ಚಿಕ್ಕಬಳ್ಳಾಪುರ ಆರ್‌ಟಿಒ ಅಧಿಕಾರಿಗಳಿಂದ ಮಾಲಿನ್ಯ ತಡೆ ಜಾಗೃತಿ
1 min readಚಿಕ್ಕಬಳ್ಳಾಪುರ ಆರ್‌ಟಿಒ ಅಧಿಕಾರಿಗಳಿಂದ ಮಾಲಿನ್ಯ ತಡೆ ಜಾಗೃತಿ
ವಾಹನ ಸಂಚಾರದಿ0ದ ಆಗುವ ಮಾಲಿನ್ಯ ಕುರಿತು ಜನರಲ್ಲಿ ಜಾಗೃತಿ
ಪರಿಸರ ರಕ್ಷಣೆಗೆ ಮುಂದಾಗುವ0ತೆ ಆರ್‌ಟಿಒ ಅಧಿಕಾರಿ ಮನವಿ
ಅತಿಯಾದ ವಾಹನ ಸಂಚಾರದಿ0ದ ಪರಿಸರದ ಮೇಲೆ ಉಂಟಾಗುವ ಮಾಲಿನ್ಯ ನಿಯಂತ್ರಣಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸಾರಿಗೆ ಇಲಾಖೆಯಿಂದ ಚಾಲಕರಿಗೆ ಮತ್ತು ನಾಗರೀಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಂದು ಚಿಕ್ಕಬಳ್ಳಾಪುರದಲ್ಲಿ ಮಾಡಲಾಯಿತು.
ನವೆಂಬರ್ ಮಾಸವನ್ನ ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಎಂದು ಘೋಷಿಸಲಾಗಿದ್ದು, ಸಾರಿಗೆ ಇಲಾಖೆಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಆಟೋ ಚಾಲಕರಿಗೆ, ವಿದ್ಯಾರ್ಥಿಗಳಿಗೆ ಮಾಲಿನ್ಯ ಮುಕ್ತ ಪರಿಸರದ ಕುರಿತು ಆರ್‌ಟಿಒ ಅಧಿಕಾರಿ ವಿವೇಕಾನಂದ ವಿವರಿಸಿದರು. ಸಾರ್ವಜನಿಕರಿಗೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ವಾಯು ಮಾಲಿನ್ಯ ಜಾಗೃತಿ ಮಾಸಚರಣೆ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಯಾದ ವಾಯು ಮಾಲಿನ್ಯದಿಂದ ಚರ್ಮರೋಗ, ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳು ಹರಡುವುದನ್ನು ತಡೆಯಲು ವಾಯುಮಾಲಿನ್ಯ ನಿಯಂತ್ರಣ ಅಗತ್ಯವಾಗಿದೆ ಎಂದು ಹೇಳಿದರು. ಅಲ್ಲದೆ ವಾಹನ ಸಂಚಾರದಿ0ದ ವಾಯುಮಾಲಿನ್ಯ ಉಂಟಾಗಲಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬಾರಲಿದೆ. ಹಾಗಾಗಿ ಮಾಲಿನ್ಯ ತಡೆಗೆ ಪ್ರತಿಯೊಬ್ಬರೂ ಸಹಕರಿಸುವಂತೆ ಅವರು ಮನವಿ ಮಾಡಿದರು.
ನವೆಂಬರ್ ಮಾಸವನ್ನ ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಎಂದು ಘೋಷಿಸಿ, ವಾಯು ಮಾಲಿನ್ಯ ತಡೆಯಲು ಹೆಚ್ಚು ಗಿಡಮರಗಳನ್ನು ನೆಟ್ಟು ಪೋಷಿಸಬೇಕು. ಪರಿಸರ ರಕ್ಷಣೆಯಿಂದ ಮಾತ್ರ ಮಾಲಿನ್ಯ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಮನೆಯಿಂದ ಕನಿಷ್ಠ ಒಂದು ಗಿಡ ನೆಟ್ಟು ಪೋಷಣೆ ಮಾಡಿದಾಗ ಪರಿಸರದಲ್ಲಿ ಸಮತೋಲನ ಕಾಪಾಡಲು ಸಾಧ್ಯವಾಗಲಿದೆ. ಇನ್ನು ವಾಹನಗಳನ್ನು ಸುಸಜ್ಜಿತವಾಗಿಟ್ಟುಕೊಂಡು ವಾಯು ಮಾಲಿನ್ಯ ತಡೆಯಲು ಸಹಕರಿಸಬೇಕೆಂದು ಕೋರಿದರು.