ಬಂಜರು ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದ ಯುವ ರೈತ
1 min readಮಾಲೂರು ತಾಲೂಕಿನಲ್ಲಿ ಯಾವುದೇ ನದಿ ನಾಲೆಗಳಿಲ್ಲದೆ ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ರೈತರು ಬಿತ್ತನೆ ಮಾಡಿದ ಹೊಲಗಳು ಒಣಗುತ್ತಿದ್ದು ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಸಮರ್ಪಕ ವಿದ್ಯುತ್ತು ಸರಬರಾಜು ಇಲ್ಲದೆ ರೈತರು ತೋಟಗಳಲ್ಲಿ ಹಾಕಿರುವ ಬೆಳೆಗಳು ಸಹ ಒಣಗುತ್ತಿವೆ ಇದರಿಂದ ಬೆಳೆಗಳು ಕೈಗೆ ಬಾರದೆ ನಷ್ಟವನ್ನು ಅನುಭವಿಸಿ ಬರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಬರದ ನಡುವೆ ಮಾರಸಂದ್ರ ಗ್ರಾಮದ ಬಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿನ್ನ ಸ್ವಾಮಿಗೌಡ ಹಾಗೂ ಅವರ ಪುತ್ರ ತೇಜಸ್ ಗೌಡ , ತಮ್ಮ ನಾಲ್ಕೂವರೆ ಎಕರೆ ಜಮೀನಿನಲ್ಲಿ ಟಮೋಟೊ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು ಇದರಿಂದ ನಷ್ಟ ಹೊಂದಿದ್ದ ಇವರು ಈ ಬೆಳೆಗಳನ್ನು ಬೆಳೆಯಲು ಸಾಕಷ್ಟು ಬಂಡವಾಳ ಹಾಗೂ ಕೂಲಿ ಕಾರ್ಮಿಕರ ಸಂಖ್ಯೆ ಅವಶ್ಯಕತೆ ಇತ್ತು. ಈ ಬೆಳೆಗಳನ್ನು ಬೆಳೆಯುವುದನ್ನು ನಿಲ್ಲಿಸಿ ತಮ್ಮ ಜಮೀನಿಗೆ ವರ್ತೂರು ಕೆರೆಯ ಮಣ್ಣನ್ನು ಹೊಡೆಸಿ ಜಮೀನಿನ ಫಲವತ್ತತೆಯನ್ನು ಹೆಚ್ಚಿಸಿ ಒಂದು ಎಕೆರೆಗೆ ೮೦೦ ರಿಂದ ೧೦೦೦ ಏಲಕ್ಕಿ ಬಾಳೆಯ ಗಡ್ಡೆ ಸಸಿ ಚಿಗುರು ನಾಟಿ ಮಾಡಿ ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ೧೩ ತಿಂಗಳುಗಳ ಕಾಲ ಬಾಳೆ ಬೆಳೆಯನ್ನು ಪೋಷಿಸಿದ್ದಾರೆ. ಬಾಳೆಕಾಯಿ ಕಟಾವಿಗೆ ಬಂದಿದ್ದು ಒಂದು ಗೊನೆ ಸುಮಾರು ಹದಿನೈದು ಕೆಜಿಯಿಂದ ೨೦ ಕೆಜಿ ವರೆಗೆ ಇಳುವರಿ ನೀಡಿದೆ. ಲಾಲ್ ಬಾಗ್ ಹಾಪ್ ಕಾಮ್ಸ್ ಮಾರುಕಟ್ಟೆಗೆ ಬಾಳೆ ಕಾಯನ್ನು ಹಾಕುತ್ತಿದ್ದು ಒಂದು ಕೆಜಿ ೬೫ ರೂಗಳಂತೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿದೆ.
ಇತರೆ ಬೆಳೆಗಳನ್ನು ಹಾಕಿ ನಷ್ಟ ಅನುಭವಿಸಿದ್ದ ನಾವು ಕೂಲಿ ಕಾರ್ಮಿಕರು ಸಿಗದ ಕಾರಣ ನಮ್ಮ ತೋಟದಲ್ಲಿ ಏಲಕ್ಕಿ ಬೆಳೆಯನ್ನು ನಾಲ್ಕೂವರೆ ಎಕರೆಯಲ್ಲಿ ಬೆಳೆದಿದ್ದೇವೆ ಅಲ್ಲದೆ ಮತ್ತೊಂದು ತಂಡವಾಗಿ ಮೂರುವರೆ ಎಕರೆಗೆ ಬಾಳೆ ಗಡ್ಡೆ ಸಸಿಗಳನ್ನು ನಾಟಿ ಮಾಡಿದ್ದು ಮೂರು ತಿಂಗಳ ಸಸಿಗಳಾಗಿವೆ
ಏಲಕ್ಕಿ ಬಾಳೆಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದ್ದು, ರೈತರು ನಷ್ಟದ ಬೆಳೆಗಳನ್ನು ಹಾಕುವುದು ಬಿಟ್ಟು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಬೆಳೆಗಳನ್ನು ಹಾಕಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದು ಜಿ.ಪಂ. ಮಾಜಿ ಸದಸ್ಯ ಚಿನ್ನಸ್ವಾಮಿಗೌಡ ಹೇಳುತ್ತಾರೆ.
https://www.youtube.com/watch?v=TOhkY29i-nE