ಗೌರಿಬಿದನೂರಿನಲ್ಲಿ ಕನಕ ಜಯಂತಿ ಅದ್ಧೂರಿ
1 min readಗೌರಿಬಿದನೂರಿನಲ್ಲಿ ಕನಕ ಜಯಂತಿ ಅದ್ಧೂರಿ
ಶಸಾಕ ಪುಟ್ಟಸ್ವಾಮಿಗೌಡ ಕಾರ್ಯಕ್ರಮದಲ್ಲಿ ಭಾಗಿ
ಕನಕದಾಸರು ಸಮಾಜದಲ್ಲಿ ಸಮಾನತೆ ಕಾಪಾಡಲು ವಚನ ಸಾಹಿತ್ಯದ ಮೂಲಕ ಜಾತ್ಯಾತೀತತೆ ಹೋಗಲಾಡಿಸಲು ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಕೆ ಹೆಚ್ ಪುಟ್ಟಸ್ವಾಮಿಗೌಡ ಹೇಳಿದರು.
ಗೌರಿಬಿದನೂರು ನಗರ ಹೊರವಲಯದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕನಕದಾಸರ 537ನೇ ಜಯಂತಿಯಲ್ಲಿ ಮಾತನಾಡಿದ ಶಸಾಕ ಪುಟ್ಟಸ್ವಾಮಿಗೌಡ, ಶತ ಶತಮಾನಗಳಿಂದ ಕನಕದಾಸರ ಹೆಸರು ಅಜರಾಮರವಾಗಿದೆ. ಇಂದಿನ ಪೀಳಿಗೆಯ ಜನಸಾಮಾನ್ಯರು ನೆನಪಿಸಿಕೊಳ್ಳುವ ಮಹಾನ್ ಸಂತರು, ಸಮಾಜ ಸುಧಾರಕರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಮಾತನಾಡಿ, ಕನಕದಾಸರು ತನ್ನ ಕೀರ್ತಿಗಳ ಮೂಲಕ ಸಮಾಜದ ಮೌಢ್ಯತೆ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿ ಎಂದು ಹೇಳಿದರು. ಎಲ್ಲಿ ನೋಡಿದರೂ ರಾಮ ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ ಬದುಕಿದೆನು ಭವ ಎನಗೆ ಹಿಂಗಿತು ಎಂಬ ಧನ್ಯತಾಭಾವ ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ. ಮರುಳುದಾಸ ಎಂದರು. ನಗರಸಭೆ ಅಧ್ಯಕ್ಷ ಲಕ್ಷಿನಾರಾಯಣಪ್ಪ. ಕಾರ್ಯನಿರ್ವಹಣಾಧಿಕಾರಿ ಹೊನ್ನಯ್ಯ. ಪೌರಾಯುಕ್ತೆ ಗೀತಾ. ಮಂಜುನಾಥ. ಕಸಾಪ ಅಧ್ಯಕ್ಷ ಜನಾರ್ದನ ಮೂರ್ತಿ. ಉಪನ್ಯಾಸಕ ರಮೇಶ್ ಇದ್ದರು.