ಶ್ರೀಗಂಧ ಕಳವು ಭೇದಿಸುವಲ್ಲಿ ಚಿಂತಾಮಣಿ ಪೊಲೀಸರ ಯಶಸ್ವಿ
1 min readಶ್ರೀಗಂಧ ಕಳವು ಭೇದಿಸುವಲ್ಲಿ ಚಿಂತಾಮಣಿ ಪೊಲೀಸರ ಯಶಸ್ವಿ
14 ಕೆಜಿ ಶ್ರೀಗಂಧ ವಶಪಡಿಸಿಕೊಂಡು ಇಬ್ಬರ ಬಂಧನ
ಪೊಲೀಸರು ಗಸ್ತನಲ್ಲಿದ್ದ ವೇಳೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡ ಪೊಲೀಸರು ಶಂಕಿತನನ್ನು ವಿಚಾರಣೆ ಮಾಡಿದ್ದು, ಶ್ರೀಗಂಧ ಮರ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಚಿಂತಾಮಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಂತಾಮಣಿ ತಾಲೂಕಿನ ಚಿಲಕಲನೆರ್ಪು ಹೋಬಳಿಯ ಬುರುಡಗುಂಟೆ ಗ್ರಾಮದ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಪೊಲೀಸರು ಗಸ್ತಿನಲ್ಲಿದ್ದಾಗ ವ್ಯಕ್ತಿಯೊಬ್ಬ ಅನುಮಾನ ಮೂಡುವಂತೆ ವರ್ತಿಸಿದ್ದಾನೆ. ಇದರಿಂದ ಅನುಮಾನಗೊಂಡು ಪೊಲೀಸರು ಆತನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಗ್ರಾಮದ ಹೊರವಲಯದಲ್ಲಿರುವ ಶೆಡ್ ನಲ್ಲಿ ಶ್ರೀಗಂಧ ಅಡಗಿಸಿಟ್ಟಿರುವ ಬಗ್ಗೆ ಬಾಯಿ ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಆರೋಪಿ ಹೇಳಿದ ಶೆಡ್‌ನಲ್ಲಿ ಪರಿಶೀಲನೆ ನಡೆಸಿದಾಗ ೧೪ ಕೆಜಿ ಶ್ರೀಗಂಧ ಅಡಗಿಸಿಟ್ಟಿರುವುದು ಬಹಿರಂಗವಾಗಿದೆ. ಕೂಡಲೇ ಪೊಲೀಸರು ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೌಲಾ, ಬಾಬಾ ಅಲಿಯಾಸ್ ಬಾಬಾ ಜಾನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಪಿಎಸ್‌ಐ ಎಂ. ಶಿವಕುಮಾರ್ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶ್ರೀಗಂಧ ಕಳ್ಳರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವುದಾಗಿ ಕೆಂಚಾರ್ಲಹಳ್ಳಿ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಪೇದೆಗಳಾದ ಲಕ್ಷಿಪತಿ. ನರಸಿಂಹಮೂರ್ತಿ. ಚಂದ್ರಶೇಖರ್ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು