ಗೌರಿಬಿದನೂರಿನಲ್ಲಿ ಸೈಬರ್ ಕ್ರೆ0 ಕಾನೂನು ಅರಿವು
1 min readಗೌರಿಬಿದನೂರಿನಲ್ಲಿ ಸೈಬರ್ ಕ್ರೆ0 ಕಾನೂನು ಅರಿವು
ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಭಾಗಿ
ಮಕ್ಕಳ ಬಗ್ಗೆ ಎಚ್ಚರ ವಹಿಸಲು ಪೋಷಕರಿಗೆ ಸಲಹೆ
ಸೈಬರ್ ಕ್ರೆಮ್ ಆಧುನಿಕರಣಗೊಂಡಿದ್ದು, ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವುದಕ್ಕೆ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸಲಹೆ ನೀಡಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಗೌರಿಬಿದನೂರು ತಾಲೂಕಿನ 306 ಶಾಲೆಗಳಲ್ಲಿ ಹಮ್ಮಿಕೊಂಡಿದ್ದ ಶಾಲಾ ಸುರಕ್ಷಾ ಸಮತಿ ರಚನೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ಮೊಬೈಲ್ ನೀಡುವುದಕ್ಕೆ ಮುನ್ನ ಬಹಳ ಎಚ್ಚರಿಕೆಯಿಂದಿರಬೇಕು ಎಂದರು.
ಮಕ್ಕಳು ಮೊಬೈಲ್‌ನಲ್ಲಿ ಏನೇನು ಬಳಸುತ್ತಿದ್ದಾರೆ ಎಂಬ ಬಗ್ಗೆ ಗಮನಹರಿಸಬೇಕು. ಇಲ್ಲವಾದಲ್ಲಿ ಮಕ್ಕಳು ತಮ್ಮದಲ್ಲದ ತಪ್ಪಿನಿಂದ ಸೈಬರ್ ಕೃತ್ಯಗಳಿಗೆ ಪೋಷಕರು ನಷ್ಟ ಅನುಭವಿಸಬೇಕಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿ0ದಲೇ ಕನಿಷ್ಠ ಕಾನೂನು ಅರಿವು ಮೂಡಿಸಬೇಕು, 112 ಅಖಿಲ ಭಾರತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಹಾಯವಾಣಿಯಾಗಿದೆ. ಲೊಕೇಶನ್ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ ಎಂದರು.
20 ನಿಮಿಷದಲ್ಲಿ ಪೊಲೀಸರು ಸ್ಪಂದಿಸುತ್ತಾರೆ. 1930 ಸೈಬರ್ ಕ್ರೆಮ್ ಸಹಾಯವಾಣಿಯಾಗಿದ್ದು, ಸೈಬರ್ ವಂಚನೆಗೊಳಗಾದವರು ಈ ಸಂಖ್ಯೆಗೆ ಕರೆ ಮಾಡಿ ತಮ್ಮ ದೂರು ದಾಖಲಿಸಬಹುದು. 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ದ್ವಿಚಕ್ರ ಚಲಾಯಿಸುವುದು ಅಪರಾಧ. 18ವರ್ಷ ಮೇಲ್ಪಟ್ಟ ಬಳಿಕ ಪರವಾನಗಿ ಪಡೆದು ವಾಹನ ಚಾಲನೆ ಮಾಡಬೇಕು. ಹೆಲ್ಮೆಟ್ ಇಲ್ಲದೆ ಸಂಚರಿಸಬಾರದು ಎಂದು ಮಕ್ಕಳಿಗೆ ತಿಳಿ ಹೇಳಿದರು.
ತಾಲೂಕಿನ ಮಕ್ಕಳ ರಕ್ಷಣಾಧಿಕಾರಿ ಮೂಕಾಂಭಿಕ ಮಾತನಾಡಿ, ಬಾಲ್ಯ ವಿವಾಹ ಮಾಡುವುದು ಅಪರಾಧ ಎಂದು ತಿಳಿದಿದ್ದರೂ ಕೆಲ ಪೋಷಕರು ತಪ್ಪು ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಕ್ಕಳ ಲೈಂಗಿಕ ಚಿತ್ರ ತೆಗೆಯುವುದು, ಸಂಗ್ರಹಿಸುವುದು, ಬಾಲ್ಯ ವಿವಾಹ ಮಾಡುವುದು, ಮಕ್ಕಳ ಮೇಲೆ ಲೈಂಗಿಕ ದೌರ್ಜನಕ್ಕೆ ಒಳಗಾಗಿರುವ ಬಗ್ಗೆ ಮಾಹಿತಿಯಿದ್ದರೂ ದೂರು ನೀಡದಿರುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧಗಳಾಗಿವೆ. ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಮಾತ್ರವಲ್ಲ ಅದಕ್ಕೆ ಸಹಕರಿಸಿದವರಿಗೂ ಸಮಾನ ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಜಿಲ್ಲಾ, ಉಪವಿಭಾಗ ಹಾಗೂ ತಾಲೂಕು ಪೊಲೀಸ್ ಇಲಾಖೆ ಸಹಯೋಗದಲ್ಲಿ ತಾಲೂಕಿನ 306 ಶಾಲೆಗಳಲ್ಲಿ ಶಾಲಾ ಸುರಕ್ಷಾ ಸಮಿತಿ ರಚನೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು. ಅದಕ್ಕಾಗಿ 100 ಮಂದಿ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ಹೆಚ್ಚುವರಿ ರಕ್ಷಣಾಧಿಕಾರಿ ರಾಜಾ ಹಿಮಾಮ್ ಕಾಸಿಮ್, ವೃತ ನಿರೀಕ್ಷಕ ಕೆಪಿ ಸತ್ಯನಾರಾಯಣ್, ನಗರ ಪೊಲೀಸ್ ಠಾಣೆ ಪಿಎಸ್‌ಐ ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ ಇದ್ದರು.