ಕನಕದಾಸರ ಆದರ್ಶಗಳು ಸರ್ವರಿಗೂ ಮಾದರಿ
1 min readಕನಕದಾಸರ ಆದರ್ಶಗಳು ಸರ್ವರಿಗೂ ಮಾದರಿ
ಬಾಗೇಪಲ್ಲಿ ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ
ಸಮಾಜದ ಜಾತಿ ಶ್ರೇಷ್ಠತೆ ರೂಪದ ಅಂಧಕಾರ ತೊಲಗಿಸುವಲ್ಲಿ ಹೆಚ್ಚು ಕಾಳಜಿಯಿಂದ ಶ್ರಮಿಸಿದ ಕನಕದಾಸರ ಆದರ್ಶಗಳು ನಮಗೆ ಮಾದರಿ ಆಗಲಿ ಎಂದು ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ ಹೇಳಿದರು.
ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿಯಿಂದ ಇಂದು ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ, ದಾಸ ಪರಂಪರೆಯಲ್ಲಿ ಸರ್ವಶ್ರೇಷ್ಠ ಸಂತ ಕನಕದಾಸರು. ತಮ್ಮ ತತ್ವನ ಚಿಂತನೆಗಳು ಮತ್ತು ಕೀರ್ತನೆಗಳ ಮುಖಾಂತರ ಸಮಾಜದಲ್ಲಿ ಸಮಾನತೆ, ಜ್ಞಾನ ಸಾಮಾಜಿಕ ಸ್ಥಿರತೆಯನ್ನು ಸ್ಥಾಪಿಸಿದ ದೈವ ಪುರುಷ ಎಂದರು.
ಕುಲವೆ0ದು ಹೊಡೆದಾಡದಿರಿ ನಿಮ್ಮ ಕುಲಯಾವುದೆಂದು ಬಲ್ಲಿರಾ ಎಂದು ನುಡಿಯುವ ಮೂಲಕ ಸಮಾಜದಲ್ಲಿ ಜಾತಿ ತಾರತಮ್ಯ ನಶಿಸುವಂತೆ ಮಾಡಿದವರು. ದಾಸ ಶ್ರೇಷ್ಠ ಶ್ರೀ ಕನಕದಾಸರ ಸಿದ್ಧಾಂತಗಳು ಆದರ್ಶಗಳು ಕೇವಲ ಅವರ ಜಯಂತ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಜೀವದ್ಲಲೂ ಅಳವಡಿಸಿಕೊಂಡು ಸಮಾಜದ ಸ್ವಾಸ್ಥಕ್ಕೆ ಕೊಡುಗೆ ನೀಡಬೇಕು ಎಂದರು.
ಪುರಸಭೆ ಸದಸ್ಯ ಶ್ರೀನಾಥ್ ಮಾತನಾಡಿ, ಕನಕದಾಸರು ತಮಗೆ ದೊರೆತ ಸಂಪತ್ತನ್ನು ಬಡವರಲ್ಲಿ ಹಂಚಿದ ಮಹಾದಾನಿ. ಜಾತಿ ರಹಿತವಾದ ಸಮಸಮಾಜ ನಿರ್ಮಾಣವಾಗಬೇಕೆಂದು ಕನಸು ಕಂಡಿದ್ದರು. ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿನ ಅಂಕುಡೊ0ಕುಗಳನ್ನು ತಿದ್ದಲು ಪ್ರಯತ್ನಿಸಿದ್ದ ಪರಿವರ್ತನೆಯ ಹರಿಕಾರರು ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಬಿಇಒ ಎನ್ ವೆಂಕಟೇಶಪ್ಪ, ಆರ್. ಹನುಮಂತ ರೆಡ್ಡಿ, ಶಿವಪ್ಪ, ಡಾ.ಸತ್ಯನಾರಾಯಣ ರೆಡ್ಡಿ, ನಾರಾಯಣಪ್ಪ, ನಾಗರಾಜು, ಎಂ.ವಿ. ರಂಗಾರೆಡ್ಡಿ ಇದ್ದರು.