ನ.18 ರಿಂದ ಡಿ.16 ರವರೆಗೆ ಪೌತಿ ಆಂದೋಲನ
1 min readನ.18 ರಿಂದ ಡಿ.16 ರವರೆಗೆ ಪೌತಿ ಆಂದೋಲನ
ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮಾಹಿತಿ
ನ.18 ರಿಂದ ನಂಜನಗೂಡು ತಾಲ್ಲೂಕಿನಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಗುತ್ತದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.
ನ.18 ರಿಂದ ನಂಜನಗೂಡು ತಾಲ್ಲೂಕಿನಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಗುತ್ತದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ಮಾತನಾಡಿದ ಅವರು, ಬಿಳಿಗೆರೆ ಹೋಬಳಿಯಲ್ಲಿ ನವೆಂಬರ್ 18 ಮತ್ತು 22, ಹುಲ್ಲಹಳ್ಳಿ ಹೋಬಳಿಯಲ್ಲಿ ನವೆಂಬರ್ 25 ಮತ್ತು 30, ಚಿಕ್ಕಯ್ಯನಛತ್ರ ಹೋಬಳಿಯಲ್ಲಿ ಡಿಸೆಂಬರ್ 2 ಮತ್ತು 6, ಕಸಬಾ ಹೋಬಳಿಯಲ್ಲಿ ಡಿಸೆಂಬರ್ 4 ಮತ್ತು 9, ದೊಡ್ಡ ಕವಲಂದೆ ಹೋಬಳಿಯಲ್ಲಿ ಡಿಸೆಂಬರ್ 11 ಮತ್ತು 16 ರಂದು ನಡೆಯಲಿದೆ ಎಂದರು.
ನ0ಜನಗೂಡು ತಾಲ್ಲೂಕಿನ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಗುತ್ತದೆ. ಸುಮಾರು ವರ್ಷಗಳಿಂದ ಕೆಲ ಜಮೀನಿನ ಖಾತೆದಾರರು ನಿಧನ ಹೊಂದಿದ್ದರೂ ವಾರಸುದಾರರಿಗೆ ಖಾತೆಯಾಗದೇ ಇರುವುದರಿಂದ ಪ್ರತಿ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನ ಈ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಇದರ ಸದುಪಯೋಗ ಪಡೆಯ್ಳಬೇಕು ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮನವಿ ಮಾಡಿದ್ದಾರೆ.