ಕಂಬದ ನರಸಿಂಹಸ್ವಾಮಿಗೆ ಕಾರ್ತಿಕ ಮಾಸದ ವಿಶೇಷ ಪೂಜೆ
1 min readಕಂಬದ ನರಸಿಂಹಸ್ವಾಮಿಗೆ ಕಾರ್ತಿಕ ಮಾಸದ ವಿಶೇಷ ಪೂಜೆ
ಕಾರ್ತಿಕ ಮಾಸದ 3ನೇ ಸೋಮವಾರ ನಡೆಯೋ ಪೂಜೆ
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಟ್ರಸ್ಟ್ನಿಂದ ಕಾರ್ತಿಕ 3ನೇ ಸೋಮವಾರ ವಿಶೇಷ ಪೂಜೆ ನಡೆಸಲಾಯಿತು. ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದ 23ನೇ ವಾರ್ಷಿಕೋತ್ಸವ, ಮಹಾಭಿಷೇಕ, ತುಳಸಿ ಸಹಸ್ರನಾಮಾರ್ಚನೆ ನೆರವೇರಿಸಲಾಯಿತು.
ಶ್ರೀಲಕ್ಷಿನರಸಿಹಸ್ವಾಮಿ ದೇವಲಾಯದಲ್ಲಿ 24 ವರ್ಷಗಳಿಂದ ಪ್ರತಿ ಕಾರ್ತಿಕ ಮಾಸದ 3ನೇ ಸೋಮುವಾರ ವಿಶೇಷ ಪೂಜೆಗಳು ನಡೆಸಲಾಗುತ್ತಿದೆ. ಈ ದೇವಲಾಯಕ್ಕೆ ನಗರದ ಸುತ್ತಮುತ್ತಸಿನ ಭಕ್ತರು ಆಗಮಿಸಿ, ಹರಿಕೆ ತೀರಿಸಿಕೋಳ್ಳುತ್ತಾರೆ. ಈ ದೇವಾಲಯಕ್ಕೆ ಬಂದು ಸಮಸ್ಯೆಗಳು ಪರಿಹರಿಸಿಕೊಳ್ಳುತ್ತಾರೆ. ಇಲ್ಲಿ ಊಟದ ವ್ಯವಸ್ಥೆ ಕೂಡ ಶ್ರೀಲಕ್ಷ್ಮೀನರಸಿಹಸ್ವಾಮಿ ಟ್ರಸ್ಟ್ನಿಂದ ಅಯೋಜಿಸಲಾಗುತ್ತದೆ.
ಲಕ್ಷಿನರಸಿಂಹಸ್ವಾಮಿ ಅಡಳಿತ ಮಂಡಳಿ ಸದಸ್ಯ ದೇವರಾಜ್ ಗೌಡ ಮಾತನಾಡಿ, ಕಳೆದ 50 ವರ್ಷಗಳಿಂದ ಈ ದೇವಸ್ಥಾನಕ್ಕೆ ಕಾರ್ತಿಕ ಮಾಸದ ಮೂರನೇ ಶನಿವಾರ ವಿಶೇಷ ಪೂಜೆ, ಕೈಂಕರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ನರಸಿಂಹ ಸ್ವಾಮಿ ಜಯಂತಿಗೆ ಕಲ್ಯಾಣೋತ್ಸವ ಕಾರ್ಯಕ್ರಮ ಆಚರಣೆ ಮಾಡುತ್ತೇವೆ ಎಂದರು.