ವಿದ್ಯಾರ್ಥನಿಗೆ ಮನಬಂದ0ತೆ ಥಳಿಸಿದ ಪ್ರಾಂಶುಪಾಲೆ
1 min readವಿದ್ಯಾರ್ಥನಿಗೆ ಮನಬಂದ0ತೆ ಥಳಿಸಿದ ಪ್ರಾಂಶುಪಾಲೆ
ಮಕ್ಕಳ ದಿನಾಚರಣೆ ದಿನವೇ ಹೀನ ಕೃತ್ಯ ಎಸಗಿದ ಶಾಲೆ ವಿರುದ್ಧ ಆಕ್ರೋಶ
5ನೇ ತರಗತಿ ವಿದ್ಯಾರ್ಥಿನಿ ಮೇಲೆ ಪೈಶಾಚಿಕ ಕೃತ್ಯ
ವಿಜಯಪುರ ವಿಸ್ಡಮ್ ಇಂಗ್ಲಿಷ್ ಶಾಲೆ ಪ್ರಾಂಶುಪಾಲರಿ0ದ 5ನೇ ತರಗತಿ ವಿದ್ಯಾರ್ಥಿನಿಯನ್ನು ಮನಬಂದ0ತೆ ಕಳಿಸಿರುವ ಘಟನೆ ವರದಿಯಾಗಿದೆ. ಮಕ್ಕಳ ದಿನಾಚರಣೆ ದಿನವೇ ಖಾಸಗಿ ಶಾಲೆಯಲ್ಲಿ ಹೀನ ಕೃತ್ಯ ನಡೆದಿದ್ದು, ಶಾಲಾ ಪ್ರಾಂಶುಪಾಲೆ ಮಗನ ಸೇವೆ ಮಾಡಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ಮೇಲೆ ದರ್ಪ ತೋರಲಾಗಿದೆ.
ವಿದ್ಯಾರ್ಥಿಯನ್ನ ಬೆತ್ತದಲ್ಲಿ ಥಳಿಸಿರುವ ಪ್ರಿನ್ಸಿಪಾಲ್ ಉಷಾ ಕಿರಣ್ ಎಂಬುವರು ಪೈಶಾಚಿಕತೆ ಮೆರೆದಿದ್ದಾರೆ. ವಿಜಯಪುರದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಡಮ್ ಇಂಗ್ಲಿಷ್ ಶಾಲೆಯಲ್ಲಿ ಘಟನೆ ನಡೆದಿದೆ. ವಿಜಯಪುರದ ಪ್ರಭಾವತಿ ಹಾಗೂ ಆಂಜಿನಪ್ಪ ದಂಪತಿಯ ಮಗು ೫ನೇ ತರಗತಿ ವಿದ್ಯಾರ್ಥಿನಿ ಭವ್ಯ ಹಲ್ಲೆಗೊಳಗಾದ ಮಗುವಾಗಿದ್ದಾರೆ. ಮಗಳ ಮೇಲೆ ಹಲ್ಲೆ ಮಾಡಿರೋ ಪ್ರಿನ್ಸಿಪಾಲ್ ನಡೆ ಖಂಡಿಸಿ ಪೋಷಕರಿಂದ ಶಾಲೆಗೆ ಮುತ್ತಿಗೆ ಹಾಕಿ ಪ್ರಿನ್ಸಿಪಾಲ್‌ಗೆ ದಿಗ್ಬಂಧನೆ ಹಾಕಿದ ಘಟನೆ ಇಂದು ನಡೆಯಿತು.
ಶಾಲೆಗೆ ಆಗಮಿಸಿದ ಪ್ರಿನ್ಸಿಪಾಲ್ ಉಷಾ ಕಿರಣ್ ಅವರನ್ನು ರಸ್ತೆಯಲ್ಲಿ ನಿಲ್ಲಿಸಿ ಶಾಲೆಯೊಳಗೆ ಬಿಡದೆ ಪೋಷಕರು ಗಲಾಟೆ ಮಾಡಿದ ಘಟನೆ ನಡೆಯಿತು. ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಪ್ರಾಂಶುಪಾಲರ ನಡುವೆ ಮಾತಿನ ಚಕಮುಕಿ ನಡೆಯಿತು. ಈ ಸಂದರ್ಭದಲ್ಲಿ ಭವ್ಯ ತಂದೆ ಅಂಜನಪ್ಪ ಮಾತನಾಡಿ, ಪ್ರಾಂಶುಪಾಲರಿಗೆ ಮಕ್ಕಳನ್ನು ಹೊಡೆಯುವ ಹಕ್ಕು ಯಾರು ಕೊಟ್ಟವರು, ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ, ಕೇಳಲು ಹೋದರೆ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿನಿ ತಾಯಿ ಪ್ರಭಾವತಿ ಮಾತನಾಡಿ, ನನ್ನ ಮಗಳನ್ನು ಪ್ರಾಂಶುಪಾಲರ ಮಗನ ಸೇವೆ ಮಾಡಲಿಲ್ಲ ಎಂದು ಯಾವುದೇ ತಪ್ಪು ಮಾಡದಿದ್ದರೂ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕಿದರು. ಪ್ರಾಂಶುಪಾಲೆ ಉಷಾ ಕಿರಣ್ ಮಾತನಾಡಿ, ಕಳೆದ ಮೂರು ತಿಂಗಳಿನಿ0ದ ಶಾಲೆಯಲ್ಲಿ ಅಂಗವಿಕಲ ವಿದ್ಯಾರ್ಥಿಗಳನ್ನು ಮುಟ್ಟಬೇಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದರು. ಇದಕ್ಕೆ ನಾನು ಬುದ್ಧಿ ಹೇಳುತ್ತಿದ್ದೆ, ನಿನ್ನೆ ಅಂಗವಿಕಲ ವಿದ್ಯಾರ್ಥಿಯನ್ನು ಮುಟ್ಟಬೇಡಿ ಎಂದು ಎಲ್ಲರಿಗೂ ಹೇಳುತ್ತಿದ್ದ ಭವ್ಯಾಗೆ ಹೊಡೆದಿರುವುದು ನಿಜ, ಪೋಷಕರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.
ಶಾಲೆ ಮುಂದೆ ಪ್ರಿನ್ಸಿಪಾಲ್ ಉಷಾ ಕಿರಣ್‌ಗೆ ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪೋಷಕರು, ಮಗು ಮೇಲೆ ದರ್ಪ ತೋರಿದ್ದಕ್ಕೆ ಶಾಲೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ವಿಜಯಪುರ ಪೊಲೀಸರು ಬಂದು ಪ್ರತಿಭಟನೆ ಮಾಡುತ್ತಿದ್ದ ಪೋಷಕರನ್ನು ಸಮಾಧಾನ ಪಡಿಸಿದರು. ಈ ಬಗ್ಗೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲೆ ಉಷಾ ಕಿರಣ ವಿರುದ್ಧ ಪ್ರಕರಣ ದಾಖಲಾಗಿದೆ.