ಸಿದ್ದರಾಮಯ್ಯ ಪರ ಬ್ಯಾಚಿಂಗ್ ಮಾಡಿದ ವರ್ತೂರ್
1 min readಸಿದ್ದರಾಮಯ್ಯ ಪರ ಬ್ಯಾಚಿಂಗ್ ಮಾಡಿದ ವರ್ತೂರ್
ಲೋಕಾಯುಕ್ತದಿಂದಲೂ ಕ್ಲೀನ್ ಚಿಟ್ ಎಂದು ಭವಿಷ್ಯ
ಜಾತಿ ವಿಚಾರದಲ್ಲಿ ಸಿದ್ದರಾಮಯ್ಯ ಪರ ಎಂದ ಮಾಜಿ ಸಚಿವ
ಜೆಡಿಎಸ್, ಬಿಜೆಪಿ ನಾಯಕರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ವಾರ್ನಿಂಗ್ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಕೋಲಾರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಪರ ಮಾತನಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಇದು ಕಲಿಯುಗ, ಧರ್ಮ ಯುದ್ಧ ನಡೆಯುತ್ತಿದೆ, ಈ ಯುದ್ಧದಲ್ಲಿ ಸಿಎಂ ಸಿದ್ದರಾಮಯ್ಯ ಗೆಲ್ತಾರೆ, ನಾನು ಜಾತಿ ಪ್ರೇಮಿ, ಆದರೆ ಕಾಂಗ್ರೆಸ್ ಸೇರಲ್ಲ. ಲೋಕಾಯುಕ್ತ ವಿಚಾರಣೆಯಲ್ಲೂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ದೊರೆಯುತ್ತೆ, ಸಿಎಂ ಸಿದ್ದರಾಮಯ್ಯ ಪತ್ನಿ, ಮಾಡಬಾರದ್ದು ಮಾಡಿಲ್ಲ. ಸಿದ್ದರಾಮಯ್ಯ ಅವರ ಧರ್ಮಪತ್ನಿ, ನನ್ನ ತಾಯಿ ಇದ್ದಂತೆ, ಆದರೆ ಸಿದ್ದರಾಮಯ್ಯ ಪತ್ನಿ ಮೇಲೆ ಕೇಸ್ ಹಾಕಿರುವುದು ಕೋಪ ತರಿಸಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಕೋಲಾರದಲ್ಲಿ ನಡೆದ ಕನಕ ಜಯಂತಿಯಲ್ಲಿ ಹೇಳಿದ್ದಾರೆ.
ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ರೆ ಬೇಸರವಿಲ್ಲ, ಅವರು ರಾಜಕಾರಣಿ, ಸಿದ್ದರಾಮಯ್ಯ ಸಿಎಂ ಆಗ್ಲಿ ಅಂದಿದ್ದು ನಾನು, ನಂಗೆ ಬೇಕಿರೊದು ಜಾತಿ ಅಷ್ಟೇನೆ, ಸಿದ್ದರಾಮಯ್ಯ ಅವರ ಮೇಲೆ ಬಂದಿರೊ ಆರೋಪ ಸುಳ್ಳು, ಸುಖಾ ಸುಮ್ಮನೆ ಸಿದ್ದರಾಮಯ್ಯ ರನ್ನ ಬೈಯ್ಯಬೇಡಿ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಮ್ಮದು 3 ಲಕ್ಷ ಮತ ಇದೆ, ಕುರುಬರು ಎಲ್ಲಾ ಹುಶಾರಿದ್ದಾರೆ, ಹಾಗಾಗಿ ನೋಡ್ಕೊಂಡು ಪ್ರತಿಭಟನೆ, ಆರೋಪ ಮಾಡಲಿ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರ ಬಳಿ ದುಡ್ಡಿಲ್ಲ, ಮನೆಗೆ ರೇಷನ್ ತಂದು ಹಾಕೊದು ದುಡ್ಡಿರೊ ಭೆರತಿ ಸುರೇಶ್ ಅಂತವ್ರು, ಐದು ವರ್ಷ ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಾರೆ. 7 ಕೋಟಿ ಜನರ ಮತ್ತು ಹಿಂದುಳಿದ ವರ್ಗಗಳ ಪ್ರೀತಿ ಸಿದ್ದರಾಮಯ್ಯ ಅವರ ಮೇಲಿದೆ, ನಾªಲ್ಲಾ ಸಿದ್ದರಾಮಯ್ಯ ಪರ ಹೋರಾಟ ಮಾಡಬೇಕು, ಆದ್ರೆ ನಾನು ಬಿಜೆಪಿಯಲ್ಲಿದ್ದೇನೆ ಹೋರಾಟ ಮಾಡಕ್ಕೆ ಆಗಲ್ಲ ಎಂದು ವರ್ತೂರ್ ಪ್ರಕಾಶ್ ಹೇಳಿದರು.