ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಕನಕ ಜಯಂತಿ
1 min readಕನಕದಾಸರ ಜೀವನವೇ ಒಂದು ಆದರ್ಶ
ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಕನಕ ಜಯಂತಿ
ವಚನಗಳಲ್ಲಿಯೇ ದೇವರು ಕಾಣುವಂತೆ ಮಾಡಿದ್ದು ಕನಕದಾಸರು.
ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟಿಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಅನೇಕ ಕೀರ್ತನೆಗಳ ಮೂಲಕ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಿದ ಮಹಾನ್ ದಾಸಶ್ರೇಷ್ಠ ಕನಕದಾಸರಾಗಿದ್ದಾರೆ. ಅವರ ಆದರ್ಶಗಳನ್ನ ಅಳವಡಿಸಿಕೊಂಡರೆ ಜೀವನ ಉತ್ತಮವಾಗಿರುತ್ತವೆ ಎಂದರು.
ನಗರಸಭಾ ಉಪಾಧ್ಯಕ್ಷ ಮಲ್ಲೆಶ್ ಮಾತನಾಡಿ, ಕನಕದಾಸರು ಒಂದು ಸಮಾಜಕ್ಕೆ ಸಿಮೀತವಾಗಿಲ್ಲ. ೫೦೦ ವರ್ಷಗಳ ಹಿಂದೆಯೇ ಜಾತಿ ಪದ್ಧತಿ ವಿರುದ್ಧ ಹೋರಾಟ ಮಾಡಿದ್ದಾರೆ. ಮೊದಲು ಯೋಧನಾಗಿದ್ದ ಇವರು ಬಳಿಕ ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹರಿದಾಸರಾದರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಉಪದೇಶಗಳನ್ನು ನೀಡಿ ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದರು. ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ ಎಂದರು. ಇದೇವೇಳೆ ಸಮಾಜದ ನಾಲ್ವರು ಹಿರಿಯ ಸಾಧಕರಾದ ಮಾರಣ್ಣ, ವೆಂಕಟರಮಣಪ್ಪ, ಸಿದ್ದಲಿಂಗಯ್ಯ, ನರಸಿಂಹಮೂರ್ತಿ ಅವರನ್ನ ಸನ್ಮಾನಿಸಲಾಯಿತು.