ತೊಂಡೇಬಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
1 min readತೊಂಡೇಬಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ತಹಸೀಲ್ದಾರ್ ಮಹೇಶ್ ಪತ್ರಿ ಕಾರ್ಯಕ್ರಮದಲ್ಲಿ ಭಾಗಿ
ಸ್ವಾತಂತ್ರ ಪೂರ್ವದಲ್ಲಿ ಹಂಚಿಹೋದ ಕನ್ನಡ ಪ್ರದೇಶಗಳ ಏಕೀಕರಣದಿಂದ ಕರ್ನಾಟಕ ರಾಜ್ಯ ಉದಯವಾಯಿತು ಎಂದು ತಾಲ್ಲೂಕು ದಂಡಾಧಿಕಾರಿ ಮಹೇಶ್ ಪತ್ರಿ ತಿಳಿಸಿದರು. ತೊಂಡೇಬಾವಿ ರೈಲ್ವೇ ನಿಲ್ದಾಣದ ಜೈ ಭುವನೇಶ್ವರಿ ಆಟೋ ಯುವಕರ ಬಳಗ, ಜಯಕರ್ನಾಟಕ ಸಂಘಟನೆ ಹಾಗೂ ಕರವೇ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
೫ ಭಾಗಗಳಾಗಿ ಹಂಚಿಹೋದ ಕನ್ನಡ ಪ್ರದೇಶಗಳನ್ನು ಏಕೀಕರಣ ಗೊಳಿಸುವಲ್ಲಿ ಕನ್ನಡ ಕುಲ ಪುರೋಹಿತ ಅಲೂರು ವೆಂಕಟರಾಯರು ಹೆಚ್ಚು ಶ್ರಮ ವಹಿಸಿದ್ದರು. ಗುಲ್ಭರ್ಗ ಪ್ರಾಂತ, ಹೈದರಾಬಾದು ನವಾಬರ ಆಳ್ವಿಕೆಯಲ್ಲಿ, ಕಾಸರಗುಡು ಮೈಸೂರು ಸ್ವತಂತ್ರ ಸಂಸ್ಥಾನಗಳಾಗಿ ಬೆಳಗಾವಿ ಪ್ರದಶ ಮುಂಬೈ ಆಳ್ವಿಕೆಯಲ್ಲಿ ಹೀಗೆ ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಏಕೀರಕರಣ ಮಾಡುವಲ್ಲಿ ಹಿರಿಯರು ಹೆಚ್ಚು ಶ್ರಮವಹಿಸಿದ್ದರು. ನಾವು ಅವರು ಸಾಧಿಸಿದ ಕನ್ನಡ ನಾಡಿನ ಸಂಸ್ಕೃತಿ, ಭಾಷೆ, ನಾಡು, ನುಡಿ, ಉಳಿವಿಗಾಗಿ ಶ್ರಮಿಸಬೇಕು ಎಂದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಪ್ರದೀಪ ಮಾತನಾಡಿ, ನವೆಂಬರ್ ಮಾಸದ ಕನ್ನಡಿರಾಗಬಾರದು, ವರ್ಷ ಪೂರ್ತಿ ಕನ್ನಡ ಭಾಷೆ, ನಾಡು ನುಡಿಗಾಗಿ ಶ್ರಮಿಸಬೇಕು ಎಂದರು. ಹಿರಿಯರು ಬಳುಬಳಿಯಾಗಿ ನೀಡಿದ ಈ ಭೂಮಿಯಲ್ಲಿ ಜನ್ಮ ತಾಳಿರುವುದು ನಮ್ಮ ಪುಣ್ಯ. ಈ ಭೂಮಿಗಾಗಿ ನಾವು ಏನಾದರೂ ಕೊಡಿಗೆ ನೀಡಬೇಕೆಂಬ ಗುರಿ ಹೊಂದಿರಬೇಕೆAದರು. ಮುರಳಿ, ಮಹದೇವ್. ಸುಬ್ಬು. ಆಗ್ನೆಸ್. ಜಿಎಲ್ ಅಶ್ವಥ್ ನಾರಾಯಣ್, ಪ್ರಭು, ಶಿವಾರೆಡ್ಡಿ ಇದ್ದರು.