ಚಿಂತಾಮಣಿಯಲ್ಲಿ ಐಸ್ ಕ್ರೀಮ್ ಘಟಕ ನಿರ್ಮಾಣವಾಗಲಿದೆ
1 min readಗುಡಿಬಂಡೆ ಪಟ್ಟಣದ ಹೊರವಲಯದಲ್ಲಿರುವ ಬೈರಸಾಗರ ಬಡಾವಣೆಯಲ್ಲಿ ಗುಡಿಬಂಡೆ ಶಿಬಿರ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಕೆ. ವೈ. ನಂಜೇಗೌಡ ಅವರು, ಹಿಂದಿನ ಸರಕಾರ ಸ್ಪಷ್ಟ ಗುರಿ ಇಲ್ಲದೆ ಒಕ್ಕೂಟವನ್ನು ವಿಭಜಿಸಲು ಪ್ರಯತ್ನ ಮಾಡಿದರು. ವಿಭಜನೆ ಮಾಡಲು ಕೋಲಾರ ಜಿಲ್ಲೆಯ ಯಾವ ನಾಯಕರ ವಿರೋಧವು ಇರಲಿಲ್ಲ, ವಿರೋಧ ಇದ್ದದ್ದು ವಿಭಜನೆ ಮಾಡಲು ಹೋದ ವಿಧಾನ ಸರಿ ಇರಲಿಲ್ಲ ಹಾಗಾಗಿ ವಿರೋಧ ಮಾಡಿದ್ದರು.
ಚಿಕ್ಕಬಳ್ಳಾಪುರದಲ್ಲಿ ಸುಮಾರು ೨೨೦ ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡಲಾಗಿತ್ತು, ಆಗ ೮೫ ಕೋಟಿ ಸಾಲ ಮಾಡಲಾಗಿತ್ತು ಈಗ ಅದು ಬಹುತೇಕ ತೀರಿಸಲಾಗಿದೆ, ಅದಾಗಿಯೂ ಸುಮಾರು ೨೦೦ ಕೋಟಿ ಸಂಪನ್ಮೂಲ ನಮ್ಮ ಬಳಿ ಇದೆ, ಕೋಲಾರದಲ್ಲಿ ಎಂ.ವಿ. ಕೃಷ್ಣಪ್ಪ ನವರ ಹೆಸರಿನಲ್ಲಿ ೧೮೫ ಕೋಟಿ ವೆಚ್ಚದಲ್ಲಿ ಹೊಸ ಮೆಗಾ ಡೈರಿ ನಿರ್ಮಾಣ ಮಾಡಲಾಗುವುದು, ಅದೇ ರೀತಿ ೫೦ ಕೋಟಿ ವೆಚ್ಚದಲ್ಲಿ ಐಸ್ ಕ್ರೀಮ್ ಪ್ಲಾಂಟ್ ಅನ್ನು ಚಿಂತಾಮಣಿಯಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.