ಗೌರಿಬಿದನೂರು ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ
1 min readಗೌರಿಬಿದನೂರು ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ
ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಶಾಸಕರ ಪರಿಶೀಲನೆ
ನೂತನ ಬೆಡ್ ಶೀಟ್ ಖರೀದಿಗೆ ಶಾಸಕರ ಸೂಚನೆ
ಗೌರಿಬಿದನೂರು ನಗರ ಹೊರವಲಯದ ತಾಯಿ – ಮಗು ಆಸ್ಪತ್ರೆಗೆ ಇಂದು ಬೆಳಿಗ್ಗೆ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಿದರು.
ಗೌರಿಬಿದನೂರು ತಾಯಿ ಮಗು ಆಶ್ಪತ್ರೆಗೆ ಇಂದು ದಿಢೀರ್ ಭೇಟಿ ನೀಡಿದ ಶಾಸಕ ಪುಟ್ಟಸ್ವಾಮಿಗೌಡ, ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿ, ಚಿಕಿತ್ಸೆಗೆ ವೈದ್ಯರು, ಸಿಬ್ಬಂದಿ ಸ್ಪಂದಿಸುತ್ತಿರುವ ರೀತಿ, ಹಣ ಕೇಳುತ್ತಿರುವ ಬಗ್ಗೆ, ಸ್ವಚ್ಛತೆ, ಊಟ, ಹಾಲು, ಬ್ರೆಡ್ ವಿತರಣೆ ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.
ಹಾಸಿಗೆಗೆ ಹಾಕಿರುವ ಬೆಡ್ ಶೀಟ್ ಗಳು ಕೊಳಕಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಕೂಡಲೇ ಹೊಸ ಬೆಡ್ ಶೀಟ್ ಗಳ ಖರೀದಿಗೆ ಸೂಚಿಸಿದರು. ಖಾಸಗಿ 108 ಆಂಬ್ಯುಲೆನ್ಸ್ ಚಾಲಕರ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ಇಡೀ ಆಸ್ಪತ್ರೆಯ ಕಿಟಕಿಗಳಿಗೆ ದಾನಿಗಳ ನೆರವಿನಲ್ಲಿ ಅಳವಡಿಸಿರುವ ಸೊಳ್ಳೆ ಮೆಷ್ ಬಗ್ಗೆ ಶ್ಲಾಘಿಸಿದರು.
ನಂತರ ಆಸ್ಪತ್ರೆ ಸಿಬ್ಬಂದಿಯ ಸಭೆಯನ್ನು ಪ್ರತ್ಯೇಕವಾಗಿ ನಡೆಸಿದರು, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ದರೀದ್, ಮಾಜಿ ಸದಸ್ಯ ಡಿ.ಜೆ.ಚಂದ್ರಮೋಹನ್, ಶ್ರೀನಿವಾಸಗೌಡ, ಜಯರಾಂ, ನಾಗಾರ್ಜುನ ಇದ್ದರು.