ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ರೋಲ್ ಕಾಲ್ ಗಿರಾಕಿಗಳ ಹೆಸರು ಬಹಿರಂಗ ಪಡಿಸಲು ಮನವಿ

1 min read

ರೋಲ್ ಕಾಲ್ ಗಿರಾಕಿಗಳ ಹೆಸರು ಬಹಿರಂಗ ಪಡಿಸಲು ಮನವಿ

ವೆಂಕಟರಮಣಪ್ಪ ಅವರಿಂದ ಸುದ್ದಿಗೋಷ್ಠಿಯಲ್ಲಿ ಮನವಿ

ಹಣ ಕೇಳಿದ್ದರೆ ಹೆಸರು ಬಹಿರಂಗಪಡಿಸಲು ಒತ್ತಾಯ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಪರಿಶಿಷ್ಟರ ಬಗ್ಗೆ ರೋಲ್ ಕಾಲ್ ಗಿರಾಕಿಗಳು, ದುಡ್ಡು ಕೊಡದಿದ್ದರೆ ಇಂಥಹ ಹೇಳಿಕೆ ನೀಡುತ್ತಾರೆ ಎಂದು ಹೇಳಿದ್ದು, ಯಾರು ದುಡ್ಡು ಕೇಳಿದರು, ದುಡ್ಡು ಕೇಳಿದವರ ಹೆಸರು ಬಹಿರಂಗಪಡಿಸಲು ಮನವಿ ಮಾಡುವುದಾಗಿ ಸಮತಾ ಸೈನಿಕ ದಳದ ವೆಂಕಟರಮಣಪ್ಪ ಹೇಳಿದರು.

ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ವೆಂಕಟರಮಣಪ್ಪ, ಕಳೆದ ನವೆಂಬರ್ ೧೧ರಂದು ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಸರ್ಕಾರಿ ಕಾರ್ಯಕ್ರಮ ಆಗಿದ್ದು, ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಹೆಸರು ಮುದ್ರಿಸಲಾಗಿತ್ತು, ಆದರೆ ಜಯಂತಿ, ಮೂರು ವರ್ಷಗಳಿಂದ ಸರ್ಕಾರ ಮಾಡುತ್ತಿದ್ದು, ಮೂರು ವರ್ಷಗಳಿಂದ ಯಾವುದೇ ಜನಪ್ರತಿನಿಧಿ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ನೋವು ತೋಡಿಕೊಂಡರು.

ಈ ಬಾರಿ ನಡೆದ ಓಬವ್ವ ಜಯಂತಿಯಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹೊರತುಪಡಿಸಿ, ಉಳಿದ ಜನಪ್ರತಿನಿಧಿಗಳು ಬಂದಿಲ್ಲ. ಇದರಿಂದ ನೋವಾಗಿ ಜನಪ್ರತಿನಿಧಿಗಳು ಬಂದಿದ್ದರೆ ಉತ್ತಮವಾಗಿತ್ತು, ಬಾರದಿರುವುದಕ್ಕೆ ಬೇಸರವಿದೆ ಎಂದಿದ್ದೇವೆ, ಯಾವುದೇ ಜನಪ್ರತಿನಿಧಿ ವಿರುದ್ಧ ಆರೋಪ ಮಾಡಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ನಾವು ಬಹಿರಂಗವಾಗಿ ತನು, ಮನ, ಧನ ಅರ್ಪಿಸಿ ಮನೆಮನೆಗೆ ತೆರಳಿ ಮತ ಹಾಕಿಸಿದ್ದೇವೆ. ಶಾಸಕರು ಕಾರ್ಯಕ್ರಮದಲ್ಲಿ ಇದ್ದಿದ್ದರೆ ನಮಗೆ ಇನ್ನಷ್ಟು ಆನಂದವಾಗುತ್ತಿದ್ದು ಎಂಬ ನಮ್ಮ ಆಂತರಿಕ ಆಳಲು ತೋಡಿಕೊಂಡಿದ್ದೇವೆ ಎಂದರು.

ಸ್ಥಳೀಯ ಶಾಸಕರಾಗಿ ನಮ್ಮ ನೋವಿಗೆ ಸ್ಪಂದಿಸಬೇಕು, ತಾವು ಇಲ್ಲ ಎಂಬ ಕಾರಣಕ್ಕೆ ಮತ ಕೊಟ್ಟಿರುವ ಜನರು ನೋವು ಪಟ್ಟಿದ್ದಾರೆ, ತಮ್ಮ ಮೇಲೆ ಜನರಿಗೆ ಇರುವ ಅಭಿಮಾನಕ್ಕೆ ಬೆಲೆ ಕಟ್ಟಲಾಗದು ಎಂಬ ಮನೋಭಾವ ನಿಮ್ಮಲ್ಲಿ ಬರಬೇಕಿತ್ತು, ಆದರೆ ತಾವು ರೋಲ್ ಕಾಲ್ ಗಿರಾಕಿಗಳು, ದುಡ್ಡು ಕೊಡದೆ ಇದ್ದ ಕಾರಣಕ್ಕೆ ಮಾತನಾಡುತ್ತಾರೆ, ಅವರೊಬ್ಬರೇ ದಲಿತರಲ್ಲ ಎಂಬ ಹೇಳಿಕೆ ನೀಡಿರುವುದು ನಮ್ಮ ಮನಸ್ಸಿಗೆ ಘಾಸಿಯಾಗಿದೆ ಎಂದು ಹೇಳಿದರು.

ಒನಕೆ ಓಬವ್ವ ಜಯಂತಿ ಸಮಿತಿಯಲ್ಲಿ ಜಿಲ್ಲೆಯ 20 ಜನರಿದ್ದು, ಅವರಾಗಲಿ ಅಥವಾ ಜಿಲ್ಲೆಯ ಯಾರೇ ಆಗಲಿ ನಿಮ್ಮ ಬಳಿ ಬಂದು ಕೇವಲ ಒಂದು ರೂಪಾಯಿ ಕೇಳಿದ್ದರು ಅದಕ್ಕೆ ನೇರ ಹೊಣೆ ನಾವೇ, ಅವರ ಹೆಸರು ಬಹಿರಂಗಪಡಿಸಿದರೆ ನಾವು ನಿಮಗೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇವೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *