ತುಮಕೂರು ಜಿಲ್ಲೆಗೆ ಸಚಿವ ವಿ. ಸೋಮಣ್ಣ ಭೇಟಿ
1 min readತುಮಕೂರು ಜಿಲ್ಲೆಗೆ ಸಚಿವ ವಿ. ಸೋಮಣ್ಣ ಭೇಟಿ
ನೆನೆಗುದ್ದಿವೆ ಬಿದ್ದಿರುವ ರಸ್ತೆಗಳನ್ನು ವೀಕ್ಷಣೆ ಮಾಡಿದ ಸಚಿವರು
ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನೆನೆಗುದ್ದಿವೆ ಬಿದ್ದಿರುವ ಹಾಗೂ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳನ್ನು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣನವರು ಭೇಟಿ ನೀಡಿ ಪರಿಶೀಲಿಸಿದರು.
ಸಚಿವರಾದ ವಿ. ಸೋಮಣ್ಣನವರು ಇಂದು ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನೆನೆಗುದ್ದಿವೆ ಬಿದ್ದಿರುವ ಹಾಗೂ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳ ವೀಕ್ಷಣೆಗೆ ಆಗಮಿಸ ಸಂದರ್ಭದಲ್ಲಿ ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ಅವರು ಶಿರಾ ನಗರದ ಮಿನಿ ವಿಧಾನಸೌಧದ ಬಳಿ ಸನ್ಮಾನ್ಯ ಕೇಂದ್ರ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ತದನಂತರ ಶಿರಾ-ಬುಕ್ಕಾಪಟ್ಟಣ ರಸ್ತೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಚಿದಾನಂದ ಗೌಡರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಿರಾ ನಗರದ ಹೈವೇ ರಸ್ತೆಯಲ್ಲಿ ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ಅನೇಕ ಆಕ್ಸಿಡೆಂಟ್ ಗಳು ಸಂಭವಿಸುತ್ತಿರುತ್ತವೆ. ಆದ್ದರಿಂದ ಕೂಡಲೇ ಓಊ-೪೮ (ಚೆನ್ನೈ – ದೆಹಲಿ ವಿಭಾಗ) ನಲ್ಲಿ ಸಿರಾ ಬೈಪಾಸ್‌ಗೆ ಎರಡೂ ಬದಿಯಲ್ಲಿ ಸಮತೋಲನದ ಉದ್ದದಲ್ಲಿ 2-ಲೇನ್ ಸರ್ವಿಸ್ ರಸ್ತೆಯ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು, ಜೆಡಿಎಸ್ ಮುಖಂಡರಾದ ಉಗ್ರೇಶ್, ತಾಲೂಕು ಮಂಡಲ ಅಧ್ಯಕ್ಷರಾದ ಚಿಕ್ಕಣ್ಣ, ನಗರಮಂಡಲ ಅಧ್ಯಕ್ಷರಾದ ಗಿರಿಧರ್, ಪ್ರಧಾನ ಕಾರ್ಯದರ್ಶಿಗಳಾದ ನಟರಾಜಪೇಟೆ, ನ್ಯಾಷನಲ್ ಹೈವೇ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.