇ ಗೈರು ಹಾಜರಾಗಿದ್ದು ವಿಶೇಷವಾಗಿತ್ತು.
ಶ್ರೀನಿವಾಸಪುರದಲ್ಲಿ ನಡೆದ ಕನಕ ಜಯಂತಿಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಾಸಕ ಜಿ ಕೆ ವೆಂಕಟಶಿವಾರೆಡ್ಡಿ ತಹಸೀಲ್ದಾರ್‌ಗೆ ಸೂಚನೆ ನೀಡಿದರು. ಅಧಿಕಾರಿಗಳ ಗೈರು ಹಾಜರಿ ಜೊತೆಗೆ ಹೆಚ್ಚು ಜನರು ಭಾಗವಹಿಸದ ಕಾರಣ ಅಸಮಾಧಾನಗೊಂಡ ಸಮುದಾಯ ಮುಖಂಡರು ಕನಕ ಜಯಂತಿ ಕಾರ್ಯಕ್ರಮದಿಂದ ಹೊರ ನಡೆದ ಘಟನೆಯೂ ನಡೆಯಿತು.
ಶ್ರೀನಿವಾಸ ಪುರದಲ್ಲಿ ಕನಕ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಸಿ, ನಂತರ ವೇದಿಕೆ ಕಾರ್ಯಕ್ರಮ ನಡೆಸುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು. ಆದರೆ ಮೊದಲು ವೇದಿಕೆ ಕಾರ್ಯಕ್ರಮ ಮಾಡಬೇಕೆಂದು ಕೆಲ ಮುಖಂಡರು ಪಟ್ಟು ಹಿಡಿದರು. ಇದರಿಂದ ಕಾರ್ಯಕ್ರಮಕ್ಕೆ ಹಾಜರಾಗದೆ ಬೆಳ್ಳಿರಥಗಳ ಮೆರವಣಿಗೆಯನ್ನು ಕೆಲ ಮುಖಂಡರು ಆರಂಭಿಸಿದರು.
ತಾಲ್ಲೂಕು ಆಡಳಿತದ ನಿರ್ಧಾರದ ಎಡವಟ್ಟು ಸಮುದಾಯದ ಮುಖಂಡರಲ್ಲಿ ಭಿನ್ನಮತ ಸ್ಪೋಟವಾಗಿದ್ದು, ತಾಲ್ಲೂಕು ಆಡಳಿತದ ನಿರ್ಧಾರದ ವಿರುದ್ಧ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಒಂದು ಕಡೆ ಮೆರವಣಿಗೆ ಮತ್ತೊಂದು ಕಡೆ ವೇದಿಕೆ ಕಾರ್ಯಕ್ರಮದ ಗೊಂದಲದಲ್ಲಿಯೇ ಖಾಲಿ ಕುರ್ಚಿಗಳಿಗೆ ತಹಸೀಲ್ದಾರ್ ಮತ್ತು ಶಾಸಕರು ಭಾಷಣ ಮಾಡಬೇಕಾದ ಸ್ಥಿತಿ ಎದುರಾಗಿದ್ದು, ಇದರಿಂದ ಸಮುದಾಯದ ಮುಖಂಡರು ಅಸಮಾಧಾನಗೊಂಡು ಕಾರ್ಯಕ್ರಮದಿಂದ ಹೊರ ನಡೆದರು.