ನಂಜನಗೂಡಿನಲ್ಲಿ ಅದ್ಧೂರಿ ಕನಕ ಜಯಂತಿ ಆಚರಣೆ
1 min readನಂಜನಗೂಡಿನಲ್ಲಿ ಅದ್ಧೂರಿ ಕನಕ ಜಯಂತಿ ಆಚರಣೆ
ಜನರ ಮನಸ್ಸಿನಲ್ಲಿರೋ ಮಾನಸಿಕ ಅಸ್ಪೃಶ್ಯತೆ ತೊಲಗಬೇಕು
ನಂಜನಗೂಡು ತಾಲೂಕು ಆಡಳಿತದಿಂದ ಇಂದು ನಗರದಲ್ಲಿ ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಛರಿಸಲಾಯಿತು. ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಯತೀಂದ್ರ, ಜನರ ಮನಸ್ಸಿನಲ್ಲಿರೋ ಮಾನಸಿಕ ಅಸ್ಪಶ್ಯತೆ ತೊಲಗಬೇಕಿದೆ ಎಂದು ಹೇಳಿದರು.
ನಂಜನಗೂಡಿನಲ್ಲಿ ಇಂದು ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಜನರಲ್ಲಿ ಇನ್ನೂ ಉಳಿದಿರೋ ಮಾನಸಿಕ ಅಸ್ಪಶ್ಯತೆ ತೊಸಗಬೇಕಿದೆ ಎಂದರು. ಮೇಲು-ಕೀಳು ಎಂಬ ಮನೋಭಾವ ತೊಲಗಬೇಕು. ಹಿಂದೂ ಧರ್ಮದಲ್ಲಿ ಈಗಲೂ ವರ್ಣವ್ಯವಸ್ಥೆಯನ್ನು ದೇವರು ಸೃಷ್ಟಿ ಮಾಡಿದ್ದಾನೆ ಎಂದು ನಂಬಿಕೆಯಿದೆ. ಈ ವರ್ಣ ವ್ಯವಸ್ಥೆ ಸೇರಿದಂತೆ ಇತರೆ ನಂಬಿಕೆಗಳನ್ನು ಸಂಪೂರ್ಣವಾಗಿ ತೆಗೆದರೆ ಮಾತ್ರ ಜಾತಿ ವ್ಯವಸ್ಥೆ ಹೋಗುತ್ತದೆ ಎಂದರು.
ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಆಡಳಿತದಿಂದ ಕನಕದಾಸರ ೫೩೭ನೇ ಜಯಂತಿಯನ್ನು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಸಮಾಜ ಸುಧಾರಕರಾದ ಕನಕದಾಸರು ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ 500 ವರ್ಷಗಳ ಹಿಂದೆಯೇ ಮಾಡಿದ್ದಾರೆ. ಆ ಕಾಲದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದವರು ಕನಕದಾಸರು ಎಂದರು. ಕನಕದಾಸರು ಶೋಷಿತರ ಪರ ನಿಂತಿದ್ದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂದೇಶ ಸಾರಿದರು ಎಂದು ಹೇಳಿದರು.
ಅವರು ಕನ್ನಡ ಸಾಹಿತ್ಯಕ್ಕಾಗಿ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳ ಅಪಾರ ಕೊಡುಗೆ ನೀಡಿದ್ದಾರೆ. ಕನಕದಾಸರ ನಂತರ ಅಂಬೇಡ್ಕರ್ ಅವರ ಸಂವಿಧಾನದಿ0ದ ಜಾತಿ ವ್ಯವಸ್ಥೆ ಕಡಿಮೆಯಾಗಿದೆ ಎಂದರು. ನಂಜನಗೂಡು ಶಾಸಕ ದರ್ಶನ್ ಮಾತನಾಡಿ, ನಂಜನಗೂಡಿನಲ್ಲಿ ಸರಳವಾಗಿ ಕನಕ ಜಯಂತಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ರಾಷ್ಟ ರಾಜ್ಯ ಸೇರಿದಂತೆ ಇಡೀ ವಿಶ್ವಕ್ಕೆ ಕೀರ್ತನೆಗಳ ಮೂಲಕ ಸಮಾಜ ತಿದ್ದುವ ಕೆಲಸವನ್ನು ಕಕನದಾಸರು ಮಾಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಕನಕದಾಸರ ಸಂಶೋಧನೆಗಳು ನಡೆಯುತ್ತಿದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ಜಾತಿ ವ್ಯವಸ್ಥೆ ತೊಡೆದು ಹಾಕಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರ್, ತಾಲೂಕು ಪಂಚಾಯತಿ ಇಒ ಜರಾಲ್ಡ್ ರಾಜೇಶ್ ಭಾಗವಹಿಸಿದ್ದರು.