ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಚಿಕ್ಕಬಳ್ಳಾಪುರ ಎಸಿ ಕಚೇರಿ ಜಫ್ತಿ ಮಾಡಿದ ಸಂತ್ರಸ್ಥರು

1 min read

ಚಿಕ್ಕಬಳ್ಳಾಪುರ ಎಸಿ ಕಚೇರಿ ಜಫ್ತಿ ಮಾಡಿದ ಸಂತ್ರಸ್ಥರು

ಪರಿಹಾರ ನೀಡುವಲ್ಲಿ ತಡವಾದ ಕಾರಣ ಕೋರ್ಟ್ ಆದೇಶ

ಎಸಿ ಕಚೇರಿಯ ಕಂಪ್ಯೂಟರ್, ಕುರ್ಚಿ ಹೊರ ಹಾಕಿದ ಜನ

ಬಾಗೇಪಲ್ಲಿ ಡಿವಿಜಿ ರಸ್ತೆ ಸಂತ್ರಸ್ಥರಿ0ದ ಎಸಿ ಕಚೇರಿ ಜಫ್ತಿ

ಅದು ಉಪ ವಿಭಾಗಾಧಿಕಾರಿ ಕಚೇರಿ, ಅಲ್ಲಿರುವ ಕುರ್ಚಿ, ಮೇಜು, ಕಂಪ್ಯೂಟರ್‌ಗಳನ್ನು ಸಾರ್ವಜನಿಕರು ನುಗ್ಗಿ ಹೊತ್ತೊಯ್ಯುತ್ತಿದ್ದಾರೆ. ಉಪ ವಿಭಾಗಾಧಿಕಾರಿ ಸೇರಿ ಇತರೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಸರ್ಕಾರಿ ಕಚೇರಿಯ ಪೀಠೋಪಕರಣ, ಯಂತ್ರೋಪಕರಣ ಹೊರ ಸಾಗಿಸಲಾಗುತ್ತಿದೆ. ಆದರೂ ಯಾವುದೇ ಅಧಿಕಾರಿ ತಡೆಯಲು ಮುಂದಾಗಲಿಲ್ಲ. ಯಾಕೆ ಅಂತೀರಾ, ಈ ಸ್ಟೋರಿ ನೋಡಿ.

ವೀಕ್ಷಕರೇ ಅದು ಉಪ ವಿಭಾಗಾಧಿಕಾರಿ ಕಚೇರಿ. ಅಲ್ಲಿರುವ ಕುರ್ಚಿ ಮೇಜು, ಕಂಪ್ಯೂಟರ್ ಸೇರಿದಂತೆ ಎಲ್ಲ ವಸ್ತುಗಳನ್ನು ಸಾರ್ವಜನಿಕರು ಹೊರ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರೂ ತಡೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಹಾಗಂತ ಇದೇನು ದೊಂಬಿಯಲ್ಲ, ಬದಲಿಗೆ ನ್ಯಾಯಾಲಯದ ಆದೇಶ. ಹೌದು, ಪರಿಹಾರ ನೀಡಬೇಕಾದ ಸರ್ಕಾರ ಪದೇ ಪದೇ ತಡ ಮಾಡುತ್ತಿದ್ದ ಕಾರಣಕ್ಕೆ ಕೋರ್ಟ್ ನೀಡಿದ ಆದೇಶದ ಮೇರೆಗೆ ಎಸಿ ಕಚೇರಿಯನ್ನು ಇಂದು ಸಂತ್ರಸ್ಥರು ಜಫ್ತಿ ಮಾಡಿದರು. ಹಾಗಾದರೆ ಯಾವುದು ಆ ಕಚೇರಿ ಅಂತೀರಾ, ಬೇರೆ ಯಾವ ಊರಿನ ಎಸಿ ಕಚೇರಿಯಲ್ಲ, ಅದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಕಚೇರಿ.

ಇಲ್ಲಿ ಕಾಣ್ತಾ ಇದೆಯಲ್ಲ, ಕುರ್ಚಿ, ಮೇಜು, ಕಂಪ್ಯೂಟರ್‌ಗಳನ್ನು ಹೊರ ಸಾಗಿಸುತ್ತಿರೋದು. ಹಾಗೆ ಕಚೇರಿಯಿಂದ ಹೊರತಂದ ಪೀಠೋಪಕರಣ ಮತ್ತು ಯಂತ್ರೋಪಕರಣಗಳನ್ನು ಅದೇ ಕಚೇರಿಯ ಮುಂದೆ ಇಢಲಾಗುತ್ತಿದೆ. ಹಾಗೆ ಇಡಲು ಕಾರಣ ನ್ಯಾಯಾಲಯದ ಆದೇಶ. ಕಳೆದ ಹಲವು ವರ್ಷಗಳಿಂದ ಆಸ್ತಿ ಕಳೆದುಕೊಂಡವರಿಗೆ ನೀಡಬೇಕಾದ ಪರಿಹಾರ ನೀಡದೆ ಮುಂದೂಡುತ್ತಿರುವ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ನಿರ್ಲಕ್ಷದ ವಿರುದ್ಧ ಕೋರ್ಟ್ ಕೆಂಡಾಮ0ಡಲವಾಗಿದೆ. ಅದೇ ಕಾರಣಕ್ಕೆ ಎಸಿ ಕಚೇರಿಯನ್ನು ಜಫಿ ಮಾಡಲು ಆದೇಶ ನೀಡಿದೆ.

ಕೋರ್ಟಿನ ಆದೇಶದೊಂದಿಗೆ ಬಂದ ಕಟ್ಟಡ ಕಳೆದುಕೊಂಡ ಸಂತ್ರಸ್ಥರು ನ್ಯಾಯಾಲಯದ ಸಿಬ್ಬಂದಿಯನ್ನು ಕರೆತಂದು ಎಸಿ ಕಚೇರಿಯಲ್ಲಿದ್ದ ಕುರ್ಚಿ, ಮೇಜು, ಕಂಪ್ಯೂಟರ್‌ಗಳನ್ನು ಹೊರ ಸಾಗಿಸಿದರು. ಹಾಗಾಗಿ ಅಧಿಕಾರಿಗಳು ಕೂಡಾ ತಡೆಯುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಪರಿಹಾರ ನೀಡದ ಆಡಳಿತ ವ್ಯವಸ್ಥೆಯ ನಿರ್ಲಕ್ಷಕ್ಕೆ ಇದು ಕನ್ನಡಿಯಾಗಿದ್ದು, ನಿಜವಾದ ದಲಾನುಭವಿಗಳಿಗೆ ಪರಿಹಾರ ವಿತರಿಸಲು ತಡ ಮಾಡಿದ ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಾಲಯ ಛಡಿ ಏಟು ನೀಡಿದೆ.

ಬಾಗೇಪಲ್ಲಿ ನಿಮಗೆಲ್ಲ ಗೊತ್ತಿರಬಹುದು. ಅದೇ ಬಾಗೇಪಲ್ಲಿಯಲ್ಲಿರುವ ಏಕೈಕ ಮುಖ್ಯ ರಸ್ತೆ ಡಿವಿಜಿ ರಸ್ತೆ. ಈ ರಸ್ತೆ ಅಗಲೀಕರಣ ಮಾಡಲು 2006ರಲ್ಲಿ ನೋಟಿಫಿಕೇಷನ್ ಜಾರಿಗೊಳಿಸಲಾಗಿದೆ. ಆದರೆ ತಮಗೆ ಪರಿಹಾರ ನೀಡಬೇಕು ಎಂದು ಅಂಗಡಿಗಳ ಮಾಲೀಕರು ಕೋರ್ಟಿನ ಮೊರೆ ಹೋಗಿದ್ದಾರೆ. ಹಾಗಾಗಿ 2009ರಲ್ಲಿಯೇ ನ್ಯಾಯಾಲಯ ಪರಿಹಾರ ನೀಡಿ, ಕಟ್ಟಡಗಳ ತೆರುವು ಮಾಡುವಂತೆ ಆದೇಶಿಸಿದೆ. ಆದರೂ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ.

ನಂತರ ಪರಿಹಾರ ಸಾಲುವುದಿಲ್ಲ ಎಂದು ಅಂಗಡಿ ಮಾಲೀಕರು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. 2009ರಿಂದ ಪರಿಹಾರಕ್ಕಾಗಿ ನಡೆದ ವಿಚಾರಣೆ ಕಳೆದ ನಾಲ್ಕು ತಿಂಗಳ ಹಿಂದೆ ಪೂರ್ಣಗೊಂಡಿದ್ದು, ಕಟ್ಟಡ ಕಳೆದುಕೊಂಡ ಅಂಗಡಿ ಮಾಲೀಕರಿಗೆ ಕೂಡಲೇ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ. ಈ ಸಂಬ0ಧ ಉಪ ವಿಭಾಗಾಧಿಕಾರಿಗಳಿಗೂ ನ್ಯಾಯಾಲಯ ಸೂಚನೆ ನೀಡಿದೆ. ಆದರೂ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳು ಪರಿಹಾರ ನಡೀಉವತ್ತ ಗಮನ ನೀಡಿಲ್ಲ ಎಂಬುದು ಸಂತ್ರಸ್ಥರ ಆರೋಪವಾಗಿದೆ.

ಇದರಿಂದ ರೋಸಿಹೋದ ಕಟ್ಟಡ ಮಾಲೀಕರು, ಪರಿಹಾರ ನೀಡದ ಬಗ್ಗೆ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು, ಎಸಿ ಕಚೇರಿ ಜಫ್ತಿ ಮಡುವಂತೆ ನ್ಯಾಯಾಲಯ ಆದೇಶಿಸಿದೆ. ಇದರಿಂದಾಗಿ ಬಾಗೇಲ್ಲಿಯ 9 ಮಂದಿ ಕಟ್ಟಡ ಕಳೆದುಕೊಂಡವರು ಬಂದು ಇಂದು ಚಿಕ್ಕಬಳ್ಳಾಪುರ ಎಸಿ ಕಚೇರಿಯ ಪಿಠೋಪಕರಣ ಮತ್ತು ಯಂತ್ರೋಪಕರಣಗಳನ್ನು ಹೊರ ಸಾಗಿಸುವ ಮೂಲಕ ಜಫ್ತಿ ಮಾಡಿದರು. ಆದರೆ ಉಪ ವಿಭಾಗಾಧಿಕಾರಿ ಕಚೇರಿಯಿಂದ ಮುಂದಿನ ಎರಡು ತಿಂಗಳಲ್ಲಿ ಪರಿಹಾರ ನೀಡುವ ಮುಚ್ಚಳಿಕೆಯನ್ನು ನ್ಯಾಯಾಲಯಕ್ಕೆ ಬರೆದುಕೊಡುವ ಮೂಲಕ ಮತ್ತೆ ಪೀಠೋಪಕರಣ ಮತ್ತು ಯಂತ್ರೋಪಕರಣಗಳು ವಾಪಸ್ ಕೇಚಿರಗೆ ಸೇರಿದವು.

ಇನ್ನು ಕಟ್ಟಡ ಕಳೆದುಕೊಂಡು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕೋರ್ಟಿಗೆ ಅಳೆದ ಸತೀಶ್ ಬಾಬು ಮಾತನಾಡಿ, 2011ರಲ್ಲಿ ಅಲ್ಪ ಪರಿಹಾರ ನೀಡಿದ್ದರು, ಅದು ಸಾಲದು ಅಂತ ಕೋರ್ಟಿನ ಮೊರೆ ಹೋಗಿದ್ದೆವು. ಕಳೆದ ನಾಲ್ಕು ತಿಂಗಳ ಹಿಂದೆ ಕೋರ್ಟ್ ನೋಟಿಸ್ ನೀಡಿತ್ತು, ಎರಡು ತಿಂಗಳ ಕಾಲಾವಕಾಶವನ್ನು ಉಪವಿಭಾಗಾಧಿಕಾರಿಗಳು ಕೇಳಿದ್ದರು. ಇದೀಗ ಕೋರ್ಟ್ ಎಸಿ ಕಚೇರಿ ಜಫ್ತಿಗೆ ಆದೇಶ ಮಾಡಿದೆ ಹಾಗಾಗಿ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಹೇಳಿದರು.

ಮತ್ತೊಬ್ಬ ಕಟ್ಟಡ ಮಾಲೀಕ ಶ್ರೀನಿವಾಸರೆಡ್ಡಿ ಮಾತನಾಡಿ, ಬಾಗೇಪಲ್ಲಿ ಡಿವಿಜಿ ರಸ್ತೆಯ ಎರಡೂ ಬದಿ ಇದ್ದ 390 ಕಟ್ಟಡಗಳನ್ನು ಕೆಡವಿ, ರಸ್ತೆ ಅಗಲೀಕರಣ ಮಾಡಲು 2006ಲ್ಲಿ ನೋಟಿಫಿಕೇಷನ್ ಆ?ಇತು. 2009ರಲ್ಲಿ ಕಟ್ಟಡಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದರ ವಿರುದ್ಧ 32 ಮಂದಿ ಮಾತ್ರ ಕೋರ್ಟಿಗೆ ಹೋಗಿದ್ದೆವು. 890 ರುಪಾಯಿ ನೀಡಲು ಇದೀಗ ನ್ಯಾಯಲಯ ಆದೇಶ ನೀಡಿದೆ. ಆದೇಶ ಮಾಡಿ ಮೂರು ವರ್ಷ ಆದರೂ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

2006ರಿಂದಲೂ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ, ತಮಗೊಬ್ಬರಿಗೇ ೩ ಕೋಟಿ ಬರಬೇಕು, ಎಲ್ಲರದೂ ಸೇರಿ 5 ಕೋಟಿಗೂ ಹೆಚ್ಚು ಹಣ ಪರಿಹಾರವಾಗಿ ಬರಬೇಕು ಅದು ಸಕಾಲದಲ್ಲಿ ನೀಡದ ಕಾರಣ ನ್ಯಾಯಾಲಯ ಎಸಿ ಕಚೇರಿ ಜಫ್ತಿಗೆ ಆದೇಶ ನೀಡಿದೆ. ಹಾಗಾಗಿ ಇಂದು ಜಪ್ತು ಮಾಡಲಾಗುತ್ತಿದೆ ಎಂದರು. ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಕಚೇರಿ ಸಾರ್ವಜನಿಕರಿಂದಲೇ ಜಫ್ತಿಗೆ ಒಳಗಾಗಿದ್ದು, ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ದಶಕಗಳ ಕಾಲ ಸಾಮಾನ್ಯರು ಕೋರ್ಟಿಗೆ ಅಳೆಯುವುದಿಲ್ಲ ಎಂಬ ಅಧಿಕಾರಿಗಳ ನಿರ್ಲಕ್ಷಕ್ಕೆ ಇದೀಗ ಸಂತ್ರಸ್ಥರ ಹಠ ಮತ್ತು ನ್ಯಾಯಾಲಯದ ಆದೇಶ ಛಡಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.

About The Author

Leave a Reply

Your email address will not be published. Required fields are marked *